200 ಕ್ಕೂ ಅಧಿಕ ಮೆಟ್ರಿಕ್ ಅಕ್ರಮ‌ ಮರಳು ವಶಕ್ಕೆ-illegal sand seized

 Suddilive || Shivamogga

200 ಕ್ಕೂ ಅಧಿಕ ಮೆಟ್ರಿಕ್ ಅಕ್ರಮ‌ ಮರಳು ವಶಕ್ಕೆ -More than 200 metric tons of illegal sand seized

Illegal, sand

ಇದ್ದಿದ್ದರಲ್ಲಿ ಶಿವಮೊಗ್ಗದ ಗಣಿ ಮತ್ತು‌ಭೂ ವಿಜ್ಞಾನ ಇಲಾಖೆಗೆ ಹಾಡೋನ ಹಳ್ಳಿಯನ್ನ ಹೊರತು ಪಡಿಸಿ ಬೇರೆಯ ಅಕ್ರಮ ಮರಳುಗಾರಿಕೆಯೂ ಗಮನಕ್ಕೆ ಬಂದಿರುವುದು ಖುಷಿಯ ವಿಚಾರ.  

ಕಳೆದ ಎರಡು ಮೂರು ತಿಂಗಳಿಂದ ಮಾಧ್ಯಮಗಳು ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಅಕ್ರಮ ಮರಳುಗಾರಿಕೆ ಅತಿರೇಕವಾಗಿ ನಡೆಯುತ್ತಿದೆ, ಪುರಲೆ, ಚಟ್ನಹಳ್ಳಿ ಸೇರಿ ಬೇರೆಡೆ ಜಾಗವನ್ನ ತೋರಿಸಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂದು ಬಾಯಿ ಬಾಯಿ ಬಡೆದುಕೊಂಡರು ತಲೆಕೆಡೆಸಿಕೊಳ್ಳದ ಇಲಾಖೆ ಇಂದು ಬೇರೊಂದು ಕಡೆ ದಾಳಿ ನಡೆಸಿದೆ. 


ಇಂದು ಸಹ ಉಪವಿಭಾಗಾಧಿಕಾರಿ ಸತ್ಯನಾರಾಯಣ ಅವರ ನೇತೃತ್ವದಲ್ಲಿ ತಾಲೂಕಿನ ದೇವರ ಚಟ್ನಹಳ್ಳಿಯಲ್ಲಿ ತುಂಗ ನದಿಯಲ್ಲೇ ಅಕ್ರಮ‌ಮರಳುಗಾರಿಕೆ ಮಾಡುತ್ತಿದ್ದ ಜಾಗದ ಮೇಲೆ ದಾಳಿ ನಡೆದಿದೆ. ದಾಳಿಯಲ್ಲಿ 200 ಕ್ಕೂ ಹೆಚ್ಚು ಮೆಟ್ರಿಕ್ ಟನ್ ಅಕ್ರಮ ಮರಳು ಪತ್ತೆಯಾಗಿದೆ.

ಮೊನ್ನೆ ಶನಿವಾರ ಹಾಡೋನಹಳ್ಳಿಯಲ್ಲಿ ಖಡಕ್ ದಾಳಿ ನಡೆಸಿದ್ದ ಎಸಿ ಸತ್ಯನಾರಾಯಣ ಅವರ ತಂಡ ಮೂರು ದಿನಗಳ ಬಳಿಕ ಮತ್ತೊಂದು ಅಕ್ರಮ ಮರಳುಗಾರಿಕೆ ಮೇಲೆ ದಾಳಿ ನಡೆಸಿ ಪತ್ತೆಯಾದ ಮರಳನ್ನ ಪಿಡಬ್ಲೂಡಿಗೆ ಹಸ್ತಾಂತರಿಸಿದೆ. ದಾಳಿಯಲ್ಲಿ ಗಣಿ ಮತ್ತು ಭೂ ವಿಜ್ಞಾನದ ಅಧಿಕಾರಿ ಪ್ರಿಯಾ, 

ಮೇಲ್ವಿಚಾರಕ ಬಸವರಾಜ, ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಶಿವುಕುಮಾರ್, ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗಿಯಾಗಿದ್ದರು. 

illegal sand seized

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close