SUDDILIVE || SHIVAMOGGA
ಸ್ಥಳೀಯ ಆಡಳಿತದ ಮುಂದೆ ಮಂಡಿ ಊರಿದ ಹೊಂಬಾಳೆ ಫಿಲಂ, ಯಾರಿಂದೆಲ್ಲ ಅನುಮತಿ ಪಡೆಯಲಾಗಿದೆ?Hombale Film bowed down before the local administration, from whom did it obtain permission?
ಅನುಮತಿಯ ಹೆಸರಿನಲ್ಲಿ ಕಳ್ಳಾಟವಾಡಿದ ಹೊಂಬಾಳೆ ಫಿಲಂಸ್ ಕೊನೆಗೂ ತಾನು ಪಡೆದಿರುವ ಆರು ಇಲಾಖೆಗಳ ಅನುಮತಿ ಪತ್ರವನ್ನು ತಹಶೀಲ್ದಾರ್ ಹೊಸನಗರ ಇವರಿಗೆ ದಾಖಲಾತಿಯಾಗಿ ನೀಡಿದೆ.
ಜೂನ್ 14ರಂದು ಸಂಜೆ ಹಠತ್ ಹವಮಾನ ಬದಲಾವಣೆಯಿಂದಾಗಿ ಹಡಗಿನ ರೂಪದ ವಿನ್ಯಾಸಾತ್ಮಕ ರಚನೆಯ ಸ್ವಲ್ಪ ತೂಕಡಿತಗೊಂಡಿತು. ಆದರೆ ಅಂದು ಸ್ಥಳದ ಸಮೀಪದಲ್ಲಿ ಯಾವುದೇ ಚಿತ್ರಿಕರಣ ನಡೆಯುತ್ತಿರಲಿಲ್ಲ ಮತ್ತು ಯಾರೊಬ್ಬ ಆ ಸುತ್ತಮುತ್ತಲಿನ ಪ್ರದೇಶದಲ್ಲಿ ಹಾಜರಿರಲಿಲ್ಲ ಈ ರಚನೆ ಕೇವಲ ದೃಶ್ಯ ಪಟಕ್ಕೆ ಹಿನ್ನೆಲೆ ರೂಪವಾಗಿ ನಿರ್ಮಿಸಲಾಗಿತ್ತು ಯಾವುದೇ ವ್ಯಕ್ತಿಗಾಗಲಿ ಆಸ್ತಿ ಅಥವಾ ಉಪಕರಣಗಳಿಗೆ ಆಗಲಿ ಯಾನ ಯಾಗಿರಲಿಲ್ಲ ಎಂಬುದನ್ನು ಹೊಂಬಾಳೆ ಫಿಲಂಸ್ ತಾನು ನೀಡಿರುವ ದಾಖಲಾತಿಯಲ್ಲಿ ಸ್ಪಷ್ಟಪಡಿಸಿದೆ
ಇದರ ಜೊತೆಗೆ ಜಲಮೂಲದ ಒಳಗಿನ ಚಿತ್ರಕರಣ ಮಾಡುವ ಉದ್ದೇಶ ನಮಗಿಲ್ಲ ಆದರೆ ತುರ್ತು ಪರಿಸ್ಥಿತಿಗೆ ತಕ್ಕಂತೆ ನಾವು ಈ ಕೆಳಗಿನ ಸುರಕ್ಷತಾ ಕ್ರಮಗಳನ್ನು ಮುಂಚಿತವಾಗಿ ತೆಗೆದುಕೊಂಡಿರುವುದಾಗಿ ತಿಳಿಸಿದೆ 25 ಮಂದಿ ಅನುಭವಿ ಈಜುಗಾರರನ್ನು ನಿಯೋಜಿಸಲಾಗಿದೆ ವೇಗದ ದೋಣಿಗಳ ವ್ಯವಸ್ಥೆ ಲೈಫ್ ಜಾಕೆಟ್ ಗಳು ಮತ್ತು ಅಗತ್ಯ ಸುರಕ್ಷತಾ ಕಿಟ್ಟುಗಳು ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೊಂಬಾಳೆ ಫಿಲಂಸ್ ತಿಳಿಸಿದೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಿಂದ ನೀಡಲಾದ ಏಕ ಗವಕ್ಷಿ ಅನುಮತಿ, ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರವರು ನೀಡಿದ ಡ್ರೋನ್ ಹಾಗೂ ಭದ್ರತಾ ಅನುಮತಿ ಪತ್ರ, ಅರಣ್ಯ ಹಾಗೂ ಪರಿಸರ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ನೀಡಿರುವ ಅನುಮತಿ ಪತ್ರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಮುಖ್ಯ ವನ್ಯಜೀವಿ ವಾರ್ಡನ್ ಬೆಂಗಳೂರು ಇವರ ಪತ್ರ, ಕೆಪಿಸಿಎಲ್ ಬೆಂಗಳೂರು ನ ನಿರ್ದೇಶಕರ ಅನುಮತಿ, ಸಾಗರ ಉಪಸಂರಕ್ಷಣಾಧಿಕಾರಿಗಳ ಅನುಮತಿ ಪತ್ರ ಪಡೆದಿರುವುದಾಗಿ ಹೊಂಬಾಳೆ ಫಿಲಂ ಸ್ಪಷ್ಟಪಡಿಸಿದೆ. ಈ ಪತ್ರವನ್ನ ನಿನ್ನ ಹೊಂಬಾಳೆ ಫಿಲಂ ತಹಶೀಲ್ದಾರ್ ಹೊಸನಗರ ಇವರಿಗೆ ನೀಡಿದೆ.
Hombale Film bowed down