SUDDILIVE || MYSORE
ರೈಲುಗಳ ಸಂಚಾರ ರದ್ದು/ಭಾಗಶಃ ರದ್ದು-Train services cancelled/partially cancelled
ಮೈಸೂರು ರೈಲ್ವೆ ವಿಭಾಗದ ಕೃಷ್ಣರಾಜನಗರ ಮತ್ತು ಹೊಸ ಅಗ್ರಹಾರ ರೈಲು ನಿಲ್ದಾಣಗಳ ನಡುವೆ ನಡೆಯಲಿರುವ ಸೇತುವೆ ನಿರ್ವಹಣಾ ಕಾರ್ಯದ ಕಾರಣ, ಕೆಳಗಿನ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.
ಸಂಪೂರ್ಣ ರದ್ದು
ರೈಲು ಸಂಖ್ಯೆ 56267 ಅರಸೀಕೆರೆ–ಮೈಸೂರು ಪ್ಯಾಸೆಂಜರ್ ರೈಲು ಜೂನ್ 8, 2025 ರಂದು ಸಂಪೂರ್ಣವಾಗಿ ರದ್ದಾಗಲಿದೆ.
ಭಾಗಶಃ ರದ್ದು
ರೈಲು ಸಂಖ್ಯೆ 16225 ಮೈಸೂರು–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ರೈಲು ಜೂನ್ 8, 2025 ರಂದು ಮೈಸೂರು ಮತ್ತು ಅರಸೀಕೆರೆ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಅರಸೀಕೆರೆಯಿಂದ ಶಿವಮೊಗ್ಗ ಟೌನ್‌ವರೆಗೆ ಮಾತ್ರ ಸಂಚರಿಸಲಿದೆ.
Train services cancelled/partially cancelled