SUDDILIVE || SHIVAMOGGA
ಜೂನ್ 29 ರಂದು ವಿದ್ಯುತ್ ವ್ಯತ್ಯಯ-power outage on june 29th
ಸ್ಪನ್ಪ ಪೋಲ್ ಸ್ಥಳಾಂತರ ಮತ್ತು ತುರ್ತು ಕಾಮಗಾರಿಯ ಹಿನ್ನಲೆಯಲ್ಲಿ ಜೂ.29 ರಂದು ಹಲವು ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಶಿವಮೊಗ್ಗ ಮೆಸ್ಕಾಂ ಘಟಕ-2ರ ನಗರ ಉಪವಿಭಾಗ 1 ರ ವ್ಯಾಪ್ತಿಯ ರಾಘವೇಂದ್ರ ಸ್ವಾಮಿ ಮಠದ ರಸ್ತೆ ಜಿಲ್ಲಾ ಪಂಚಾಯಿತಿ ಎದುರು ಸ್ಪನ್ ಪೋಲ್ ಸ್ಥಳಾಂತರಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜೂ. 29 ರಂದು ಬೆಳಗ್ತೆ 9 ರಿಂದ ಸಂಜೆ 5 ರವರೆಗೆ ರಾಘವೇಂದ್ರ ಸ್ವಾಮಿ ಮಠದ ರಸ್ತೆ, ತಿಲಕ್‌ನಗರ, ರತ್ನಮ್ಮ ಮಾಧವ ರಾವ್ ರಸ್ತೆ, ಕುವೆಂಪು ರಸ್ತೆ, ಪಾರ್ಕ್ ಬಡಾವಣೆ, ದುರ್ಗಿಗುಡಿ, ಶಿವಮೂರ್ತಿ ಸರ್ಕಲ್ ಹಾಗೂ ಜಿಲ್ಲಾ ಪಂಚಾಯಿತಿ ರಸ್ತೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಶಿವಮೊಗ್ಗ ಆಲ್ಕೊಳ ವಿ ವಿ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-8ರಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜೂ. 29 ರಂದು ಬೆಳ್ಳಗ್ಗೆ 9 ರಿಂದ ಮ. 02 ರವರೆಗೆ ಲಕ್ಷೀಪುರ, ಕೆಂಚಪ್ಪ ಲೇಔಟ್, ಎನ್.ಎಂ.ಸಿ. ಕಾಂಪೌಂಡ್, ಸೂಡಾ ಕಚೇರಿ, ಪೊಲೀಸ್ ಚೌಕಿ, ಸವಿ ಬೇಕರಿ ಎದುರು, 100 ಅಡಿ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.