SUDDILIVE || BHADRAVATHI
ಹುಚ್ಚರವಿ Vs ಲೂಸ್ ಮಾದ-Crazy Ravi Vs Loose Mada
ಮೊನ್ನೆ ತಾನೆ ಭದ್ರಾವತಿಯ ಹೊಸಮನೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಚ್ಚು ಲಂಗು ತೋರಿಸಿ ರೌಡಿಶೀಟರ್ ಮನೆಗೆ ನುಗ್ಗಿ ಗಲಾಟೆ ಬೆನ್ನಲ್ಲೇ ಮತ್ತೊಂದು ಪ್ರಕರಣ ನಡೆದಿದೆ. ಮಾಚೇನಹಳ್ಳಿಯ ಶಿವಮೊಗ್ಗ ಡೈರಿ ಬಳಿ ಆಯುಧಗಳಿಂದ ಹಲ್ಲೆ ನಡೆಸಿದ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.
ಮಾಹಿತಿಯ ಪ್ರಕಾರ ಕಾನೂನು ಬಾಹಿರ ಚಟುವಟಿಕೆಯಾದ ಇಸ್ಪೀಟ್ ಆಟವನ್ನು ವಾಚ್ ಮಾಡುವ ವ್ಯಕ್ತಿಯ ಮೇಲೆ ಇಸ್ಪೀಟ್ ನಡೆಸುವ ವ್ಯಕ್ತಿಯು ಸಂಬಳದ ವಿಚಾರದಲ್ಲಿ ಗಲಾಟೆ ನಡೆದು ನಂತರ ಕುಡಿದ ವೇಳೆ ತಾರಕಕ್ಕೇರಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಆದರೆ ಈ ಆರೋಪವನ್ನ ಸ್ಥಳೀಯ ಪೊಲೀಸರು ಅಲ್ಲಗೆಳದಿದ್ದು ಕುಡಿತದ ವಿಚಾರದಲ್ಲಿ ಹಲ್ಲೆ ನಡೆದಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಹಲ್ಲೆ ನಡೆಸಿದ ವ್ಯಕ್ತಿಯನ್ನ ಶಿವಲಿಂಗೇಗೌಡ ಯಾನೆ ಲೂಸ್ ಮಾದ ಎಂದು ಹೇಳಲಾಗುತ್ತಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನ ರವಿಪ್ರಸಾದ್ ಯಾನೆ ಹುಚ್ಚ ರವಿ ಆತನ ಕಾಲಿಗೆ ಮಾರಕಸ್ತ್ರಗಳಿಂದ ಹಲ್ಲೆ ನಡೆದಿದೆ. ಪ್ರಕರಣ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ದಾಖಲಾಗುವ ಸಾಧ್ಯತೆಯಿದೆ.
razy Ravi Vs Loose Mada