ಪೇಪರ್ ಹಂಚುವ ಯುವಕನ ಸಮಯ ಪ್ರಜ್ಞೆ-ತಪ್ಪಿದ ಭಾರಿ ದುರಂತ-missed a major tragedy

Suddilive || Shivamogga

ಪೇಪರ್ ಹಂಚುವ ಯುವಕನ ಸಮಯ ಪ್ರಜ್ಞೆ-ತಪ್ಪಿದ ಭಾರಿ ದುರಂತ-A young man distributing papers showed a great sense of timing and missed a major tragedy.

Major, Tragedy

ತಾಲೂಕಿನ ಆಯನೂರು ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ಪತ್ರಿಕೆ ಹಂಚುವ ಬಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ. 

ಸೋಮವಾರ ಮುಂಜಾನೆ 6.40ಕ್ಕೆ ಶ್ರೇಯಸ್ ಮಿರಜ್ಕರ್ ಪತ್ರಿಕೆ ಹಂಚುವಾಗ ಗ್ರಾಮದ ವಿನಾಯಕ ವೃತ್ತದಲ್ಲಿರುವ ಕಟ್ಟಡವೊಂದರ ವಿದ್ಯುತ್ ಮೀಟರ್ ಬೋರ್ಡ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿರುವುದನ್ನು ಗಮನಿಸಿದ್ದಾನೆ. 

ಕೂಡಲೇ ಪೊಲೀಸರ ಗಮನಕ್ಕೆ ತಂದಿದ್ದಾನೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಪೊಲೀಸರು ಅಗ್ನಿಶಾಮಕ ಅನಿಲ ಬಳಸಿ ಬೆಂಕಿ ನಂದಿಸಿದ್ದಾರೆ. ಯುವಕನ ಈ ಸಮಯಪ್ರಜ್ಞೆಗೆ ಆಯನೂರಿನ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

missed a major tragedy

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close