SUDDILIVE || SIDDAPURA
ಸೆರೆ ಸಿಕ್ಕ ಅಡ್ಕಬಡ್ಕ ಕಾಡಾನೆ-Adkabadka Kadane who was captured
ಸಕಲೇಶಪುರದಿಂದ ದಾರಿ ತಪ್ಪಿದ ಅಡ್ಕ ಬಡ್ಕ ಕಾಡಾನೆಯನ್ನ ಸಿದ್ದಾಪುರದ ಕಾಡಿನಲ್ಲಿ ಸೆರೆ ಸಿಕ್ಕಿದೆ. ಅರವಳಿಕೆ ನೀಡಿ ಕಾಡಾನೆಯನ್ನು ಹಿಡಿಯುವಲ್ಲಿ ಹಾಸನದ ಡಾ ರಮೇಶ್ ಮತ್ತು ಸಕ್ರೆಬೈಲಿನ ಸಿಬ್ಬಂದಿಗಳ ಸಹಕಾರದಲ್ಲಿ ನಡೆದ ಕಾರ್ಯಾಚರಣೆ ಯಶಸ್ವಿಯಾಗಿದೆ.
ಸಕಲೇಶಪುರದಿಂದ ಕಾಣೆಯಾಗಿದ್ದ ಅಡ್ಕ ಬಡ್ಕ ಕಾಡಾನೆ ತೀರ್ಥಳ್ಳಿಯ ಹಾರಗ ಮೂಲಕ ಪಶ್ಚಿಮ ಘಟ್ಟದ ಮೂಲಕ ಕರಾವಳಿಯ ಕುಂದಾಪುರ ತಾಲೂಕು ಸಿದ್ದಾಪುರದಲ್ಲಿ ಓಡಾಡಿಕೊಂಡಿತ್ತು ದಾರಿ ತಪ್ಪಿದ ಕಾಡಾನೆಯಾಗಿ ಊರೂರು ತಿರುಗಿತ್ತು ಇಂದು ಕಾಡಾನೆಯನ್ನು ಸೆರೆ ಹಿಡಿಯಲು ಸಕ್ರೆ ಬೈಲಿನ ಬಾಲಣ್ಣ ಸೋಮಣ್ಣ ಹಾಗೂ ಬಹದ್ದೂರ್ ಆನೆಯನ್ನು ಕರೆತಂದು ಸಿದ್ದಾಪುರದಲ್ಲಿ ಸೆರೆಹಿಡಿಯಲಾಗಿದೆ.
ಇಂದು ರಾತ್ರಿಯೇ ಸಿದ್ದಾಪುರದಿಂದ ಸಕ್ರೆ ಬೈಲಿನ ಕ್ರಾಲ್ ಗೆ ಅಡ್ಕ ಬಡ್ಕ ಕಾಡಾನೆಯನ್ನು ತಂದು ಬಿಡಲಾಗುತ್ತದೆ.
Adkabadka Kadane