Suddilive || Shivamogga
ಕೈಕೊಟ್ಟ ಲಿಫ್ಟ್-Lift is not working
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಲಿಫ್ಟ್ ಕಾರ್ಯನಿರ್ವಹಿಸದೆ ಇರುವ ಕಾರಣ ಸಾರ್ವಜನಿಕರಿಗೆ ಅದರಲ್ಲೂ ವೃದ್ಧರಿಗೆ ಹಾಗೂ ಅಂಗವಿಕಲರಿಗೆ ಪರದಾಡುವಂತಾಗಿದೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಡಿಸಿ, ಎಡಿಸಿ, ನ್ಯಾಯಾಂಗ ವಿಭಾಗ, ಮತ್ತು ಆಹಾರ ಇಲಾಖೆಗೆ ಹೋಗಲು ವೃದ್ಧರಿಗೆ ಮತ್ತು ಎಲ್ಲರಿಗೂ ಅನುಕೂಲವಾಗುತ್ತಿತ್ತು. ಆದರೆ ಇಂದು ಈ ಲಿಫ್ಟ್ ಕೈಕೊಟ್ಟಿದೆ. ಹಾಗಾಗಿ ಲಿಫ್ಟ್ ಮೇಲೆ ಅವಲಂಭಿತರಾದವರಿಗೆ ಸಮಸ್ಯೆಯಾಗಿದೆ.
ಡಿಸಿ ಕಚೇರಿಯಲ್ಲಿ ಸಾರ್ವಜನಿಕರಿಗಾಗಿ ಇರುವ ಸವಲತ್ತುಗಳು ಅದರಲ್ಲೂ ಕುಡಿಯುವ ನೀರು, ಲಿಫ್ಟ್ ಗಳು ಕೈಕೊಡದಂತೆ ನೋಡಿಕೊಂಡರೆ ಅವರ ಕೆಲಸಗಳನ್ನ ಸುಗಮವಾಗಿ ನೋಡಿಕೊಳ್ಳಲಿದ್ದಾರೆ. ಆದರೆ ಇವುಗಳು ಕೈಕೊಡುವ ಕಾರಣ ಸಾರ್ವಜನಿಕರ ಪರದಾಟ ಮುಂದುವರೆದಿದೆ. ಲಿಫ್ಟ್ ರಿಪೇರಿ ಸಮಯ ತೆಗೆದುಕೊಳ್ಳುವ ಅಪಾಯವಿರುದರಿಂದ ಸಾರ್ವಜನಿಕರ ಪರದಾಟ ಇನ್ನೂ ಎರಡು ಮೂರು ದಿನಖಾಯಂ ಆಗಲಿದೆ.
Lift is not working