ಮರಣೋತ್ತರ ಪರೀಕ್ಷೆ ವರದಿಗೆ ಲಂಚದ ಬೇಡಿಕೆ, ಲೋಕಾ ಬಲೆಯಲ್ಲಿ ವೈದ್ಯ!Doctor in Lokayukta trap

 SUDDILIVE || SHIKARIPURA

ಮರಣೋತ್ತರ ಪರೀಕ್ಷೆ ವರದಿಗೆ ಲಂಚದ ಬೇಡಿಕೆ ಲೋಕಾ ಬಲೆಯಲ್ಲಿ ವೈದ್ಯ!Doctor in Lokayukta trap for demanding bribe for postmortem report

Lokayukta, trap


ಮರಣೋತ್ತರ ಪರೀಕ್ಷೆಯ ವರದಿ ನೀಡಲು ಶಿಕಾರಿಪುರದ ಸರ್ಕಾರಿ ಆಸ್ಪತ್ರೆಯ ವೈದ್ಯನೋರ್ವ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.  ಡಾ.ಗೋಪಾಲ್.ಜಿ.ಹರಿಗಿ ಲೋಕಾಯುಕ್ತರ ಬಲೆಗೆ ಬಿದ್ದ ವೈದ್ಯನಾಗಿದ್ದಾನೆ. 

ರಾಜೇಶ್ ಎಂಬುವರ ಸಹೋದರಿಯ ಪತಿ ಮೇ.06 ರಂದು ಹಾವುಕಚ್ಚಿ ಮೃತಪಟ್ಟಿದ್ದು ಮೃತರ ಮರಣೋತ್ತರ ಪರೀಕ್ಷೆಯ ವರದಿ ನೀಡಲು ಶಿಕಾರಿಪುರದ ಫಾರೆನ್ ಸಿಕ್ ವೈದ್ಯ ಡಾ.ಗೋಪಾಲ್.ಜಿ.ಹರಿಗಿ 20 ಸಾವಿರ ರೂ ಹಣದ ಬೇಡಿಕೆ ಇಟ್ಟಿದ್ದರು. 

ಮೇ.20 ರಂದು ಹಣ ನೀಡಿದರೆ 20 ಸಾವಿರ ರೂ. ಇಲ್ಲ ಮುಂದೂಡಿದರೆ ಹಣ ಹೆಚ್ಚಾಗಲಿದೆ ಎಂಬ ಹಣದ ಬೇಡಿಕೆ ಇಟ್ಟಿದ್ದರು. ಇಂದು 10 ಸಾವಿರ ರೂ. ಹಣವನ್ನ ಪಡೆಯುವಾಗ ವೈದ್ಯರು ಸಿಕ್ಕಿ ಬಿದ್ದದ್ದಾರೆ. 

ರಾಜೇಶ್ ಅವರ ಸ್ನೇಹಿತ ಸುನೀಲ್.ಎನ್.ವೈ ಎಂಬುವರಿಂದ ದೂರು ದಾಖಲಾಗಿದ್ದು, ಇಂದು ಆರೋಪಿ ಡಾ.ಗೋಪಾಲ್.ಜಿ.ಹರಿಗಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ. ಆರೋಪಿಯನ್ನ ಲೋಕಾಯುಕ್ತರು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ರಾದ ಗುರುರಾಜ್.ಎನ್.ಎಂ ಅವರ ನೇತೃತ್ವದಲ್ಲಿ ಮುಂದಿನ ತನಿಖೆ ನಡೆಯಲಿದೆ. 

ಕಾರ್ಯಾಚರಣೆಯನ್ನು ಶ್ರೀ.ಮಂಜುನಾಥ ಚೌಧರಿ.ಎಂ. ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ರವರ ಮಾರ್ಗದರ್ಶನದಲ್ಲಿ ಶ್ರೀ.ಬಿ.ಪಿ. ಚಂದ್ರಶೇಖರ್, ಪೊಲೀಸ್ ಉಪಾಧೀಕ್ಷಕರು, ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್‌ಪೆಕ್ಟರಾದ ಗುರುರಾಜ್ ಎನ್.ಎಂ.ಟ್ರ್ಯಾಪ್ ಮಾಡಿದ್ದು, ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆದ ಶ್ರೀ.ವೀರಬಸಪ್ಪ ಎಲ್ ಕುಸಲಾಪುರ, 

ಸಿಬ್ಬಂದಿಯವರಾದ ಶ್ರೀ.ಯೋಗೇಶ್.ಜಿ.ಸಿ, ಸಿ.ಹೆಚ್.ಸಿ. ಶ್ರೀ.ಮಂಜುನಾಥ.ಎಂ. ಸಿ.ಹೆಚ್.ಸಿ, ಶ್ರೀ.ಸುರೇಂದ್ರ.ಹೆಚ್.ಜಿ., ಸಿ.ಹೆಚ್.ಸಿ, ಶ್ರೀ ಬಿ.ಟಿ. ಚನ್ನೇಶ್, ಸಿ.ಪಿ.ಸಿ, ಶ್ರೀ ದೇವರಾಜ್.ವಿ, ಸಿ.ಪಿ.ಸಿ, ಶ್ರೀ.ಪ್ರಕಾಶ್ ಬಾರಿಮರದ. ಸಿಪಿಸಿ, ಶ್ರೀ.ಆದರ್ಶ, ಸಿ.ಪಿ.ಸಿ, ಶ್ರೀಮತಿ ಚಂದ್ರಿಬಾಯಿ, ಮ.ಪಿ,ಸಿ ಶ್ರೀ.ಪ್ರದೀಪ. ಎ.ಹೆಚ್.ಸಿ, ಶ್ರೀಗೋಪಿ.ವಿ, ಎ.ಪಿ.ಸಿ, ಶ್ರೀ.ತರುಣ್ ಕುಮಾರ್, ಎಪಿಸಿ, ಶ್ರೀ ಆನಂದ. ಎ.ಪಿ.ಸಿ, ರವರು ಹಾಜರಿರುತ್ತಾರೆ.

Doctor in Lokayukta trap

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close