ಮೆಗ್ಗಾನ್ ಶಿಫ್ಟ್ ಮಾಡದಂತೆ ಮಾಜಿ ಶಾಸಕ ಆಗ್ರಹ-Megan not to shift

 SUDDILIVE || SHIVAMOGGA

ಮೆಗ್ಗಾನ್ ಶಿಫ್ಟ್ ಮಾಡದಂತೆ ಮಾಜಿ ಶಾಸಕ ಆಗ್ರಹ-Former MLA urges Megan not to shift

Meggan, shft

ಮೆಗ್ಗಾನ್ ಆಸ್ಪತ್ರೆಯನ್ನ ಶಿಫ್ಟ್ ಆಗಬಾರದು ಇರುವ ವ್ಯವಸ್ಥೆ ಸರಿಪಡಿಸುವಂತೆ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್ ಒತ್ತಾಯಿಸಿದರು. 

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೆಗ್ಗಾನ್ ಯಾವುದೋ 6 ಎಕರೆಯಲ್ಲಿ ನಿರ್ಮಾಣವಾಗಲಿದೆ ಎಂಬ ಗುಸುಗುಸು ಆರಂಭವಾಗಿದ್ದು, ಈ ಬಗ್ಗೆ ಸರ್ಕಾರ ಆಸ್ಪತ್ರೆಯನ್ನ ಶಿಪ್ಟ್ ಆಗದಂತೆ ಒತ್ತಾಯಿಸಿದರು. 

ಮಂಗನ ಕಾಯಿಲೆಗೆ ಸಂಬಂಧಿಸಿದಂತೆ ಚೀಫ್ ಮೆಡಿಕಲ್ ಆಫೀಸರ್ ನ್ನ‌ನೇಮಿಸಲಾಹಿದೆ ಇವರನ್ನ ತೆಗೆದು ಡೆಪ್ಯೂಟಿ ಡೈರೆಕ್ಟರ್ ನ್ನ ನೇಮಿಸಬೇಕು. ಚೀಫ್ ಮೆಡಿಕಲ್ ಆಫೀಸರ್ ಗೆ ಡೆಪ್ಯೂಟಿ ಡೈರೆಕ್ಟರ್ ಗೆ ಇರುವ ಅಧಿಕಾರ ಇರುವುದಿಲ್ಲ. ಸಾವಾದರೆ ಹೂವಿನ ಹಾರ ಹಾಕಿ ಬರುವ ಕೆಲಸ ಅಷ್ಟೆ ನಡೆಯಲಿದೆ. ಹಾಗಾಗಿ ಡಿಡಿಯನ್ನ ನೇಮಿಸಿ ಹಳೆ ವ್ಯವಸ್ಥೆಯಲ್ಲಿ ಸರ್ಕಾರ ಸಾಗಬೇಕು. 2023 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಚೀಫ್ ಮೆಡಿಕಲ್ ಆಫೀಸರ್ ನೇಮಕವಾಗಿದೆ. ಇದುರದ್ದಾಗಬೇಕು ಎಂದರು.

ಮಿಳಘಟ್ಟದಲ್ಲಿ ನಡೆಯುವ ಮಂಗಳವಾರ ಸಂತೆ ಅಪಾಯದಲ್ಲಿ ನಡೆಯುತ್ತಿದೆ. ಇದನ್ನ ಶಿಫ್ಟ್ ಮಾಡಬೇಕೆಂದು ಯೋಚಿಸಲಾಗಿತ್ತು. ಸಂತೆ ನಡೆಯುವ ಸ್ಥಳವನ್ನ ಸ್ಥಳಾಂತರಿಸಬೇಕು. ಬಸ್ ಗಳು ಮತ್ತು ಇತರೆ ವಾಹನಗಳ ಸಂಚಾರದ ನಡುವೆ ನಡೆಯಲಿದೆ. ಇದು ಸ್ಥಳಾಂತರವಾಗಬೇಕು ಎಂದರು

ಬಹು ಮಹಡಿ ಕಟ್ಟಡದಲ್ಲಿ ಪಾರ್ಕಿಂಗ್ ವ್ಯವಸ್ಥೆ, ಅಂಗಡಿ ಮುಗ್ಗಟ್ಟುಗಳ ಆರಂಭ ವಿಳಂಬವಾಗುತ್ತಿದೆ. ಉದ್ಘಾಟನೆಯಾಗಿ ವರ್ಷ ಕಳೆದರೂ ಕಟ್ಟಡದಲ್ಲಿ ಯಾವ ಮಳಿಗೆ ಆರಂಭವಾಗಿಲ್ಲ.  ಪಾಲಿಕೆ ಅಧಿಕಾರಿಗಳ ಕಟ್ಟಡವಾಗಿದ್ದರೆ ಬಿಡ್ತಾಯಿದ್ದೀರಾ? ಇದನ್ನ ಆರಂಭಿಸಲು ಯಾಕೆ ಮೀನಾಮೇಷ ಎಂದು ಪ್ರಶ್ನಿಸಿದರು. ಗಾಂಧಿನಗರ, ಕಾಮಾಕ್ಷಿ ಬೀದಿಯಲ್ಲಿ ಆರಂಭಗೊಂಡಿದ್ದ ಕಟ್ಟಡಗಳು ಕಾರ್ಯನಿರ್ವಹಿಸಬೇಕು ಎಂದು ಆಗ್ರಹಿಸಿದರು

Megan not to shift

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close