ಅತ್ತ ಸೈನಿಕರಿಂದ ಆಪರೇಷನ್ ಸಿಂಧೂರ ನಡೆದರೆ, ಇತ್ತ ಪೊಲೀಸರಿಂದ ಆಪರೇಷನ್ ರೌಡಿಶೀಟರ್!

SUDDILIVE || SHIVAMOGGA

 ಅತ್ತ ಸೈನಿಕರಿಂದ ಆಪರೇಷನ್ ಸಿಂಧೂರ ನಡೆದರೆ, ಇತ್ತ ಪೊಲೀಸರಿಂದ ಆಪರೇಷನ್ ರೌಡಿಶೀಟರ್!conducting Operation Rowdysheeter

Rowdy, sheeter





ದೇಶದ ಗಡಿ ಪ್ರದೇಶದಲ್ಲಿ ಪಾಕ್ ನೆಲೆಯ ಉಗ್ರರ ಮೇಲೆ ಭಾರತೀಯ ಸೇನೆ ಬೆಳ್ಳಂಬೆಳಿಗ್ಗೆ ಏರ್ ಸ್ಟ್ರೈಕ್ ಮಾಡಿದ್ರೆ, ಇತ್ತ ನಾಗರೀಕ ಸೊಸೈಟಿಯಲ್ಲಿ ರೌಡಿ ಎನಿಸಿಕೊಂಡು ಓಡಾಡುತ್ತಿರುವ ರೌಡಿಶೀಟರ್ ಗಳ ಮನೆಗಳಿಗೆ ಜಿಲ್ಲಾ ಪೊಲೀಸ್ ಇಂದು ಬೆಳಗ್ಗಿನ‌ಜಾವ ಭೇಟಿ ನೀಡಿ ಶಾಕ್ ನೀಡಿದೆ.

ಶಿವಮೊಗ್ಗ ಜಿಲ್ಲೆಯಾದ್ಯಂತ  ಕಾನೂನು ಸುವ್ಯವಸ್ಥೆ ಹಿತದೃಷ್ಠಿಯಿಂದ ಮುಂಜಾಗ್ರತಾ ಕ್ರಮವಾಗಿ  ಮೇ.07 ರಂದು  ಬೆಳಗಿನ ಜಾವ ಎಸ್ಪಿ ಮಿಥುನ್ ಕುಮಾರ್ ಜಿ.ಕೆ  ಮತ್ತು ಅಡಿಷನಲ್ ಎಸ್ಪಿಗಳಾದ  ಅನಿಲ್ ಕುಮಾರ್ ಭೂಮರಡ್ಡಿ ರವರ ಮಾರ್ಗದರ್ಶನದಲ್ಲಿ,  ಎ ಉಪ ವಿಭಾಗದಲ್ಲಿ ಡಿವೈಎಸ್ಪಿ  ಬಾಬು ಆಂಜನಪ್ಪ,  ಬಿ ಉಪ ವಿಭಾಗದಲ್ಲಿ ಡಿವೈಎಸ್ಪಿ ಸಂಜೀವ್ ಕುಮಾರ್ ಟಿ, ಭದ್ರಾವತಿ ಉಪ ವಿಭಾಗದಲ್ಲಿ ಡಿವೈಎಸ್ಪಿ ನಾಗರಾಜ್, ಸಾಗರ ಉಪ ವಿಭಾಗದಲ್ಲಿ, ಡಿವೈಎಸ್ಪಿ ಗೋಪಾಲಕೃಷ್ಣ ತಿಮ್ಮಣ್ಣ ನಾಯ್ಕ್, ಶಿಕಾರಿಪುರ ಉಪ ವಿಭಾಗದಲ್ಲಿ ಡಿವಥೆಸ್ಪಿ ಕೇಶವ್, ಮತ್ತು ತೀರ್ಥಹಳ್ಳಿ ಉಪ ವಿಭಾಗದಲ್ಲಿ ಡಿವೈಎಸ್ಪಿ ಅರವಿಂದ್ ಕಲಗುಜ್ಜಿ ಅವರ ಠಾಣಾ ವ್ಯಾಪ್ತಿಯಲ್ಲಿ ಬರುವ ರೌಡಿಶೀಟರ್ ಗಳ ಮನೆಗಳಿಗೆ ಪಿಐ, ಪಿಎಸ್ಐ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಶಾಕ್ ನೀಡಿದ್ದಾರೆ. 

ಪ್ರತ್ಯೇಖ ತಂಡಗಳಾಗಿ ಒಟ್ಟು 45 ಕ್ಕೂ ಹೆಚ್ಚು ಮನೆಗಳಿಗೆ  ಏಕಕಾಲದಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ರೌಡಿ ಶೀಟರ್  ಮನೆಗಳ ಮೇಲೆ ದಾಳಿ ಮಾಡಲಾಗಿದೆ. ಮನೆಗಳನ್ನ ತಪಾಸಣೆ ತಪಾಸಣೆ ನಡೆಸಿ ಅವರ ಹಾಜರಾತಿ, ಹಾಲಿ ಮಾಡುತ್ತಿರುವ ಕೆಲಸ, ಮನೆಯಲ್ಲಿ ಮಾದಕ ವಸ್ತು ಹಾಗೂ ಮಾರಕಾಸ್ತ್ರಗಳನ್ನು ಇಟ್ಟುಕೊಂಡಿರುವ ಬಗ್ಗೆ ಪರಿಶೀಲನೆ ನಡೆಸಲಾಗಿದೆ.  ಮುಂದಿನ ದಿನಗಳಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಮತ್ತು ಶಾಂತಿಗೆ ಭಂಗವನ್ನುಂಟು ಮಾಡುವಂತಹ ಕೃತ್ಯಗಳಲ್ಲಿ ಭಾಗಿಯಾಗದಂತೆ ಸೂಕ್ತ ಎಚ್ಚರಿಕೆ ನೀಡಲಾಗಿದೆ. 

conducting Operation Rowdysheeter

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close