ರಾಜ್ಯ ಸರ್ಕಾರ ಶೂನ್ಯ ಸಾಧನೆ, ಪ್ರವಾಸದ ಮಾತನಾಡಿದ ಮಾಜಿ ಸಿಎಂ-former CM speaks on tour

SUDDILIVE || SHIVAMOGGA

ರಾಜ್ಯ ಸರ್ಕಾರ ಶೂನ್ಯ ಸಾಧನೆ, ಪ್ರವಾಸದ ಮಾತನಾಡಿದ ಮಾಜಿ ಸಿಎಂ-State government has zero achievements, former CM speaks on tour

EXCM, tour


ರಾಜ್ಯದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ನಡಿತಾ ಇಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ಆರೋಪಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ನೀವು ಎಲ್ಲಿಂದ ಎಲ್ಲಿ ಹೋದರು ಸಹ ಒಂದು ಕಿಲೋಮೀಟರ್ ರಸ್ತೆ ಸಹ ಮಾಡುವಂತದ್ದು ಏನು ಕಾಣ್ತಾ ಇಲ್ಲ. ಸುಮ್ನೆ ನಾವು ಅಭಿವೃದ್ಧಿ ಮಾಡ್ತಾ ಇದ್ದೇವೆ ಅಂತ ಹೇಳಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಬೊಬ್ಬೆ ಹೋಡಿತಾ ಇದ್ದಾರೆ ಎಂದು ದೂರಿದರು.

ಯಾವುದೇ ರೀತಿಯ ಅಭಿವೃದ್ಧಿ ಕಾರ್ಯ ಆಗ್ತಾ ಇಲ್ಲ. ಇದೆಲ್ಲದರ ವಿರುದ್ಧ ಬೀದಿಗಿಳಿದು ಹೋರಾಟ ಮಾಡೋದು ಅನಿವಾರ್ಯವಾಗಿದೆ. ಇದಕ್ಕಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ನಾನು ಸಹ ಮುಂದಿನ ವಾರದಿಂದ ರಾಜ್ಯ ಪ್ರವಾಸ ಕೈಗೊಳ್ಳಲಿದ್ದೇನೆ ಎಂದರು. 

ಭ್ರಷ್ಟ ಹಾಗೂ ಅಭಿವೃದ್ಧಿ ರಹಿತ ಸರ್ಕಾರವನ್ನು ಕಿತ್ತೊಗೆಯಲು ಪ್ರವಾಸ ಮಾಡುತ್ತೇನೆ. ಈ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂಬ ವಿಶ್ವಾಸ ನನಗೆ ಇದೆ. ಶಾಸಕತ್ವ ಸ್ಥಾನದಿಂದ ಜನಾರ್ದನ ರೆಡ್ಡಿ ಅನರ್ಹರಾಗುವ ಹಿನ್ನೆಲೆಯಲ್ಲಿ ಅವರ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದರು. 

ಕೇಂದ್ರ ಸರ್ಕಾರ ಅಮೆರಿಕದ ಒತ್ತಡಕ್ಕೆ ಮಣಿದು ಕದನ ವಿಧಾನ ಘೋಷಿಸಿದೆ ಎಂಬ ಕಾಂಗ್ರೆಸ್ ಆರೋಪ ವಿಚಾರ ಅದಕ್ಕೆ ಅರ್ಥ ಇಲ್ಲ. ಅದು ನಮ್ಮ ಹೋರಾಟಕ್ಕೆ ಸಿಕ್ಕ ಪ್ರತಿಫಲವಾಗಿದೆ. ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿ ಅವರನ್ನು ಮೂಲೆಗುಂಪು ಮಾಡಿದ್ದೇವೆ. 

ಪ್ರಧಾನಿ ಮೋದಿ ಅವರ ಯಶಸ್ಸು ಸಹಿಸಲಾಗದೆ ಯಾರೇನು ಮಾತನಾಡಿದರು ಅದಕ್ಕೆ ಅರ್ಥ ಇಲ್ಲ. ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿರುವ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ರಾಜ್ಯ ಕಾಂಗ್ರೆಸ್ ಸರ್ಕಾರ ಎರಡು ವರ್ಷದ ಸಾಧನೆಯ ಆಚರಣೆಗೆ ಮುಂದಾಗಿದೆ. ಅವರು ಏನಾದರೂ ಮಾಡಿಕೊಳ್ಳಲಿ ಅದಕ್ಕೂ ನಮಗೂ ಸಂಬಂಧ ಇಲ್ಲ ಎಂದರು. 

former CM speaks on tour

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close