Suddilive || Bhadravathi
ಬೆಳ್ಳಂಬೆಳಿಗ್ಗೆ ನಡೆದಿದ್ದ ಸುಲಿಗೆ ಪ್ರಕರಣದ ಆರೋಪಿಗಳು ಅಂದರ್-The accused in the early morning robbery case have been arrested.
ಭದ್ರಾವತಿಯಲ್ಲಿ ಗುಜರಿ ವಸ್ತುಗಳನ್ನ ಸಂಗ್ರಹಿಸಿ ಮಾರಾಟ ಮಾಡುವರ ಮೇಲೆ ದಾಳಿ ನಡೆಸುತ್ತಿದ್ದ ಗುಂಪೊಂದನ್ನ ಭದ್ರಾವತಿ ಗ್ರಾಮತರ ಠಾಣೆ ಪೊಲೀಸರು ಪತ್ತೆಹಚ್ಚಿ ಹೆಡೆಮುರಿ ಕಟ್ಟಿದ್ದಾರೆ.
ಮಾ.25 ರಂದು ಶಿವಮೊಗ್ಗದ ಆರ್.ಎಂ.ಎಲ್ ನಗರದ ನಿವಾಸಿ ಕಾರ್ತಿಕ್ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಿನಕೊಪ್ಪ ಕ್ರಾಸ್ ಹತ್ತಿರ ಓಮಿನಿ ಕಾರನ್ನು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ, ಬೆಳಗಿನ ಜಾವ ಸುಮಾರು 06:35 ಗಂಟೆ ಸಮಯದಲ್ಲಿ 4 ಜನರು 2 ಮೋಟಾರು ಬೈಕುಗಳಲ್ಲಿ ಬಂದು ಕಾರನ್ನು ಆಡ್ಡ ಹಾಕಿ ತಡೆದು 3,50,000/- ರೂ ಬೆಲೆ ಬಾಳುವ ಸುಮಾರು 900 ಕೆ.ಜಿ. ತೂಕದ ಹಿತ್ತಾಳೆ ಮತ್ತು ತಾಮ್ರದ ಗುಜರಿ ವಸ್ತುಗಳನ್ನು ಸುಲಿಗೆ ಮಾಡಿಕೊಂಡು ಹೋಗಿದ್ದರು.
ಈ ಕುರಿತು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಪ್ರಕರಣದಲ್ಲಿ ಮಾಲು ಹಾಗೂ ಆರೋಪಿತರ ಪತ್ತೆ ಬಗ್ಗೆ ಎಸ್ಪಿ ಮಿಥುನ್ ಕುಮಾರ್ ಜಿ. ಕೆ. ಅಡಿಷನಲ್ ಎಸ್ಪಿಗಳಾದ ಅನಿಲ್ ಕುಮಾರ್ ಭುಮರಡ್ಡಿ ಹಾಗೂ ಎ. ಜಿ. ಕಾರ್ಯಪ್ಪ ರವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ನಾಗರಾಜ ಹಂಚಿನಾಳ್, ಪಿ ಐ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ, ಶೈಲಕೆಂಚಣ್ಣವರ, ಪಿಎಸ್ಐ ಮತ್ತು ಎ.ಎಸ್.ಐ. ಚಂದ್ರಶೇಖರ್, ದಿವಾಕರ್ ರಾವ್ ಮತ್ತು ಸಿಬ್ಬಂಧಿಗಳಾದ ಹೆಚ್.ಸಿ ಮಂಜುನಾಥ, ಸಿ.ಪಿ.ಸಿ ಈರಯ್ಯ, ರೇವಣ ಸಿದ್ದಪ್ಪ, ವಿಜಯ್ ಕುಮಾರ್ ಹಾಗೂ ಸಂತೋಷ ಕುಮಾರ ರವರನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.
ಸದರಿ ತನಿಖಾ ತಂಡವು ಪ್ರಕರಣದ ಆರೋಪಿತರಾದ 1) ಕವಿರಾಜ, 21 ವರ್ಷ, ಭೋವಿ ಕಾಲೋನಿ ಹೊಸಮನೆ ಭದ್ರಾವತಿ , 2) ಮುಬಾರಕ್, 24 ವರ್ಷ, ಮೇಲಿನ ತುಂಗಾನಗರ ಶಿವಮೊಗ್ಗ, 3) ಅಜಿತ್ @ ಘಟ್ಟ, 19 ವರ್ಷ ಬಾರಂದೂರು, ಭದ್ರಾವತಿ 4) ಮಂಜುನಾಥ @ ಮಂಜು, 21 ವರ್ಷ, ಕಬಳಿಕಟ್ಟೆ ಗ್ರಾಮ, ಭದ್ರಾವತಿ, ಇವರನ್ನು ದಸ್ತಗಿರಿ ಮಾಡಿ ಸದರಿ ಆರೋಪಿತರಿಂದ *ಅಂದಾಜು ಮೌಲ್ಯ 3,50,000/- ರೂಗಳ ಕಳ್ಳತನ ಮಾಡಿದ 700 ಕೆ.ಜಿ ತೂಕದ ಹಿತ್ತಾಳೆ ಮತ್ತು ತಾಮ್ರದ ಗುಜರಿ ವಸ್ತುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಅಂದಾಜು ಮೌಲ್ಯ 3,00,000/- ರೂಗಳ TATA ACE ವಾಹನ ಮತ್ತು ಅಂದಾಜು ಮೌಲ್ಯ 85,000/- ರೂಗಳ ಪಲ್ಸರ್ ಬೈಕ್ ಸೇರಿ ಒಟ್ಟು ಮೌಲ್ಯ, 7,35,000 ರೂ ಗಳ ಮಾಲನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.
ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.
Robbery case