ad

ಹೊಳೆಯ ಮಧ್ಯದಲ್ಲಿ ಕೆಟ್ಟು ನಿಟ್ಟಿದ ಲಾಂಚ್-ತಪ್ಪಿದ ಭಾರಿ ದುರಂತ- A launch that broke down in the middle of a river - a huge disaster

SUDDILIVE || SAGARA

ಹೊಳೆಯ ಮಧ್ಯದಲ್ಲಿ ಕೆಟ್ಟು ನಿಟ್ಟಿದ ಲಾಂಚ್-ತಪ್ಪಿದ ಭಾರಿ ದುರಂತ-A launch that broke down in the middle of a river - a huge disaster



ತಾಲೂಕಿನ ಶರಾವತಿ ಹಿನ್ನೀರು ಪ್ರದೇಶದ ಹೋಳೆಬಾಗಿಲು ಹೊಳೆಯಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಲಾಂಚ್ ನೀರಿನ ಮಧ್ಯದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ನಿಂತಿರುವ ಘಟನೆ ಗುರುವಾರ ಸಂಜೆ ನಡೆದಿದೆ.


ಲಾಂಚಿನಲ್ಲಿ ಸರಿಸುಮಾರು ನೂರಕ್ಕೂ ಹೆಚ್ಚು ಪ್ರಯಾಣಿಕರು ಹಾಗೂ ವಾಹನಗಳನ್ನು ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು ಪ್ರಯಾಣಿಕರು ಕೆಲವು ತಾಸು ಆತಂಕಕ್ಕೆ ಒಳಗಾಗಿರುವ ಸನ್ನಿವೇಶ ನಡೆಯಿತು.

ತಕ್ಷಣ ಸೇತುವೆ ಕಾಮಗಾರಿಯ ಡಿ ಬಿ ಲಾಂಚ್ ಮೂಲಕ ಹಗ್ಗ ಕಟ್ಟಿಕೊಂಡು ಕೆಟ್ಟು ನಿಂತಿದ್ದ ಲಾಂಚ್  ದಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಡಿಬಿ ಲಾಂಚ್ ಹೋಗಲು ಸ್ವಲ್ಪ ತಡವಾಗುತ್ತಿದ್ದರು ಸಹ ಕೆಟ್ಟ ನಿಂತಿದ್ದ ಲಾಂಚ್ ಪಕ್ಕದಲ್ಲೇ ನಿರ್ಮಾಣಗೊಳ್ಳುತ್ತಿರುವ ಸಿಗಂದೂರು ಬ್ರಿಜ್ ಕಂಬಕ್ಕೆ ಡಿಕ್ಕಿ ಹೊಡೆಯುವ ಸಾಧ್ಯತೆ ಹೆಚ್ಚು ಇತ್ತು ಎಂದು ತಿಳಿದು ಬಂದಿದೆ. 

ಒಟ್ಟಾರೆ ಡಿಬಿ ಲಾಂಚ್ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ಒಂದು ತಪ್ಪಿದ್ದಂತಾಗಿದ್ದು ಸುಳ್ಳಲ್ಲ.

A launch that broke down in the middle of a river - a huge disaster

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close