SUDDILIVE || SHIVAMOGGA
ಕುಂಬಾರ ಗುಂಡಿಯಲ್ಲಿ ಮಹಿಳೆಯ ಮಾಂಗಲ್ಯ ಸರ ಕಳವು-Woman's mangalya chain stolen in Kumbara Gundi
ಕೆಲವು ದಿನಗಳ ವರೆಗೆ ವಿಶ್ರಾಂತಿ ಪಡೆದಿದ್ದ ಮಾಂಗಲ್ಯ ಸರ ಕಳವು ಪ್ರಕರಣ ನೆನ್ನೆ ರಾತ್ರಿ ಮರುಕಳಿಸಿದೆ ಮಹಿಳೆಯ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಒಬ್ಬ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಕಿತ್ತುಕೊಂಡು ಹೋಗಿರುವ ಘಟನೆ ನಡೆದಿದೆ
ನಡೆದು ಹೋಗುತ್ತಿದ್ದ ಮಹಿಳೆಯ ಕೊರಳಲ್ಲಿ ಇದ್ದ ಚಿನ್ನದ ಸರವನ್ನು ವ್ಯಕ್ತಿಯೊಬ್ಬ ಕಿತ್ತುಕೊಂಡು ಪರಾರಿಯಾದ ಘಟನೆ ಕುಂಬಾರಗುಂಡಿಯಲ್ಲಿ ಡೆದಿದೆ, ಬಿ.ಬಿ.ರಸ್ತೆ ನಿವಾಸಿ ಪುಷ್ಪಲತಾ ಅವರು ರಾತ್ರಿ 9 ಗಂಟೆ ಹೊತ್ತಿಗೆ ಗಾಂಧಿ ಬಜಾರ್ನ ಸಹೋದರನ ಮನೆಗೆ ನಡೆದು ಹೋಗುತ್ತಿದ್ದರು.
ಕುಂಬಾರಗುಂಡಿಯಲ್ಲಿ ಸ್ವಲ್ಪ ಕತ್ತಲು ಇರುವ ಜಾಗದಲ್ಲಿ ಪುಷ್ಪಲತಾ ತೆರಳುವಾಗ ವ್ಯಕ್ತಿಯೊಬ್ಬ ಅವರ ಬಳಿ ಬಂದು ಕೊರಳಲ್ಲಿದ್ದ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದ್ದಾನೆ. 1.15 ಲಕ್ಷ ಮೌಲ್ಯದ 12.800 ಗ್ರಾಂ ತೂಕದ ಚಿನ್ನದ ಸರ ಕಳುವಾಗಿದೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಸಲಾಗುತ್ತಿದೆ.
Woman's mangalya chain stolen