ಆರ್ಥಿಕವಾಗಿ ದಿವಾಳಿ ಹಂಚಿಗೆ ತಂದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ತೊಲಗಲಿ-ಆರಗ-brink of financial bankruptcy, should be removed-Araga

SUDDILIVE || SHIVAMOGGA

ಆರ್ಥಿಕವಾಗಿ ದಿವಾಳಿ ಹಂಚಿಗೆ ತಂದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ತೊಲಗಲಿ-ಆರಗ-The state Congress government, which has brought it to the brink of financial bankruptcy, should be removed - Araga

Brink, bankruptcy

ಎರಡು ವರ್ಷದ ಸಾಧನಾ ಸಮಾವೇಶದ ವಿರುದ್ಧ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕರೆಂಟ್ ಫ್ರೀ, ಕೇಸ್ ಆರ್ ಟಿಸಿ ಫ್ರೀ ಪ್ರಯಾಣ ಎಂದು ಕಾಂಗ್ರೆಸ್ ಸರ್ಕಾರ ದುಪ್ಪಟ್ಟು ದರ ಹೆಚ್ಚಿಸಿದೆ. ಶಾಲಾ ಶುಲ್ಕ, ಮದ್ಯ ಧಾರಣೆ, ಲಿಕರ್ ಮೇಲಿನ ಸುಂಕ,  ಡಿಸೇಲ್ ದರವನ್ನ ಎರಡು ಬಾರಿ ಹೆಚ್ಚಿಸಿ ಬರೆ ಎಳೆಯಲಾಗಿದೆ. ನುಡಿದಂತೆ ನಡೆದಿದ್ದೇವೆ ಎಂಬ ಗ್ಯಾರೆಂಟಿ ಕೊಡಲಾಗಿದೆ ಎಂದು ಹೇಳಿ ಜನರ ಮೇಲೆ ಬರೆ ಎಳೆಯಾಗಿದೆ ಎಂದರು. 

ಒಂದು ಕ್ವಾಟರ್ ಗೆ ಎರಡು ಪಟ್ಟು ಹೆಚ್ಚಿಸಲಾಗಿದೆ ಕುಡಕನಿಂದ ಸುಮಾರು 1000 ಕಸಿದುಕೊಂಡು ಆತನ ಹೆಂಡತಿಗೆ 2000 ರೂ. ಕೊಡಲಾಗುತ್ತಿದೆ. ಸಿದ್ದರಾಮಯ್ಯನವರ ಅನುಭವದ ಆಧಾರ ಮೇಲೆ  ಉತ್ತಮ ಆಡಳಿತ ನೀಡುವ ಭರವಸೆ ಹುಸಿಯಾಗಿದೆ. ಅವರೇ ಹಗರಣದಲ್ಲಿ ಸಿಕ್ಕಿಕೊಂಡಿದ್ದಾರೆ. ಸಿಕ್ಕಿಕೊಂಡ ಮೇಲೆ 14 ಸೈಟನ್ನ ವಾಪಾಸ್ ನೀಡಲು ಮುಂದಾದರು. ಹೀಗೆ ಪ್ರಕರಣವನ್ನ ಹಳ್ಳ ಹಿಡಿಯುವಂತೆ ನೋಡಿಕೊಳ್ಳಲಾಯಿತು. 

ವಾಲ್ಮೀಕಿ ನಿಗಮದ ಹಗರಣವನ್ನೂ ಸರಿಯಾಗಿ ನಡೆಯದ ರೀತಿ ನಡೆದುಕೊಳ್ಳಲಾಯಿತು. ವಿಧಾನ ಸಭೆಯಲ್ಲಿ ಹನಿಟ್ರ್ಯಾಪ್ ಬಗ್ಗೆ ಮಾತನಾಡಿದರೆ ಶಾಸಕರನ್ನ ಅಮಾನತ್ತಿನಲ್ಲಿಡುವಂತೆ ನೋಡಿಕೊಳ್ಳಲಾಯಿತು. ಬಜೆಟ್ ನಾಮಕಾವಸ್ಥೆಯಾಗಿದೆ. ಆಕ್ಷನ್ ಟೇಕನ ರಿಪೋರ್ಟ್ ಮೇಲೆ ಮಾತನಾಡಿರುವ ನಾನು ಹಿಂದಿನ ಬಜೆಟ್ ವರದಿ ಕೊಡಿ ಎಂದರೆ ಅದರ ಬಗ್ಗೆ ಪ್ರಸ್ತಾಪವಿಲ್ಲ. ಈಗಿನ ಬಜೆಟ್  ಗಾತ್ರವನ್ನ 4.8 ಲಕ್ಷ ಕೋಟಿಗೆ ಏರಿಸಲಾಗಿದೆ. ಈ ಬಜೆಟ್ ನಲ್ಲಿ ಕ್ಯಾಪಿಟಲ್ ಇನ್ ವೆಸ್ಟ್ ಮೆಂಟ್ ಏನೂ ಇಲ್ಲ. ಸಾಲಕ್ಕೆ ಒತ್ತು ನೀಡಲಾಗಿದೆ ಎಂದು ದೂರಿದರು. 

ಬಂಡತನದಿಂದ ಸರ್ಕಾರ ಸಾಗುತ್ತಿದೆ. ಗುತ್ತಿಗೆ ಕೆಲಸ ಮಾಡುತ್ತಿರುವರಿಗೆ ಹಣ ಬಿಡುಗಡೆ ಮಾಡಲಾಗಿಲ್ಲ. ಎಂಎಲ್ ಎ ಲೆಟರ್ ಕೊಟ್ರೆ ಹಣವಿಲ್ಲ ಎನ್ನುತ್ತಾರೆ. ಡಿಕೆಶಿ ಸಿದ್ದರಾಮಯ್ಯ ಜೋಡಿ ವಿತ್ರವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು. 

ಕಾಂಗ್ರೆಸ್ ಹೈಕಮಾಂಡ್ ಗೆ ರಾಜ್ಯ ಎಟಿಎಂ ಆಗಿದೆ. ಪ್ರಿಯಾಂಕ ಖರ್ಗೆ ಟ್ರಸ್ಟ್ ಗೆ ಅಕ್ರಮ ಭೂಮಿ ಮಂಜುರಾತಿ ಮಾಡಲಾಗಿದೆ. ಪೋಷ್ಠಿಕಾಂಶ ಖರೀದಿಯಲ್ಲಿ 75 ಕೋಟಿ ಹಗರಣ, ಮೆಸ್ಕಾಂ ನಲ್ಲಿ 15000 ಕೋಟಿ ಹಗರಣ ನಡೆದಿರುವ ಬಗ್ಗೆ ಬಿಜೆಪಿ ವಿವರಿಸಿ ಹೇಳಿದರೂ ಕಾಂಗ್ರೆಸ್ ಉತ್ತರಿಸಲಿಲ್ಲ. ಅರಣ್ಯ ಇಲಾಖೆ ಮತ್ತು ಇತರೆ ಇಲಾಖೆಗೆ ಅಭಿವೃದ್ಧಿ ಹಣ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.

ಇದರ ಜೊತೆಗೆ ಮುಸ್ಲೀಂ ಓಲೈಕೆ ರಾಜಕಾರಣ ಮಾಡುತ್ತಿದೆ. ರಾಜ್ಯದಲ್ಕಿ 250 ಉರ್ದು ಮೌಲಾನಾ ಆಜಾದ್ ಶಾಲೆ ತೆಗೆಯಲು ಜಾಗ ಗುರುತಿಸಲಾಗಿದೆ ಮದರಸಾಗಳ ಕಂಪ್ಯೂಟರ್ ಖರೀದಿಗೆ ನಮ್ಮ ತೆರಿಗೆ ಹಣ ನೀಡಲಾಗುತ್ತಿದೆ. ನಮ್ಮ ಮಕ್ಕಳು ಮತ್ತು ಅವರ ಮಕ್ಕಳು ಶಾಲೆಯಲ್ಲಿ ಕುಳಿತು ಶಿಕ್ಷಣ, ಆಟ ಚಟುವಟಿಕೆಯಲ್ಲಿ ತೊಡಗದಿದ್ದರೆ ಮತೀಯ ಬೀಜ ಹೊಕ್ಕುವ ಅಪಾಯವಿದೆ. ವಿಷ ಬೀಜ ಬಿತ್ತುವ ಕೆಲಸವನ್ನ ಕಾಂಗ್ರೆಸ್ ಮಾಡುತ್ತಿದೆ. ರಾಜ್ಯದಲ್ಲಿ ಉರ್ದು ಶಾಲೆ ಈ ರೀತಿ ಆರಂಭಿಸಲು ಏನು ಕಾರಣ ಎಂದು ಪ್ರಶ್ನಿಸಿದರು. 

ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲೀಂರಿಗೆ 4% ಮೀಸಲಾಯಿತಿ ಘೋಷಿಸಲಾಗಿದೆ ಎಸ್ ಸಿ ಎಸ್ಟಿಗೆ ಘೋಷಣೆ ಸರಿಯಿದೆ. ಆದರೆ ಮುಸ್ಲೀಂ ಮೀಸಲಾತಿ ಸರಿಯಲ್ಲ. ಪೆಹಲ್ಗಾಮ್ ದಾಳಿ ಮತ್ತು ನಂತರದ ಬೆಳವಣಿಗೆಗಳು ಪಾಕ್ ಪರ ಕಾಂಗ್ರೆಸ್ ಮಾತನಾಡುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಕುಸಿದಿದೆ. ಪೊಲೀಸರ ಮೇಲೆ ಹಲ್ಲೆ, ಖುದ್ದು ಸಿಎಂ ವೇದಿಕೆ ಮೇಲೆ ಎಎಸ್ಐ ಮೇಲೆ ಹೊಡೆಯಲು ಮುಂದಾಗಿರುವುದು, ಡಿಜೆಹಳ್ಳಿ ಕೆಜೆ ಹಳ್ಳಿ ಪ್ರಕರಣ,  ಬಾಂಬ್ ಹಾಕುವವರು ಬ್ರದರ್ಸ್ ಎನ್ನುವುದು ಹೀಗೆ ಒಲೈಕೆ ರಾಜಕಾರಣ ಇವರ ಸಾಧನೆಯಾಗಿದೆ ಎಂದು ದೂರಿದರು‌.

ಆರ್ಥಿಕವಾಗಿ ರಾಜ್ಯ ದಿವಾಳಿ ಹಂಚಿನಲ್ಲಿದೆ. ಎರಡನೇ ಬಾರಿಗೆ ತೆರಿಗೆ ಹಾಕಲು ಸರ್ಕಾರ ಯೋಚಿಸುತ್ತಿದೆ. ಸಾಧನಾ ಶೂನ್ಯವಾಗಿರುವ ಸರ್ಕಾರ ಸಾಧನಾ ಸಮಾವೇಶ ನಡೆಸುತ್ತಿರುವುದು ವಿಪರ್ಯಾಸವಾಗಿದೆ. ಬಾಣಂತಿಯರ ಸಾವು ಹೆಚ್ಚಾಗಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಸರಿಯಾದ ತನಿಖೆ ನಡೆಯಬೇಕು. ವೈದ್ಯರ ಕೊರತೆಯಿದೆ. ಪ್ರತಿರಂಗದಲ್ಲೂ ಸರ್ಕಾರ ಸೋಲುಂಡಿದೆ. ಸುಳ್ಳು ಸಾಧನೆ ಪ್ರಚಾರಕ್ಕೆ ನೂರಾರು ಕೋಟಿ ವೆಚ್ಚಮಾಡಲಾಗಿದೆ. ಸರ್ಕಾರಿ ಖಜಾನೆಯಿಂದ ಅವರ ಗ್ಯಾರೆಂಟಿ ಕಾರ್ಯಕರ್ತರಿಗೆ ಸಂಬಳ ನೀಡಲಾಗುತ್ತಿದೆ ಎಂದು ದೂರಿದರು. 

ಈ ಸರ್ಕಾರ ಆದಷ್ಟು ಬೇಗ ತೊಲಗಬೇಕಿದೆ. ಹಣ ಮಾಡುವ ಸ್ಪರ್ಧೆಗೆ ಕಾಂಗ್ರೆಸ್ ನಾಯಕರು ಮುನ್ನುಗ್ಗುತ್ತಿದ್ದಾರೆ. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಬಿತ್ತಿಪತ್ರ ಬಿಡುಗಡೆ ಮಾಡಲಾಯಿತು. ದುಬಾರಿ ಜೀವನ ಅಭಿವೃದ್ಧಿ ಶೂನ್ಯ ಎಂದು ಆರಗ ಘೋಷಿಸಿದರು. 

brink of financial bankruptcy, should be removed-Araga

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close