SUDDILIVE || SHIVAMOGGA
ಶಿಕಾರಿ ಕ್ರೇಜ್ ಗೆ ಬಲಿಯಾದ ಯುವಕ-A young man who fell victim to the hunting craze
ಸಾವಿಗೆ ಸಾವಿರ ದಾರಿ ಅಂತ ಒಂದು ಮಾತಿದೆ, ಅದೇ ರೀತಿ ಶಿವಮೊಗ್ಗದಲ್ಲೊಬ್ಬ ಯುವಕನ ಸಾವು ಒಂದೇ ಒಂದು ಹುಚ್ಚು ಆಸೆಯಿಂದ ದಾರುಣವಾಗಿ ಶವವಾಗಿದ್ದಾನೆ. ಕಾಡಿಗೆ ಹೋಗಿ ಶಿಕಾರಿ ಮಾಡಿ ಪ್ರಾಣಿಗಳನ್ನ ಸಾಯಿಸಬೇಕು ಎಂಬ ಒಂದು ಆಸೆಗೆ ತಾನೆ ಬಲಿಯಾಗಿದ್ದಾನೆ. ಕಾಡು ಪ್ರಾಣಿಗಳ ಮಾಂಸ ತಿನ್ನಲು ಹೋದ ಯುವಕ ಈಗ ಮಿಸ್ ಫೈರ್ ಆಗಿ ಸಾವನ್ನಪ್ಪಿದ್ದಾನೆ. ಏನಪ್ಪಾ ಈ ಶಿಕಾರಿ ಕಥೆ ಅಂತೀರಾ ಆಗಿದ್ರೆ ಈ ಸ್ಟೋರಿ ನೋಡಿ!
ಮಲೆನಾಡು ಭಾಗದಲ್ಲಿ ಶಿಕಾರಿಗೆ ಇನ್ನೂ ಕೂಡ ಕ್ರೇಜ್ ಹಾಗೆ ಉಳಿದಿದೆ. ಹಲವಾರು ಕಾನೂನು ಕಟ್ಟಲೆಗಳು ಇದ್ದರೂ ಸಹ ಬಂಡ ಧೈರ್ಯ ಮಾಡಿ ಶಿಕಾರಿಗೆ ಹೋಗುವುದು ಇಲ್ಲಿ ಸರ್ವೇಸಾಮಾನ್ಯವಾಗಿದೆ. ಪೊಲೀಸರು ಹಾಗೂ ಅರಣ್ಯ ಇಲಾಖೆಯವರ ಕಣ್ತಾಪ್ಪಿಸಿ ಕಾಡು ಪ್ರಾಣಿಗಳ ಮಾಂಸದ ಆಸೆಗೆ ಶಿಕಾರಿಗೆ ಹೋಗುವರ ಸಂಖ್ಯೆ ಇನ್ನೂ ಕಡಿಮೆ ಆಗಿಲ್ಲ.
ಆ ಸಮಯದಲ್ಲಿ ಆಗುವಂತಹ ದುರಂತಗಳು ಕೂಡ ದಿನೇ ದಿನ ಹೆಚ್ಚು ತಲೆ ಇದೆ. ಅದಕ್ಕೆ ಉದಾಹರಣೆ ಎಂಬಂತೆ ಕಳೆದ ರಾತ್ರಿ ನಡೆದಂತಹ ದುರಂತ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಟ್ಟೆಹಕ್ಲು ಗ್ರಾಮದಲ್ಲಿ ನಡೆದ ಈ ಘಟನೆ ಈಗ ಮಲೆನಾಡಿನಲ್ಲಿ ಬೆಚ್ಚಿ ಬೀಳಿಸಿದೆ. ಇನ್ನು ಬಾಳಿ ಬದುಕ ಬೇಕಿದ್ದ ಯುವಕ ತಾನು ತೆಗೆದುಕೊಂಡು ಹೋಗಿದ್ದ ಕೋವಿಯಿಂದಲೇ ಹತನಾಗಿದ್ದಾನೆ.
ಹೌದು.... ಬೇಟೆಗೆಂದು ಹೋಗಿದ್ದ ತೀರ್ಥಹಳ್ಳಿಯ ಬಸವಾನೆ ಸಮೀಪದ ಕೊಳವಾರ ಗ್ರಾಮದ ಗೌತಮ್ (೨೫) ಎಂಬ ಯುವಕ ಮಿಸ್ ಫೈಯರ್ನಿಂದ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ. ಪ್ರಾಣಿಗಳನ್ನು ಕೊಂದಲು ತೆಗೆದುಕೊಂಡು ಹೋಗಿದ್ದ ತನ್ನ ಗನ್ ನಿಂದಲೇ ತಾನು ಇಹಲೋಕ ತ್ಯಜಿಸಿದಾನೆ. ಶಿಕಾರಿ ಕ್ರೇಜಿಗೆ ಬಲಿಯಾದ ಗೌತಮ್ ಕುಟುಂಬದಲ್ಲಿ ಈಗ ನೀರವ ಮೌನ ಹಾಗೂ ದುಃಖ ಮಡುಗಟ್ಟಿದೆ.
ಗೌತಮ್ ಕಳೆದ ರಾತ್ರಿ ತನ್ನ ನಾಲ್ಕು ಜನ ಸಂಬಂಧಿಕರೊಂದಿಗೆ ಶಿಕಾರಿಕಾಗಿ ಅರಣ್ಯದಲ್ಲಿ ಸುತ್ತಾಡುವ ವೇಳೆ ಒಂದು ಗುಡ್ಡವನ್ನು ಇಳಿಯಬೇಕಾಗಿರುತ್ತದೆ. ಆ ಸಮಯದಲ್ಲಿ ಗೌತಮ್ ಬಳಿ ಇದ್ದಂತಹ ಗನ್ನು ಜಾರಿಗೆ ಬೀಳುತ್ತೆ ಆಗ ತನ್ನ ಕೈಯಲ್ಲಿದ್ದ ಗನ್ ಫೈಯರ್ ಆಗಿ ಗುಂಡು ಗೌತಮ್ನ ಎದೆ ಸೀಳಿಕೊಂಡು ಹಾರಿ ಹೋಗುತ್ತದೆ. ಅದಾದ ಬಳಿಕ ಗೌತಮ್ ಗುಡ್ಡದಿಂದ ಜಾರಿಬೀಳುತ್ತಾನೆ. ಈ ಹೊತ್ತಿಗಾಗಲೇ ಆತನ ಜೊತೆಗಿದ್ದ ಸಂಬಂಧಿಕರು ಆಸ್ಪತ್ರೆಗೆ ಕರೆತರುತ್ತಾರೆ, ಅಷ್ಟರಲ್ಲಾಗಲೇ ಗೌತಮ್ನ ಪ್ರಾಣಪಕ್ಷಿ ಹಾರಿ ಹೋಗಿರುತ್ತೆ.
ತೀರ್ಥಹಳ್ಳಿಯ ಭಾಗದಲ್ಲಿ ಈ ರೀತಿ ಆ ಘಟನೆಗಳು ಇದೇ ಮೊದಲಿನಲ್ಲ. ಹಲವಾರು ಬಾರಿ ಈ ರೀತಿಯ ಘಟನೆಗಳು ನಡೆದಿದೆ. ಕೆಲವರು ಪ್ರಾಣವನ್ನ ಕಳೆದುಕೊಂಡರೆ ಕೆಲವರು ಶಾಶ್ವತ ಅಂಗವಿಕಲರಾಗಿದ್ದಾರೆ. ಅದಕ್ಕೆ ಉದಾಹರಣೆ ಎಂದರೆ ಕಳೆದ ಎರಡು ವರ್ಷಗಳ ಹಿಂದೆ ನಡೆದಂತಹ ಗ್ರಾಮ ಪಂಚಾಯತಿ ಸದಸ್ಯ ಕಾಂತರಾಜ್ ಸಾವು. ಶಿಕಾರಿ ವೇಳೆ ಹಾರಿಸಿದ್ದ ಗುಂಡು ಕಾಂತರಾಜ್ ಎದೆಗೆ ಹೊಕ್ಕು ಸಾವನ್ನಪ್ಪಿದ್ದರು. ಘಟನೆ ನಡೆದಿದ್ದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ನೊಣಬೂರು ಗ್ರಾಮದಲ್ಲಿ ನಡೆದಿತ್ತು. ನೊಣಬೂರು, ಅರಳಸುರಳಿ ಬಳಿ ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿತ್ತು. 12 ಜನರ ಗುಂಪು ಕಾಡಿಗೆ ಬೇಟೆಯಾಡುವುದಕ್ಕೆ ಹೋಗಿತ್ತು. ಈ ವೇಳೆ, ಮಿಸ್ ಫೈರ್ ಆಗಿ ಗುಂಡು ತಗುಲಿ ಕಾಂತರಾಜ್ ಸಾವನ್ನಪ್ಪಿದ್ದಾರು. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತು
ಒಟ್ಟಿನಲ್ಲಿ ಮಲೆನಾಡು ಭಾಗದಲ್ಲಿ ನಡೆಯುತ್ತಿರುವ ಶಿಕಾರಿ ಹುಚ್ಚಿಗೆ ಸಂಬಂಧ ಪಟ್ಟ ಇಲಾಖೆ ಕಡಿವಾಣ ಹಾಕಲೇಬೇಕಾಗಿದೆ. ಇದರಿಂದ ಹಲವರ ಜೀವ ಉಳಿಯುತ್ತದೆ. ಇನ್ನು ಈ ಗೌತಮ್ ಪ್ರಕರಣದ ತನಿಖೆ ಎಲ್ಲಿಗೆ ತಲುಪುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
victim to the hunting craze