SUDDILIVE || SHIVAMOGGA
ಮೋದಿ ಸರ್ಕಾರ ಕಳೆದ 11 ವರ್ಷದಲ್ಲಿ ದಾಖಲೆ ನಿರ್ಮಿಸಿದೆ-BYR-Modi government has created a record
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ದಾಖಲೆ ನಿರ್ಮಿಸಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅಭಿಪ್ರಾಯ ಪಟ್ಟರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೋದಿ ಅವರ ನೇತೃತ್ವದ ಸರ್ಕಾರ 11 ನೇ ವರ್ಷ ಫೂರೈಸಿದೆ. ಇಡೀ ಜಗತ್ತು ಇಂದು ಮೋದಿ ನಾಯಕತ್ವದ ಬಗ್ಗೆ ಮಾತನಾಡುತ್ತಿದೆ. ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಭಾರತವನ್ನು ವಿಶ್ವ ಗುರುವನ್ನಾಗಿಸುವ ಕಡೆಗೆ ದೇಶವನ್ನು ಮೋದಿ ಮುನ್ನಡೆಸುತ್ತಿದ್ದಾರೆ.ವಿಕಸಿತ ಭಾರತದ ಸಂಕಲ್ಪದ ಮೂಲಕ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದಾರೆ
ದೇಶದ ಶತ ಕೋಟಿ ಜನರ ಭರವಸೆ ಈಡೇರಿಸುವ ಕಡೆಗೆ ಗಮನ ಹರಿಸಿದ್ದಾರೆ.ಮೂಲ ಸೌಕರ್ಯ ಸೇರಿದಂತೆ ಹಲವು ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ವಸತಿ, ಕೃಷಿ, ರೈಲ್ವೆ, ಆರೋಗ್ಯ, ಮಹಿಳೆಯರು, ಹೆದ್ದಾರಿ ಸೇರಿದಂತೆ ಹಲವಾರು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಗಮನ ನೀಡಿದ್ದಾರೆ
ವಿರೋಧ ಪಕ್ಷಗಳು ಸಹಜವಾಗಿ ಟೀಕೆ ಮಾಡಿದರೂ, ಆರೋಪ ಮಾಡಿದರೂ ಮೋದಿ ನಾಯಕತ್ವ ದುರ್ಬಲವಾಗಿಲ್ಲ.ಕೋವಿಡ್ ಸೇರಿದಂತೆ ಅನೇಕ ಸಂದರ್ಭದಲ್ಲಿ ದೇಶದ ಜಿಡಿಪಿ ದರ ಕುಸಿತವಾಗಿಲ್ಲ
ಜಿಎಸ್ಟಿ ಶೇರಿಂಗ್ ಕುರಿತು ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ. ಇದರ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ನೀಡಿದ್ದಾರೆ. ರೈಲ್ವೆ ಸೇರಿದಂತೆ ಹಲವು ಯೋಜನೆಗಳಿಗೆ ಸಾಕಷ್ಟು ಹಣಕಾಸಿನ ನೆರವು ನೀಡಿದ್ದಾರೆ ಎಂದರು.
Modi government has created a record