SUDDILIVE || SHIVAMOGGA
ಇಂದಿನಿಂದ ಶುಭಾರಂಭಗೊಂಡ ಸಬ್ ರಿಜಿಸ್ಟರ್ ಕಚೇರಿ-ಗ್ರಾಹಕರಿಗಿಂತ ರಿಯಲ್ ಎಸ್ಟೇಟ್ ಬಿಸಿನೆಸ್ ಮೆನ್ ಗಳೆ ಹೆಚ್ಚು- Sub-Registry Office opens today- Real estate businessmen everywhere
ಶಿವಮೊಗ್ಗದಲ್ಲಿ ವಿನೋಬನಗರದಲ್ಲಿ ಇದ್ದ ಸಬ್ ರಿಜಿಸ್ಟರ್ ಕಚೇರಿಯನ್ನು ಸಾಗರ ಸಾಗರ ರಸ್ತೆಯ ಎಪಿಎಂಸಿ ಎರಡು ಪಕ್ಕದ ವಾಣಿಜ್ಯ ಸಂಕೀರ್ಣಕ್ಕೆ ಶಿಫ್ಟ್ ಆಗಿದೆ ಇಂದಿನಿಂದ ಕಚೇರಿಯ ಎಲ್ಲಾ ಕಾರ್ಯವೈಖರಿಯು ಈ ವಾಣಿಜ್ಯ ಸಂಕೀರ್ಣದಲ್ಲಿ ನಡೆಯಲಿದೆ
1997ರಲ್ಲಿ ವಿನೋಬನಗರದ ಸಿ ಐ ಟಿ ಬಿ ಕಚೇರಿಯ ಆವರಣದಲ್ಲಿ ಹಿರಿಯ ನೋಂದಣಿ ಕಚೇರಿಯನ್ನು ಆರಂಭಿಸಲಾಗಿತ್ತು ಇನ್ನೆರಡು ವರ್ಷದಲ್ಲಿ ಈ ಕಚೇರಿಗೆ 30 ವರ್ಷ ತುಂಬಲಿತ್ತು ಇಕ್ಕಟ್ಟಿನ ಹಾಗೂ ಗ್ರಾಹಕರಿಗೆ ಸೂಕ್ತವಾದ ಮೂಲಭೂತ ಸೌಕರ್ಯಗಳಿಲ್ಲದ ಕಾರಣ ಈ ಕಚೇರಿಯನ್ನು ಎಪಿಎಂಸಿ ಯಾರ್ಡ್ ವಾಣಿಜ್ಯ ಸಂಕೀರ್ಣ ಕಟ್ಟಡಕ್ಕೆ ವರ್ಗಾವಣೆಯಾಗಿದೆ.
ವಿನೋಬನಗರದಲ್ಲಿದ್ದ ವೇಳೆ ಈ ಕಟ್ಟಡವು 2800 ಚದರ ಅಡಿಯಲ್ಲಿ ನಿರ್ಮಾಣವಾಗಿತ್ತು. ವಾಶ್ ರೂಮ್ ಹಾಗೂ ವಿಶ್ರಾಂತಿ ಕಟ್ಟಡ, ಗ್ರಾಹಕರಿಗೆ ಕೂರಲು ಆಸನಗಳು, ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯದ ಕೊರತೆಯನ್ನ ಎದುರಿಸುತ್ತಿತ್ತು. ಶೌಚಾಲಯಕ್ಕೆ ಹಾಕಿದ ನೀರು ಕಚೇರಿಯ ಒಳಗೆ ಬರುವ ಅಪಾಯವೂ ಇತ್ತು. ಮಳೆ ಬಿದ್ದರೆ ಕಟ್ಟಡ ಸೋರುತ್ತಿತ್ತು.
ಈ ಎಲ್ಲಾ ಸಮಸ್ಯೆಯನ್ನ ಎಪಿಎಂಸಿಯಾರ್ಡ್ ನ ವಾಣಿಜ್ಯ ಸಂಕೀರ್ಣದಲ್ಲಿ ಶಿಫ್ಟ್ ಆದ ಕಚೇರಿ ನಿವಾರಿಸಿದೆ. ಲಿಫ್ಟ್, ಕಾರಿಡಾರ್, ರೆಕಾರ್ಡ್ ರೂಮ್, ಮಹಿಳೆಯರಿಗೆ ಫೀಡಿಂಗ್ ರೂಂ. ರ್ಯಾಂಪ್, ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ಇದನ್ನ ಹೊರತು ಪಡಿಸಿ 5000 ಚದರ ಅಡಿಯಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಇಂದು ಶಿಫ್ಟ್ ಆದ ಮೊದಲನೇ ದಿನವೇ ಕಚೇರಿಯಲ್ಲಿ ಫೊಟೊ ಇಟ್ಟು ಪೂಜೆ ಮಾಜಿ ಕಚೇರಿಯನ್ನ ಶುಭಾರಂಭಗೊಂಡಿದೆ. ಜನ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿದ್ದರು.
ವೃದ್ಧರಿಗೆ ಮತ್ತು ಅಂಗವಿಕಲಚೇತನ ಕಚೇರಿಗೆ ತೆರಳಲು ಲಿಫ್ಟ್ ಅಳವಡಿಸಿದೆ. ವಾಹನಗಳಿಗಾಗಿ ಸಾಕಷ್ಟು ದೊಡ್ಡ ಜಾಗವಿದೆ. ಹೀಗೆ ಮೂಲಸೌಕರ್ಯಗಳುಳ್ಳ ಕಚೇರಿ ಉದ್ಘಾಟನೆಗೊಂಡಿದೆ. ಆದರೆ ಗ್ರಾಹಕರಿಗಿಂತ ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡುವವರೆ ಹೆಚ್ಚಿನ ಸಂಖ್ಯೆಯಲ್ಲಿದ್ದಿದ್ದು ವಿಶೇಷವಾಗಿತ್ತು.
Sub-Registry Office opens today