Suddilive || Bhadravathi
ಆಯುಧಗಳಿಗೆ ಪೂಜೆಯ ವಿಡಿಯೋ ವೈರಲ್-Video of worshipping weapons goes viral
ಭದ್ರಾವತಿಯಲ್ಲಿ ರೌಡಿ ಶೀಟರ್ ಗಳ ಹಾವಳಿ ಹೆಚ್ಚಾಗಿದೆ. ಭದ್ರಾವತಿಯಲ್ಲಿ ಕೋಮುಗಲಭೆಗೆ ಆಯುಧಗಳು ಹೊರಗಡೆ ಬರ್ತಾಯಿಲ್ಲ. ಬೇರೆ ವಿಷಯಕ್ಕೆ ಬರ್ತಾಯಿದೆ ಎಂಬುದು ನಮ್ಮ ಮಾಹಿತಿ.
ತಲವಾರುಗಳು, ಲಾಗು ಮಚ್ಚು, ಭರ್ಜಿ ಮೊದಲಾದ ಆಯುಧಗಳಿಗೆ ಪೂಜೆ ಮಾಡಿಸಿ ವಾಟ್ಸಪ್ ಸ್ಟೇಟಸ್ ಗಳಲ್ಲಿ ಅಪಲೋಡ್ ಮಾಡಲಾಗುತ್ತಿದೆ. ಕೆಲವೊಂದು ವಿಡಿಯೋಗಳು ಸಾಮಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲೂ ಹರಿದಾಡುತ್ತಿವೆ.
ಮೊನ್ನೆ ವಿಶ್ವ ಮತ್ತು ಆತನ ಸಹಚರನ ಮೇಲೆ ಪ್ರಮೋದ್ ಯಾನೆ ಗಾಂಧಿ ಎಂಬಾತನ ಕಡೆಯವರು ಹಳದಮ್ಮ ಕೇರಿಯಲ್ಲಿ ಅಟ್ಯಾಕ್ ಮಾಡಿದ್ದಾರೆ ಎಂಬ ಆರೋಪದ ಅಡಿ ದೂರು ದಾಖಲಾಗಿತ್ತು. ಅದರ ಬೆನ್ನಲ್ಲೇ ಗಾಂಧಿಯ ಎದಯರಾಳಿಗಳು ಆತನ ಫೊಟೊ ಅಡಿ RIP ಎಂದು ಬರೆದು ಫೇಸ್ ಬುಕ್ ಮತ್ತು ವಾಟ್ಸಪ್ ನಲ್ಲಿ ಹರಿಬಿಟ್ಟಿದ್ದರು. ಗಾಂಧಿಯ ಜೊತೆ ಈಗ ಪ್ರಕಾಶ ಹೆಸರು ಕೇಳಿ ಬರುತ್ತಿದೆ.
ಅದರ ಬೆನ್ನಲ್ಲೇ ಯುವಕನೋರ್ವ ಹಳದಮ್ಮ ದೇವಸ್ಥಾನದಲ್ಲಿ ಅರ್ಚಕರಿಂದ ಪೂಜಿಸಲ್ಪಟ್ಟ ಆಯುಧವನ್ನ ಸ್ವೀಕರಿಸುತ್ತಿದ್ದು, ಆ ವಿಡಿಯೋಗೆ ಸಲಗ ಸಿನಿಮಾದ ಡೈಲಾಗ್ ಹಾಕಲಾಗಿದೆ. ಶೋಕಿಗೆ ತಿರುಪೋಕಿಗೆ ಫೀಲ್ಡ್ ಗೆ ಇಳಿದವನಲ್ಲ, ಗತ್ತಿಗೆ ಗಾಂಭೀರ್ಯಕ್ಕೆ ಗಜಗಾಂಭೀರ್ಯಕ್ಕೆ ಫೀಲ್ಡ್ ಮಾಡಿದವನು ಸಲಗ... ಎಂದು 15 ಸೆಕೆಂಡ್ ವಿಡಿಯೋ ಮಾಡಾಗಿದೆ.
ಒಟ್ಟಿನಲ್ಲಿ ಕ್ರೌರ್ಯತೆಯನ್ನ ಮೆರೆಯುವ ದೃಶ್ಯವೆಂದು ಹೇಳಲಾಗುತ್ತಿದೆ. ಇಷ್ಟೊಂದು ಕ್ರೌರ್ಯತೆ ಮೆರೆಯುತ್ತಿರುವುದರ ಬಗ್ಗೆ ಪೊಲೀಸರು ಕ್ರಮ ಏನು ಜರುಗಿಸಲಿದ್ದಾರೆ ಕಾದುನೋಡೋಣ.
Video of worshipping weapons goes viral