ad

ಸರ್ಕಾರಿ ಬಾವಿಯನ್ನು ಸ್ವಚ್ಚಗೊಳಿಸುವಂತೆ ಪೌರಾಯುಕ್ತರಿಗೆ ಮನವಿ- Appeal to the Municipal Commissioner to clean the government well

SUDDILIVE || SAGARA

ಸರ್ಕಾರಿ ಬಾವಿಯನ್ನು ಸ್ವಚ್ಚಗೊಳಿಸುವಂತೆ ಪೌರಾಯುಕ್ತರಿಗೆ ಮನವಿ-Appeal to the Municipal Commissioner to clean the government well

Appeal, Muncipal


ನಗರಸಭೆ ವ್ಯಾಪ್ತಿಯ 31ನೇ ವಾರ್ಡ್ ನಲ್ಲಿ ಇರುವ ಅಂಗನವಾಡಿ ಕೇಂದ್ರದ ಪಕ್ಕದ ಸರ್ಕಾರಿ ಬಾವಿ ಸುತ್ತಲೂ ಗಿಡಗಂಟಿಗಳು ತೆಗೆಯುವ ಮೂಲಕ ಸ್ವಚ್ಛಗೊಳಿಸುವಂತೆ ಒತ್ತಾಯಿಸಿ ಗುರುವಾರ ನಗರಸಭೆಯ ಪೌರಾಯುಕ್ತ ಹೆಚ್ ಕೆ ನಾಗಪ್ಪ ರವರಿಗೆ ಸಾಮಾಜಿಕ ಕಾರ್ಯಕರ್ತ ಜಮೀಲ್ ಸಾಗರ್ ಮನವಿ ಸಲ್ಲಿಸಿದರು.

ಸಾಗರ ಪಟ್ಟಣ ವ್ಯಾಪ್ತಿಯ 31ನೇ ವಾರ್ಡ್ ಅಂಗನವಾಡಿ ಪಕ್ಕದ ಸರ್ಕಾರಿ ಬಾವಿ ಸಂಪೂರ್ಣ ಹಾಳಾಗಿದೆ. ಬಾವಿ ಸುತ್ತಲೂ ಗಿಡಗಂಟಿಗಳು ಬೆಳೆದು ಹಾವು ಹುಳಹುಪ್ಪಟ್ಟಿಗಳು ಬಾವಿಯನ್ನು ಸೇರುತ್ತಿದೆ. ಕೆಲವು ದಿನಗಳ ಹಿಂದೆ ಬಾವಿಯಲ್ಲಿ ಬೆಕ್ಕೆಂದು ಬಿದ್ದಿದ್ದು ನೀರು ಕಲುಷಿತಗೊಂಡಿದೆ.


ಈ ಭಾಗದ ನೂರಾರು ಮನೆಗಳವರು ಇದನ್ನೆ ಕುಡಿಯುವ ನೀರಾಗಿ ಬಳಸಿಕೊಂಡು ಬರುತ್ತಿದ್ದಾರೆ. ಬಾವಿ ನೀರಿಗೆ ಬೆಕ್ಕು ಬಿದ್ದು ಸತ್ತಿರುವುದರಿಂದ ಕೆಟ್ಟ ವಾಸನೆ ಬರುವ ಜೊತೆಗೆ ನೀರು ಕುಡಿಯಲು ಸಾಧ್ಯವಾಗದ ಸ್ಥಿತಿ ಇದೆ. ಪಕ್ಕದಲ್ಲಿ ಅಂಗನವಾಡಿ ಇದ್ದು ಬಾವಿ ಪಕ್ಕದಲ್ಲಿ ದೊಡ್ಡಮಟ್ಟದಲ್ಲಿ ಗಿಡ ಬೆಳೆದಿರುವುದರಿಂದ ಹಾವುಚೇಳು ಅಂಗನವಾಡಿ ಮಕ್ಕಳಿಗೆ ತೊಂದರೆ ಕೊಡುವ ಸಾಧ್ಯತೆ ಇದೆ.

ತಕ್ಷಣ ಬಾವಿಯ ನೀರನ್ನು ಸ್ವಚ್ಚಗೊಳಿಸಿ, ಸುತ್ತಮುತ್ತಲೂ ಬೆಳದಿರುವ ಗಿಡಗಂಟಿಗಳನ್ನು ಸ್ವಚ್ಚಗೊಳಿಸಬೇಕು. ಬಾವಿ ಕಟ್ಟೆ ಸುತ್ತಲೂ ಸಿಮೆಂಟ್ ಒಡೆದು ಹೋಗಿ ಕೆಸರಿನ ಹೊಂಡವಾಗಿದೆ. ಇದನ್ನು ಸರಿಪಡಿಸಿ ಜನರಿಗೆ ಕುಡಿಯುವ ನೀರಿನ ಸೌಕರ್ಯ ಒದಗಿಸಬೇಕು. ಮುಂದಿನ ಎರಡು ದಿನಗಳಲ್ಲಿ ಬಾವಿಯನ್ನು ಸರಿಪಡಿಸದೆ ಹೋದಲ್ಲಿ ಬಾವಿ ಎದುರು 31ನೇ ವಾರ್ಡ್ ನಾಗರೀಕರ ಜೊತೆ ಪ್ರತಿಭಟನೆ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಜಮೀಲ್ ಸಾಗರ್ ಮನವಿಯಲ್ಲಿ  ಎಚ್ಚರಿಕೆ ನೀಡಿದ್ದಾರೆ.

Appeal to the Municipal Commissioner to clean the government well

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close