ಲೋಕಮಾನ್ಯ ತಿಲಕ್ ಮೈದಾನವೆಂದು ಹೆಸರಿಡಲಾಗುವುದು-ಶಾಸಕ ಚೆನ್ನಬಸಪ್ಪ- named after Lokmanya Tilak Maidan

 SUDDILIVE || SHIVAMOGGA

ಲೋಕಮಾನ್ಯ ತಿಲಕ್ ಮೈದಾನವೆಂದು ಹೆಸರಿಡಲಾಗುವುದು-ಶಾಸಕ ಚೆನ್ನಬಸಪ್ಪ-It will be named after Lokmanya Tilak Maidan - MLA Chennabasappa

Lokamanya, Thilaj


ಜಿಲ್ಲಾಧಿಕಾರಿಗಳ ಕಚೇರಿ ಎದುರಿನ ಮೈದಾನಕ್ಕೆ ನ್ಯಾಯಾಲಯದ ಆದೇಶ ಬಂದಿದ್ದು, ಮಹಾನಗರ ಪಾಲಿಕೆಯ ಆಯುಕ್ತರೇ ಸುಪ್ರೀಂ ಎಂದು ಆದೇಶಿಸಿದೆ. 8 ವಾರದ ಒಳಗೆ ಮೈದಾನ ಈದ್ಗಾಕ್ಕೆ ಸೇರಿದ್ದೋ ಅಥವಾ  ಅಲ್ಲವೋ ಎಂಬುದನ್ನ ತೀರ್ಮಾನಿಸಿ ವರದಿ ಕೊಡುವಂತೆ ಆದೇಶವಿದೆ ಎಂದು ಶಾಸಕ ಚೆನ್ನಬಸಪ್ಪ ಸ್ಪಷ್ಟಪಡಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆದೇಶದ ಬೆನ್ನಲ್ಲೇ  ಆಟದ ಮೈದಾನಕ್ಕೆ  ಅದಕ್ಕೆ ಲೋಕಮಾನ್ಯ ತಿಲಕ್ ಆಟದ ಮೈದಾನ ಎಂದು ಹೆಸರಿಡಲಾಗುವುದು ಎಂದರು.

ಸಭಾಧ್ಯಕ್ಷರಿಗೆ, ಸಿಎಂ ಡಿಸಿಎಂ ಹಾಗೂ ವಿಪಕ್ಷ ನಾಯಕರಿಗೆ ಅಭಿನಂದನೆ

18 ಜನ ಶಾಸಕರ ಅನಾನತ್ತು ಪಡೆದ ಸಭಾಧ್ಯಕ್ಷ ಯುಟಿ ಖಾದರ್ ಗೆ ಶಾಸಕ ಚೆನ್ನಬಸಪ್ಪ ಅಭಿನಂದಿಸಿದರು.

ಮಾ.21 ರಂದು ಅಮಾನತ್ತುಗೊಳಿಸಲಾಗಿತ್ತು. ಪೀಠಕ್ಕೆ ಅಗೌರವ ತರಲಾಗಿದೆ ಎಂದು 18 ಜನ ಶಾಸಕರನ್ನ ಅಮಾನತ್ತುಗೊಳಿಸಿದ್ದು, ಇಂದು ವಾಪಾಸ್ ಪಡೆಯಲಾಗಿದೆ. ನಾವು ಸಭಾಧ್ಯಕ್ಷರಿಗೆ ಅಗೌರವ ತಂದಿರಬಹುದು. ಆದರೆ ಹೋರಾಟ ನಡೆಸಲಾಗಿತ್ತು. ಅದಕ್ಕೆ ಜಯಸಿಕ್ಕಿದೆ. ಅವರಿಗೆ ನೋವಾಗಿರುವ ಬಗ್ಗೆ ವಿಪಕ್ಷ ನಾಯಕ ಅಶೋಕ್ ನೇತೃತ್ವದಲ್ಲಿ ಸೌಭಾಧ್ಯಕ್ಷರಿಗೆ ಮನವರಿಕೆ ಮಾಡಲಾಗಿತ್ತು. ರಾಜ್ಯ ಪಾಲರನ್ನೂ ಭೇಟಿ ಮಾಡಲಾಗಿತ್ತು ಎಂದರು. 

ಸಭಾಧ್ಯಕ್ಷರ ಭೇಟಿಯ ವೇಳೆ ಅವರು ಸಹ ಶಾಸಕರ ಮೇಲಿನ ಜಿದ್ದಿನ್ನ ತೋರಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಅಗೌರವ ತೋರಿದ್ದಕಗಕೆ ಸಸ್ಪೆಂಡ್ ಎಂದು ವಾಪಾಸ್ ಪಡೆಯಲಿದ್ದಾರೆ. ಸದನದಲ್ಲಿ ಹನಿಟ್ರ್ಯಾಪ್ ಹಗರಣ ಚರ್ಚೆಗೆ ಬಂದು ಹಾಗೆ ಮಾಯವಾಗಿದೆ. ಸಚಿವ ರಾಜಣ್ಣರಿಗೆ ನ್ಯಾಯ ದೊರಕಿದೆಯಾ ಎಂಬ ವಿಷಯ ನಿಗೂಢವಾಗಿದೆ. ಬೇರೆ ಸಚಿವರಿಂದ ಹನಿಟ್ರ್ಯಾಪ್ ಆಗಿದ್ದು ಅದು ಚರ್ಚೆಗೆ ಬಾರದೆ ಬಿದ್ದುಹೋಗಿರುವುದು ಪ್ರಜಾಪ್ರಭುತ್ವದ ದುರಂತ ಎಂದರು. 

ಪೀಠಕ್ಕೆ ಅಭಿನಂದನೆ

ಪೀಠಕ್ಕೆ ಅವಮಾನ ಎಂದು ಹೋರಾಟ ಮಾಡಿರಲಿಲ್ಲ. ಸರ್ಕಾರದ ವಿರುದ್ಧದ ಹೋರಾಟವಾಗಿತ್ತು. ಹನಿಟ್ರ್ಯಾಪ್ ಮಾಡುವವರಿಗೆ ಶಕ್ತಿ ನೀಡುವಂತೆ ಅಂದು ಮಾಹಿತಿ ದೊರೆತಿದೆ. ಕಾನೂನು ಸಚಿವರು ಸಿಎಂ ಸಭಾಧ್ಯಕ್ಷರು ನಮ್ಮ ವಿಪಕ್ಷ ನಾಯಕರ ಅಭಿಪ್ರಾಯ ಸಂಗ್ರಹಿಸಿ ವ್ಯವಸ್ಥೆಯಲ್ಲಿ ಅಮಾನತ್ತು ಹಿಂಪಡೆಯಲಾಗಿದೆ. ಅಧಿವೇಶನ ಮುಗಿಯವರೆಗೆ ಅಮಾನತ್ತು ಆಗಿತ್ತು. ಇದು ಲಾಂಗ್ ಟರ್ಮ್ ಅಮಾನತ್ತು ಯಾರಿಗೂ ಆಗಿರಲಿಲ್ಲ.ವಾಪಾಸ್ ಪಡೆದಿರುವುದು ಬಹಳ ಒಳ್ಳೆಯ ನಡೆ ಎಂದು ತಿಳಿಸಿದರು. 

ಪ್ರವಾಸಕ್ಕೆ ಹೋಗುವೆ

ಕಮಿಟಿ ಟೂರ್ ಹಮ್ಮಿಕೊಂಡಿದೆ. ನಾನು ಇರುವ ಕಮಿಟಿಗೆ ಬರೊಲ್ಲ ಎಂದಿದ್ದೆ. ಮೇ.28 ರಂದು ಟೂರ್ ಇದೆ. ಅಸ್ಸಾಂ ಸೇರಿ ಮೂರು ರಾಜ್ಯಗಳಿಗೆ ಅಧ್ಯಾಯನ ಪ್ರವಾಸವಿದೆ. ಜೂ.5 ಕ್ಕೆ ವಾಪಾಸಾಗಲಿದ್ದೇವೆ. ಶಾಸಕರಾದ ಅಶೋಕ್ ಸಿಎಂ, ಡಿಸಿಎಂ ಅವರು ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಮುಂದಿನ ಅಧಿವೇಶನದಲ್ಲಿ ಇದಕ್ಕೆ ನ್ಯಾಯ ಕೊಡಿಸಲಾಗುವುದು. 20 ಜನರ ಶಾಸಕರ ತಂಡ ಹೋಗುತ್ತಿದ್ದೇವೆ ಪ್ರತಿಬುಧವಾರ ಸಭೆ ನಡೆಸಲಾಗುತ್ತದೆ. ನಾನು ಅಮಾನತ್ತು ಆದಾಗ ಹೋಗಿರಲಿಲ್ಲ. ಹಿಂದುಳಿದ ಮತ್ತು ಅಲ್ಪಸಂಖ್ಯಾತರ ವರ್ಗ ದ ಇಲಾಖೆಯಲ್ಲಿ 20 ಜನರನ್ನ ಒಳಗೊಙಡ ಸಮಿತಿ ಅದಾಗಿತ್ತು. ಅದರಲ್ಲಿ ಎಂಎಲ್ ಸಿ ಸಹ ಇದ್ದಾರೆ ಎಂದರು‌. 

ಮಳೆಗೆ ತಂಡ ರಚನೆ

ಪೀಠಕ್ಕೆ ಅಗೌರವ ತರುವ ಪ್ರಶ್ನೆಯೇ ಇಲ್ಲ. ಸಭಾಧ್ಯಕ್ಷರಿಗೆ ಅಗೌರವವಲ್ಲ ಅದು. ಸರ್ಕಾರ ಉದ್ದಟತನದ ಪರಮಾವಧಿಗೆ ಹೋಗಿದ್ದು ಹೋರಾಟ ಪಡಿಸಲಾಗಿದೆ. ನಮ್ಮ ಅಮಾನತ್ತು ಹಿಂಪಡೆದಿರುವುದು ನಮ್ಮ ಹೋರಾಟ ಗೆದ್ದಿದೆ ಎಂದರು.

ಮಳೆಗೆ ತಂಡ ರಚನೆಯಾಗಿದೆ. ಆರ್ ಎಎಫ್ ತರ ತಂಡ ರಚಿಸಲಾಗಿದೆ 220 ಹೆಚ್ಚು ಪಾಯಿಂಟ್ ಗುರುತಿಸಲಾಗಿದೆ ಚರಂಡಿಗಳ ಹೂಳೆತ್ತುವ ಕೆಲಸ ಪ್ರಾರಂಭಿಸಕಾಗಿದೆ. ಅಧಿಕಾರಿಗಳು ಕಾರ್ಯರೂಪಕ್ಜೆ ಇಳಿದಿದ್ದಾರೆ. ಭದ್ರ ನಾಲೆ, ಇರಿಗೇಷನ್ ಇಲಾಖೆ ಅಧಿಕಾರಿಗಳು, ಪಾಲಿಕೆ ಅಧಿಕಾರಿಗಳ ಸಭೆ ನಡೆದಿದೆ. ಮರ ಬಿದ್ದರೆ ತಕ್ಷಣ ಕಾರ್ಯೋನ್ಮುಖರಾಗುತ್ತಾರೆ. 

be named after Lokmanya Tilak Maidan

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close