ಎರಡು ಪ್ರತ್ಯೇಕ ರಸ್ತೆ ಅಪಘಾತ ಇಬ್ಬರು ಬೈಕ್ ಸವಾರರು ಸಾವು-two separate road accidents

Suddilive || Soraba|| Rippenpete

ಎರಡು ಪ್ರತ್ಯೇಕ ರಸ್ತೆ ಅಪಘಾತ ಇಬ್ಬರು ಬೈಕ್ ಸವಾರರು ಸಾವು-Two bikers killed in two separate road accidents

Road, accident




ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ್ದಾರೆ. ಒಬ್ಬರು ಅಡ್ಡ ಬಂದ ಕರುವನ್ನ ತಪ್ಪಿಸಲು ಹೋಗಿ ಸಾವನ್ನಪ್ಪಿದರೆ, ಮತ್ತೋರ್ವ ಅಪರಿಚಿತ ವಾಹನದ ಡಿಕ್ಕಿಗೆ ಬಲಿಯಾಗಿದ್ದಾನೆ.

ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್  ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸೊರಬ ಪುರಸಭೆ ವ್ಯಾಪ್ತಿಯ ಕೊಡಕಣಿ-ರೊಟ್ಟಿಕೆರೆ ನಡುವೆ ಮಂಗಳವಾರ ರಾತ್ರಿ ಸಂಭವಿಸಿದೆ. 

ಪಟ್ಟಣದ ಕಾನುಕೇರಿ ಬಡಾವಣೆ ನಿವಾಸಿ ಜಿಯಾವುಲ್ಲ (32) ಮೃತ ಬೈಕ್ ಸವಾರ. ಮೂಲತಃ ಶಿಕಾರಿಪುರದವರಾದ ಜಿಯಾವುಲ್ಲಾ ಪಟ್ಟಣದಲ್ಲಿ ಗಾರೆಕೆಲಸ ಮಾಡಿಕೊಂಡಿದ್ದರು. ಶಿರಾಳಕೊಪ್ಪ ಮಾರ್ಗವಾಗಿ ಪಟ್ಟಣಕ್ಕೆ ಆಗಮಿಸುವ ವೇಳೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಘಟನೆ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ತಲೆಭಾಗಕ್ಕೆ ಗಂಭೀರ ಪ್ರಮಾಣದ ಗಾಯವಾದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ಮೃತನ ತಂದೆ ಹುಸೇನ್ ಸಾಬ್ ನೀಡಿದ ದೂರಿನ ಅನ್ವಯ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅದರಂತೆ ರಿಪ್ಪನ್ ಪೇಟೆಯ ಮೂಗುಡ್ತಿಯಲ್ಲಿ ಅಡ್ಡ ಬಂದ ಕರುವನ್ನ ತಪ್ಪಿಸಲು ಹೋಗಿ ಬೈಕ್ ನ್ನ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ಅರುಣ್(27) ಎಂಬ ಸವಾರ ಸಾವುಕಂಡಿದ್ದಾನೆ. ಕರುವು ಸಹ ಈ ಅಪಘಾತದಲ್ಲಿ ಸಾವನ್ನಪ್ಪಿದೆ. 

two separate road accidents

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close