15 ನಿಮಿಷ ದೀಪ ಆರಿಸಿ ವಕ್ಫ್ ಪ್ರತಿಭಟನೆಗೆ ಬೆಂಬಲ-Support the Waqf protest

 Suddilive || Shivamogga

15 ನಿಮಿಷ ದೀಪ ಆರಿಸಿ ವಕ್ಫ್ ಪ್ರತಿಭಟನೆಗೆ ಬೆಂಬಲ -Support the Waqf protest by lighting lamps for 15 minutes.

Waqf, support


ವಕ್ಫ್‌ ತಿದ್ದುಪಡಿ ಮಸೂದೆ ವಿರೋಧಿಸಿ ಮೇ.3 ರಂದು ನಗರದಲ್ಲಿ ಮುಸ್ಲೀಂ ಸಂಘಟನೆಯಿಂದ ಪ್ರಬಲ ಪ್ರತಿಭಟನೆ ನಡೆಯಲಿದೆ. ಅದಕ್ಕೂ ಮುನ್ನ ನಿನ್ನೆ ನಗರದ ವಿವಿಧ ಬಡಾವಣೆಗಳಲ್ಲಿ ಬುಧವಾರ ರಾತ್ರಿ ಲೈಟ್‌ ಆಫ್‌  ಮಾಡಿ ಪ್ರತಿಭಟನೆ ನಡೆಸಲಾಯಿತು. 

ಮುಸ್ಲಿಂ ಸಮುದಾಯದವರು ತಮ್ಮ ಮನೆ, ಅಂಗಡಿ ಮುಂಗಟ್ಟುಗಳಲ್ಲಿ ವಿದ್ಯುತ್‌ ದೀಪ ಆರಿಸಿ ಮಸೂದೆಗೆ ಪ್ರತಿರೋಧ ವ್ಯಕ್ತಪಡಿಸಲಾಯಿತು. ಮುಸ್ಲಿಂ ಸಮುದಾಯದವರು ಹೆಚ್ಚಿರುವ ಬಡಾವಣೆಗಳಲ್ಲಿ ವಿದ್ಯುತ್‌ ದೀಪಗಳನ್ನು ಆರಿಸಿ ಪ್ರತಿಭಟನೆ ನಡೆಸಲಾಯಿತು. ರಾತ್ರಿ 9 ಗಂಟೆಯಿಂದ 9.15ರವರೆಗೆ ಲೈಟ್‌ಗಳನ್ನು ಆರಿಸಲಾಗಿತ್ತು. ಮನೆಗಳ ದೀಪಗಳನ್ನು ಆರಿಸಿ, ಜನರು ಹೊರ ಬಂದು ಪ್ರತಿಭಟಿಸಿದರು.

ಇದಕ್ಕೂ ಮುನ್ನ ಮುಸ್ಲಿಂ ಸಮುದಾಯದ ಪ್ರಮುಖರು, ಮನೆ ಮನೆಗೆ ತೆರಳಿ ಪ್ರತಿಭಟನೆಗೆ ಅಗತ್ಯತೆ ವಿವರಿಸಿದರು. ಅಲ್ಲದೆ ಕರಪತ್ರಗಳನ್ನು ಹಂಚಿದ್ದರು. ದೇಶಾದ್ಯಂತ ಲೈಟ್‌ ಆರಿಸಿ ಶಾಂತಿಯುತ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಸಾಗರದಲ್ಲೂ ಇದೇ ಸಮಯದಲ್ಲಿ ಪ್ರತಿಭಟಿಸಿರುವುದಾಗಿ ಮಾಹಿತಿ ತಿಳಿದು ಬಂದಿದೆ. 

Support the Waqf protest

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close