ad

ರಿಪ್ಪನ್ ಪೇಟೆಯಲ್ಲಿ SSF ವತಿಯಿಂದ ಸೌಹಾರ್ದ ನಡಿಗೆ-Friendly walk by SSF in Riponpete

SUDDILIVE || RIPPONPETE

ರಿಪ್ಪನ್ ಪೇಟೆಯಲ್ಲಿ SSF ವತಿಯಿಂದ ಸೌಹಾರ್ದ ನಡಿಗೆ-Friendly walk by SSF in Riponpete

Friendly, walk

ಮುಸಲ್ಮಾನರ ನಿಷ್ಟೆ , ಕ್ರೈಸ್ತರ ಕರುಣೆ , ಹಿಂದೂಗಳ ಭಾವೈಕ್ಯತಯಿಂದ ಸಮಾಜದಲ್ಲಿ ನಿಜವಾದ ಸೌಹಾರ್ದತೆಯ ಭಾವನೆ ಬೆಳಸಲು ಸಾಧ್ಯ ಎಂದು ಮಳಲಿ ಮಠದ ಪೀಠಾಧ್ಯಕ್ಷರಾದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಜಿ ಹೇಳಿದರು.

ಪಟ್ಟಣದ ವಿನಾಯಕ ವೃತ್ತದಲ್ಲಿ SSF ರಾಜ್ಯ ಘಟಕದ ವತಿಯಿಂದ ಆಯೋಜಿಸಲಾದ ಸೌಹಾರ್ದ ನಡಿಗೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು  ಸಿದ್ದಾಂತ ಶಿಖಾಮಣಿಯ ಧರ್ಮಗ್ರಂಥದ  ಸಾರವು  ಸರ್ವಧರ್ಮದ ಪರಿಪಾಲನೆಯಿಂದ ಸಮಾಜದಲ್ಲಿ ಸಾಮರಸ್ಯ  ಬೆಳಸಲು ಸಾಧ್ಯವಿದೆ ,ಮನುಷ್ಯ ಮನುಷ್ಯನನ್ನು ಪ್ರೀತಿಸಿದರೆ ಮಾತ್ರ ಮಾನವೀಯತೆಗೆ ಅರ್ಥ ಬರುತ್ತದೆ. ಹೀಗಾದರೆ ಮಾತ್ರ ಸಮಾಜದಲ್ಲಿ ಸೌಹಾರ್ದತೆ ಸಾಧ್ಯ ಎಂದರು.

ನಾವು ಭಾರತೀಯರು ನಾವೆಲ್ಲರೂ ಸೋದರಂತೆ ಇದ್ದು ಜಾತಿ ಮತ ಪಂಥಗಳ ಭೇದವನ್ನು ಮರೆತು ಸದ್ಭಾವನೆಯಿಂದ ಎಲ್ಲರಲ್ಲೂ ಬೆರೆತು ರಾಷ್ಟ್ರದ ಸೇವೆಯನ್ನು ಮಾಡುವುದು ನಮ್ಮೆಲ್ಲರ  ಮೂಲಭೂತ ಕರ್ತವ್ಯ ಮತ್ತು ಉದ್ದೇಶವಾಗಿರಬೇಕು. ಈ ಜಗತ್ತಿನ ಮಾನವ ಜೀವಿಗಳೆಲ್ಲರೂ  ಸಹೋದರ ಸಹೋದರಿ ಎನ್ನುವ ಭ್ರಾತೃತ್ವ  ಭಾವನೆಯಿಂದ ಇದ್ದಾಗ ಮಾತ್ರ ನಾವು ನೆಮ್ಮದಿಯ ಬದುಕನ್ನು ಕಂಡುಕೊಳ್ಳಬಹುದು ಎಂದರು.

ಮುಖ್ಯ ಅತಿಥಿ ತೀರ್ಥಹಳ್ಳಿಯ ಕ್ರೈಸ್ತ ಧರ್ಮಗುರುಗಳಾದ ವೀರೇಶ್ ಮೊರಸ್ ಮಾತನಾಡಿ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಎಂಬ ಬೇದಭಾವನೆ ಮಾಡದೆ ನಾವುಗಳಲ್ಲರೂ ಒಂದೇ , ಎಲ್ಲ ಧರ್ಮದ ಸಾರವೂ ಒಂದೆಯಾಗಿದೆ.ಎಲ್ಲ ಉಪನದಿಗಳು ಸಮುದ್ರವನ್ನು ಸೇರುತ್ತವೆ ಹಾಗೆ ಎಲ್ಲಾ ಧರ್ಮದವರು ಕೊನೆಯಲ್ಲಿ  ಸೇರುವುದು  ಸ್ಮಶಾನಕ್ಕೆಎಂದು ಹೇಳಿದರು.

ಧಾರ್ಮಿಕ ಗುರುಗಳಾದವರು ಧರ್ಮಭೋದನೆ ಮಾಡುವ ಮೂಲಕ ಸಮಾಜದ ಸಂಘಟನೆ ಮಾಡಬೇಕು, ಅದರೆ ಧರ್ಮಭೋದನೆ ಬಿಟ್ಟುರಾಜಕೀಯ ನಾಯಕರು  ಬೆಂಬಲಕ್ಕೆ ನಿಂತಿದ್ದಾರೆ,ಇದು ಮುಂದಿನ ದಿನಗಳಲ್ಲಿ ಇದು ಸಮಾಜದಲ್ಲಿ ಸಾಮರಸ್ಯಕ್ಕೆ ಅಪಾಯಕಾರಿಯಾಗಲಿದೆ ಎಂದರು.

SSF ಘಟಕದ ರಾಜ್ಯ ಅಧ್ಯಕ್ಷ ಸೂಫಿಯನ್ ಸಖಾಪಿ ಮಾತನಾಡಿ ಮನುಷ್ಯ ಮನುಷ್ಯನನ್ನು ಪ್ರೀತಿಸುವುದನ್ನು ಎಲ್ಲಿಯವರೆಗೆ ಮೈಗೂಡಿಸಿ ಕೊಳ್ಳುವುದಿಲ್ಲವೋ ಅಲ್ಲಿಯವರೆಗೂ ಸಮಾಜದಲ್ಲಿ ಜನಾಂಗೀಯ ತಾರತಮ್ಯ ಜೀವಂತವಾಗಿರುತ್ತದೆ. ಇದನ್ನು ತೊಲಗಿಸಲು ಜನರನ್ನು ಪರಸ್ಪರ ಪ್ರೀತಿಸುವುದೇ ಏಕೈಕ ಮಾರ್ಗ , ಮಾನವನ ಮಧ್ಯೆ ಪರಸ್ಪರ ಅನ್ಯೋನ್ಯತೆ ಬೆಳೆಯಲು ನಂಬಿಕೆ ಮುಖ್ಯ. ನಂಬಿಕೆಯನ್ನು ಕಾಪಾಡಿ ಕೊಂಡರೆ ಸಾಮಾಜಿಕ ಬದುಕಿನಲ್ಲಿ ಸೌಹಾರ್ದತೆ ಸಾಧ್ಯವಿದೆ ಎಂದರು. ಅನೈತಿಕತೆಗೆ ಇಸ್ಲಾಂ ಧರ್ಮದಲ್ಲಿ ಎಂದೂ ಜಾಗವಿಲ್ಲ.ಇದು ಗೊತ್ತಿದ್ದೂ ಇದನ್ನು ಉಲ್ಲಂಘಿಸುತ್ತಿರುವವರು ಇಸ್ಲಾಂ ಧರ್ಮಾನುಯಾಯಿಗಳಾಗಲು ಸಾಧ್ಯವಿಲ್ಲ. ಈ ಬಗ್ಗೆ ಇಸ್ಲಾಂ ಸ್ಪಷ್ಟ ಸಂದೇಶ ನೀಡಿದೆ ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮುನ್ನ SSF ಘಟಕದ ವತಿಯಿಂದ ಪಟ್ಟಣದ ನಾಲ್ಕು ಪ್ರಮುಖ ರಸ್ತೆಗಳಲ್ಲಿ ಮುಸ್ಲಿಂ ಧರ್ಮಗುರುಗಳು , ಮಳಲಿ ಶ್ರೀಗಳು ಹಾಗೂ ಕ್ರೈಸ್ತ ಧರ್ಮಗುರುಗಳ ನೇತ್ರತ್ವದಲ್ಲಿ ಸೌಹಾರ್ಧ ನಡಿಗೆ ಮೂಲಕ ಭಾವೈಕ್ಯತೆಯನ್ನು ಸಾರಲಾಯಿತು.

ಈ ಸಂಧರ್ಭದಲ್ಲಿ ಮೊಹಿಯುದ್ದೀನ್ ಜುಮ್ಮಾಮಸೀಧಿ ಧರ್ಮಗುರುಗಳಾದ ಮುನೀರ್ ಸಖಾಫಿ, ಮಸೀದಿ ಅಧ್ಯಕ್ಷರಾದ ಹಸನಬ್ಬ ಬ್ಯಾರಿ ,ಮುಸ್ಲಿಂ ಮುಖಂಡರಾದ ಆರ್.ಎ.ಚಾಬುಸಾಬ್, ಆರ್.ಎ.ಆಮ್ಮೀರ್‌ಹಂಜಾ,ಆಸೀಪ್ ಭಾಷಾ ,ಸ್ಥಳೀಯ ಮುಖಂಡರಾದ ಧನಲಕ್ಷ್ಮಿ, ಟಿ.ಆರ್.ಕೃಷ್ಣಪ್ಪ, ಆರ್.ಎನ್.ಮಂಜುನಾಥ, ನಿರೂಫ್ಕುಮಾರ್ ಹಾಗೂ ಇನ್ನಿತರರಿದ್ದರು.

Friendly walk by SSF in Riponpete

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close