SUDDILIVE || SHIVAMOGGA
ಆರ್ ಸಿ ಬಿ ಗೆದ್ದು ಬರಲಿ ಎಂದು ಅಭಿಮಾನ ಮೆರೆಯುತ್ತಿರುವ ಅಭಿಮಾನಿಗಳು-Fans cheering for RCB to win
ಆರ್ ಸಿಬಿ Vs ಪಂಜಾಬ್ ಇಲೆವೆನ್ ಕಿಂಗ್ಸ್ ಇಂದು ಫೈನಲ್ ಪಂದ್ಯಾವಳಿ ನಡೆಯಲಿದೆ. ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆಯುವ 20-20 ಐಪಿಎಲ್ ಪಂದ್ಯಾವಳಿಗಳ ಫೈನಲ್ ನ ಈ ಸೆಣಸಾಟಕ್ಕೆ ಶಿವಮೊಗ್ಗದಲ್ಲಿ ಯುವಕ ಉತ್ಸಹವನ್ನ ಇಮ್ಮಡಿಗೊಳಿಸಿದೆ.
ಹಲವೆಡೆ ದೇವರಿಗೆ ಪೂಜೆಗಳು ನಡೆದರೆ, ಹಲವೆಡೆ ಉಚಿತ ಆರೋಗ್ಯ ತಪಾಸಣೆ ನಡೆಯಲಿದೆ. ಇನ್ನು ಕೆಲವೆಡೆ ಫೈನಲ್ ವೀಕ್ಷಣೆಗೆ ಎಲ್ ಇಡಿ ಸ್ಕ್ರೀನ್ ಅಳವಡಿಸಲಾಗುತ್ತಿದೆ. ಆರ್ ಸಿಬಿ ತಂಡಕ್ಕೆ ಜಯವಾಗಲಿ ಎಂದು ಯುವಕರ ತಂಡ ವಿವಿಧೆಡೆ ಈ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದಾರೆ.
ಐಪಿಎಲ್ ನ T20 - 2025 ರ ಫೈನಲ್ ಪಂದ್ಯಾವಳಿಗೆ ಈಗ 18 ರ ಸಂಭ್ರಮ, 18 ನೇ ವರ್ಷದ ಫೈನಲ್ ಪಂದ್ಯಾವಳಿಯ ಪ್ರಯುಕ್ತ 18 ವರ್ಷ ಮೇಲ್ಪಟ್ಟ ವಯಸ್ಕರಿಗೆ ಮಲವಗೊಪ್ಪದ ವೀರಭದ್ರ ಮೆಡಿಕಲ್ಸ್ ವತಿಯಿಂದ ವೀರಭದ್ರ ಕ್ಲೀನಿಕ್ ನಲ್ಲಿ ಇಂದು ಸಂಜೆ 6 ಗಂಟೆಯ ಮೇಲೆ ಉಚಿತ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿದೆ.
ಆರೋಗ್ಯ ತಪಾಸಣೆ ಮೂಲಕ ಆರ್ ಸಿಬಿ ಪಂದ್ಯಾವಳಿಯ ಸಂಭ್ರಮಾಚಣೆ ನಡೆಸೋಣ ಎಂದು ಮಾಲೀಕ ಅವಿನಾಶ್ ಕರೆ ನೀಡಿದ್ದಾರೆ. ಅದರಂತೆ ಉಷಾ ನರ್ಸಿಂಗ್ ಹೋಮ್ ನ ಗಣಪತಿ ದೇವಸ್ಥಾನದ ಬಳಿ ವಕೀಲ ಸುರೇಶ್ ಬಾಬು ಎಲ್ ಇಡಿ ಸ್ಕ್ರೀನ್ ಅಳವಡಿಸಿ ಪಂದ್ಯಾವಳಿ ವೀಕ್ಷಣೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಹೀಗೆ ಆರ್ ಸಿಬಿ ಅಭಿಮಾನಿಗಳ ಅಭಿಮಾನ ಮುಂದು ವರೆದಿದೆ.
RCB to win