ಶಿವಮೊಗ್ಗ ಜೈಲಿನಲ್ಲಿ ಯುವಕನ ಮೇಲೆ ಥಳಿತ ವಿಡಿಯೋ ವೈರಲ್-Video of beating of a youth in Shimoga jail goes viral

 SUDDILIVE || SHIVAMOGGA

ಶಿವಮೊಗ್ಗ ಜೈಲಿನಲ್ಲಿ ಯುವಕನ ಮೇಲೆ ಥಳಿತ ವಿಡಿಯೋ ವೈರಲ್-Video of beating of a youth in Shimoga jail goes viral

Video, viral

ಜೈಲಿನ ಒಳಗೆ ವಿಚಾರಣಾಬಂಧಿಯೋರ್ವನನ್ನ ಥಳಿಸುತ್ತಿರುವ ಘಟನೆ ನಡೆದಿದ್ದು ಈ ಘಟನೆ ಜೈಲಿನ ಒಳಗೆ ನಡೆದ ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭದ್ರಾವತಿ ಜೆಡಿಎಸ್ ಮುಖಂಡ ಅಜಿತ್ ಅಪ್ಪಾಜಿ ಗೌಡ ಶಿವಮೊಗ್ಗ ಜೈಲಿನಲ್ಲಿ ನಡೆದ ಘಟನೆ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. 


ನಿನ್ನೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಿರಣ್ ಸೇಠು ಎಂಬ ಯುವಕನನ್ನ ಪೊಲೀಸರು ಬಂಧಿಸಿ ಶಿವಮೊಗ್ಗ ಜೈಲಿಗೆ ಕಳುಹಿಸಿದ್ದರು. ಇಂದು ಆತನ ಸಹಪಾಠಿಗಳು ಜೈಲಿನಲ್ಲಿ ಥಳಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಅಜಿತ್ ಗೌಡರು ಹಲ್ಲೆಗೊಳಗಾದ ಯುವಕ ಜೆಡಿಎಸ್ ಕಾರ್ಯಕರ್ತನಾಗಿದ್ದು, ಆತನ ಮೆಲೆ ಹಲ್ಲೆ ನಡೆಸಲಾಗಿದೆ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ. 

ಈ ಕುರಿತು ಜೈಲರ್ ರಂಗನಾಥ್ ಸುದ್ದಿಲೈವ್ ಗೆ ಮಾತನಾಡಿ ನಿನ್ನೆ ಬಂದ ವಿಚಾರಬಂದಿಯ ಮೇಲೆ ಹಲ್ಲೆಯಾಗಿದೆ. ಇಂದು ಸಂಜೆ ಊಟಕ್ಕೆ ಬಿಟ್ಟಾಗ ರೂಮಿಗೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ. ಶಿವಮೊಗ್ಗದ ಪರಶುರಾಮ್ ಯಾನೆ ಚಿಂಗಾರಿ, ಅಪ್ಪುನಾಯ್ಕ, ಶಬರೀಶ್ ಪ್ರದೀಪ್ ಎಂದು ತಿಳಿದು ಬಂದಿದೆ. 

ಇವರ ಮೇಲೆ ಎಫ್ಐಆರ್ ದಾಖಲಿಸಲಾಗುತ್ತಿದೆ ಎಂದು ಜೈಲರ್ ರಂಗನಾಥ್ ಸ್ಪಷ್ಟಪಡಿಸಿದ್ದಾರೆ. ಪಕ್ಷದ ವಿಚಾರದಲ್ಲಿ ಹೊಡೆದಾಡಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿದ್ದು ಪೊಲೀಸರ ತನಿಖೆಯಿಂದ ತಿಳಿದುಬರಬೇಕಿದೆ. ಕಿರಣ್ ಸೀಟು ಅಟ್ರಾಸಿಟಿ ಪ್ರಕರಣದಲ್ಲಿ ಎನ್ ಎಸ್ ಎಂ ಗೆ ಶಿವಮೊಗ್ಗ ಜೈಲು ಸೇರಿದ್ದನು.

Video of beating of a youth in Shimoga jail goes viral

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close