ಸಾಗರ ರೈಲ್ವೆ ನಿಲ್ದಾಣಕ್ಕೆ ಡಾ. ರಾಮ ಮನೋಹರ ಲೋಹಿಯರವರ ಹೆಸರಿಡುವಂತೆ ಅಗ್ರಹ- Demand to name Sagar Railway Station

 SUDDILIVE || SHIVAMOGGA

ಸಾಗರ ರೈಲ್ವೆ ನಿಲ್ದಾಣಕ್ಕೆ ಡಾ. ರಾಮ ಮನೋಹರ ಲೋಹಿಯರವರ ಹೆಸರಿಡುವಂತೆ ಅಗ್ರಹ-Demand to name Sagar Railway Station after Dr. Ram Manohar Lohiya

Sagara, railway

ಸಾಗರದ ಜಂಬಗಾರು ರೈಲ್ವೆ ನಿಲ್ದಾಣಕ್ಕೆ ರಾಮಮನೋಹರ ಲೋಹಿಯಾ ರೈಲ್ವೆ ನಿಲ್ದಾಣ ಎಂದು ಕಲ್ಲೂರು ಮೇಘರಾಜ್ ತಿಳಿಸಿದರು. ಈ ರೈಲ್ವೆ ನಿಲ್ದಾಣಕ್ಕೆ ಭಾರತ ಸರ್ಕಾರದ ಪ್ರಧಾನಿ ಮೋದಿ ಹಾಗೂ ಗೃಹ ಸಚಿವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಳುವವನೇ ಹೊಲದೊಡೆಯ ಸಿದ್ದಾಂತದ ಐತಿಹಾಸಿಕ ಕಾಗೋಡು ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಡಾಕ್ಟರ್ ರಾಮ ಮನೋಹರ ಲೋಹಿಯಾ ರವರು ಸಾಗರದ ಜಂಬಗಾರು ರೈಲ್ವೆ ನಿಲ್ದಾಣದಲ್ಲಿ ಪೊಲೀಸರಿಂದ ಬಂಧನ ಕೊಡಗಾಗಿದ್ದರು ಇದು ಅಂತರಾಷ್ಟ್ರೀಯ ಸುದ್ದಿಗೆ ಒಳಗಾಗಿ ತು ಎಂದು ತಿಳಿಸಿದರು 

2000 ಜೂನ್ 13ರಂದು ಸಾಗರದ ಜಂಬಗಾರು ರೈಲ್ವೆ ನಿಲ್ದಾಣದ ಎದುರು ನಮ್ಮ ಟ್ರಸ್ಟ್ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಅರುಣ್ ಪ್ರಸಾದ್ ರವರ ನೇತೃತ್ವದಲ್ಲಿ ಶಿಮೊಗ್ಗ ಜಿಲ್ಲಾಭಿವೃದ್ಧಿ ಸಮಿತಿಯು ಕಾರ್ಯಕ್ರಮ ಒಂದನ್ನು ಹಮ್ಮಿಕೊಂಡು ಸಾಗರ ಜಂಬಗಾರು ರೈಲ್ವೆ ನಿಲ್ದಾಣಕ್ಕೆ ರಾಮ ಮನೋಹರ ಲೋಹಿಯಾ ರವರ ಹೆಸರಿಡುವ ಪ್ರಸ್ತಾವನೆಯನ್ನು ಮುಂದಿಡಲಾಗಿತ್ತು.

ಇಷ್ಟು ದಿನವಾದರೂ ಜಂಬಗಾರು ರೈಲ್ವೆ ನಿಲ್ದಾಣಕ್ಕೆ ರಾಮ ಮನೋಹರ ಲೋಹಿಯರವರ ಹೆಸರಿಡುವಂತೆ 25 ವರ್ಷಗಳ ಹೋರಾಟ ಹಿನ್ನೆಲೆ ಇದ್ದರೂ ಸಹ ನಾಮಕರಣವಾಗಿಲ್ಲ ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ರವರಿಗೆ ಪತ್ರ ಬರೆದಿದ್ದು ವಿ ಸೋಮಣ್ಣನವರಿಗೂ ಮಾಹಿತಿ ರವಾನಿಸಲಾಗಿದೆ ಎಂದರು.

Demand to name Sagar Railway Station

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close