ಅಕ್ರಮ ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಗಳಿಗೆ ಕಾರಾಗೃಹವಾಸ ಸಜೆ- sentenced to prison

SUDDILIVE || SHIVAMOGGA

ಅಕ್ರಮ ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಗಳಿಗೆ ಕಾರಾಗೃಹವಾಸ ಸಜೆ-People involved in illegal ganja trafficking sentenced to prison

Sentenced, pison


ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಆರೋಪಿಗಳ ಮೇಲಿನ ಆರೋಪ ದೃಢಪಟ್ಟ ಹಿನ್ನೆಲೆ ಅವರಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ್ ನಾಯಕರ್‌ರವರು 4 ವರ್ಷಗಳ ಸಾಮಾನ್ಯ ಕಾರಾಗೃಹ ಸಜೆ ಮತ್ತು ರೂ.25 ಸಾವಿರ ದಂಡ ವಿಧಿಸಿ, ಮೇ 07 ರಂದು ತೀರ್ಪು ನೀಡಿ ಆದೇಶಿಸಿರುತ್ತಾರೆ.

ಲಕ್ಕಿನಕೊಪ್ಪ ಕಡೆಗೆ ಬರುವ ಸಾರ್ವಜನಿಕ ರಸ್ತೆಯಲ್ಲಿ ಬಜಾಜ್ ಪಲ್ಸರ್ ಬೈಕ್ ಸಂಖ್ಯೆ : ಕೆ.ಎ 14 ಇಎ 5998 ರಲ್ಲಿ ಸರ್ಕಾರದ ಯಾವುದೇ ಪರವಾನಿಗೆ ಇಲ್ಲದೇ ಕಾನೂನು ಬಾಹಿರವಾಗಿ, ಗಾಂಜಾ ಮಾರಾಟ ಮಾಡುವ ಹಾಗೂ ಅಕ್ರಮವಾಗಿ ಲಾಭ ಗಳಿಸುವ ಉದ್ದೇಶದಿಂದ ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಶಿವಮೊಗ್ಗ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರು ದಿ: 08-07-2021 ರಂದು ತಮ್ಮ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊAದಿಗೆ ದಾಳಿ ಮಾಡಿ ಸದರಿ ಬೈಕ್‌ನಲ್ಲಿ ಕಾನೂನು ಬಾಹಿರವಾಗಿ ಆರೋಪಿತರು ಸಾಗಾಣಿಕೆ ಮಾಡುತ್ತಿದ್ದ 3 ಕೆಜಿ 380 ಗ್ರಾಮ್ ತೂಕದ ಒಣ ಗಾಂಜಾವನ್ನು ಪಂಚರ ಸಮಕ್ಷಮ ಅಮಾನತುಪಡಿಸಿಕೊಂಡು ಆರೋಪಿತರಾದ ಜೀವನ್ ಎಂ, ಸರೋನ ಎಂ, ಜೀವನ್ ಕೆ, ನಿತಿನ್ ಎಸ್ @ ಕಡ್ಡಿ, ಮುರುಗ ಎಲ್ ಇವರ ವಿರುದ್ದ ಪ್ರಕರಣ ದಾಖಲಿಸಿ, ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.

ಪ್ರಕರಣವು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಸಾಕ್ಷಿಗಳ ಸಾಕ್ಷö್ಯದ ಮತ್ತು ಇನ್ನಿತರ ಪೂರಕ ಸಾಕ್ಷಾö್ಯಧಾರಗಳ ಆಧಾರದ ಮೇಲೆ ಹಾಗೂ ಸರ್ಕಾರದ ಪರ ಅಭಿಯೋಜಕರು ಮಂಡಿಸಿದ ವಾದವನ್ನು ನ್ಯಾಯಾಲಯವು ಪುರಸ್ಕರಿಸಿ, ಆರೋಪಿಗಳ ಮೇಲಿನ ಆರೋಪ ದೃಢಪಟ್ಟಿದ್ದರಿಂದ ಆರೋಪಿಗಳಿಗೆ 4 ವರ್ಷಗಳ ಸಾಮಾನ್ಯ ಕಾರಾಗೃಹ ವಾಸ ಸಜೆ ಮತ್ತು 

ರೂ. 25 ಸಾವಿರ ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ತೀರ್ಪು ನೀಡಿರುತ್ತಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶ್ರೀ ಸುರೇಶ್ ಕುಮಾರ್ ಎ.ಎಂ ವಾದವನ್ನು ಮಂಡಿಸಿದ್ದರು ಎಂದು ಸರ್ಕಾರಿ ಅಭಿಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

sentenced to prison

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close