SUDDILIVE || SHIVAMOGGA
ಸಾಧನ ಸಮಾವೇಶದ ವಿರುದ್ಧ ನಾಳೆ ಜನಾಗ್ರಹ ಸಮಾವೇಶ-Janagraha rally tomorrow against Sadhan Samaavesha
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯ ಸಂಯುಕ್ತ ಹೋರಾಟ -ಕರ್ನಾಟಕ ನಾಳೆ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಎರಡು ವರ್ಷದ ಸಾಧನ ಸನಾವೇಶದ ವಿರುದ್ಧ ಜನಾಗ್ರಹ ಸಮಾವೇಶ ನಡೆಸಲು ತೀರ್ಮಾನಿಸಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್ ಆರ್ ಬಸವರಾಜ್ ಸಾಧನಾ ಸಮಾವೇಶದ ವಿರುದ್ಧ ಸಂಯುಕ್ತ ಹೋರಾಟ ಕರ್ನಾಟಕದ ವತಿಯಿಂದ ಬೆಂಗಳೂರಿನ ಗಾಂಧಿ ಭವನದಲ್ಲಿ ಜನಚಳುವಳಿಗಳ ಜನಾಗ್ರಹ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಕೃಷಿ ಕಾಯ್ದೆ ರದ್ದು, ಖಾಸಗೀ ಕರಣ ರದ್ದು, ಹಕ್ಕುಪತ್ರ ನೀಡದೆ ಇರುವುದು. ರೈತರ ಉತ್ಪನ್ನ ಕುಸಿತ, ಖರೀದಿ ಕೇಂದ್ರ ಆರಂಭಿಸಿಲ್ಲ. ಸ್ಮಾರ್ಟ್ ಮೀಟರ್ ಅಳವಡಿಕೆ ಬೇಡ ಎಂದರೂ ಮುಂದಾಗಿರುವುದು. ನೀರಾವಿಗೆ ಹಣ ದೊರಕಿಸಿಲ್ಲ. ಸರ್ಕಾರ ಏನೂ ಕ್ರಮ ಕೈಗೊಳ್ಳದ ಕಾರಣ ಈ ಸಮಾವೇಶ ಅನಿವಾರ್ಯವಾಗಿದೆ.
ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯುವ ಜನಾಗ್ರಹ ಸಮಾವೇಶದಲ್ಲಿ ಸಂಪೂರ್ಣ ರಾಜ್ಯ ಸರ್ಕಾರವನ್ನ ವಿರೋಧಿಸಲಾಗುವುದು. ಕಾರ್ಪರೇಟ ಸಂಸ್ಥೆಗಳಿಗೆ ಬೆಂಬಲಿಸುವ ರಾಜ್ಯ ಸರ್ಕಾರ ಗ್ತಾರೆಂಟಿಯಲ್ಲಿ ಮುಳುಗಿದೆ ಎಂದು ದೂರಿದರು.
ಕೆ.ಎಲ್ ಅಶೋಕ್ ಮಾತನಾಡಿ, ಕಾಂಗ್ರೆಸ್ ನ ಸಾಧನಾ ಸಮಾವೇಶ ಹಾಸ್ಯಾಸ್ಪವಾಗಿದೆ. ಮುಂದಿನ ಚುನಾವಣೆಯಲ್ಲಿ ನಿಮ್ಮ ಘೋರಿಯನ್ನ ತೋಡಿಕೊಳ್ಳದಿರುವಂತೆ ಹಾಗೂ ಮುಂದಿನ ದಿನಗಳಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಹೋರಾಟ ಅನಿವಾರ್ಯವಾಗಿದೆ.
ಡಿಎಸ್ ಎಸ್ ಅಂಬೇಡ್ಕರ್ ವಾದದ ಹಾಲೇಶಪ್ಪ ಮಾತನಾಡಿ, ಆದೇಶ ಆಗಿ 46 ವರ್ಷ ಆದರೂ ರೈತರಿಗೆ ಭೂಮಿ ಬಿಡಿಸಿಕೊಟ್ಟಿಲ್ಲ. ಎಸ್ ಇಪಿ ಟಿಎಸ್ಪಿ ಹಣ ಬಿಡುಗಡೆ ಮಾಡಿಲ್ಲ. ಕೊಟ್ಟಂತ ಭರವಸೆಯನ್ನ ಈಡೇರಿಸದೆ ಸಾಧನಾ ಸಮಾವೇಶ ಹಾಸ್ಯಾಸ್ಪವಾಗಿದೆ. ಆತ್ಮವಲೋಕನ ಸಮಾವೇಶ ನಡೆಸಬೇಕಿದ್ದ ಕಾಂಗ್ರೆಸ್ ಗೆ ಬುದ್ದಿಕಲಿಸಬೇಕಿದೆ ಎಂದು ಎಚ್ಚರಿಸಿದರು.
ಹನುಮಕ್ಕ, ನಾರಾಯಣ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
against Sadhan Samaavesha