ad

ಕ್ಯಾಂಟರ್ ಮತ್ತು ಕಾರಿನ ನಡುವೆ ಡಿಕ್ಕಿ-ಓರ್ವ ಸಾವು-Collision between Canter and car-one dead

SUDDILIVE || THIRTHAHALLI

ಕ್ಯಾಂಟರ್ ಮತ್ತು ಕಾರಿನ ನಡುವೆ ಡಿಕ್ಕಿ-ಓರ್ವ ಸಾವು-Collision between Canter and car - one dead

Collision, car

ಕಾಸರಗೋಡಿನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ವೇಳೆ ಬೇಗುವಳ್ಳಿ ಬಳಿ ಎರಟಿಗಾ ಮತ್ತು ಕ್ಯಾಂಟರ್ ನಡುವೆ ಡಿಕ್ಕಿ ಉಂಟಾಗಿದ್ದು ಓರ್ವ ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ. 

ಕಾಸರಗೋಡಿನ ಮಂಜೇಶ್ವರದಿಂದ ಎರಟಿಗಾದಲ್ಲಿ ನಾಲ್ಕೈದು ಜನರು ಶಿವಮೊಗ್ಗಕ್ಕೆ ಬರುತ್ತಿದ್ದ ವೇಳೆ ಬೇಗುವಳ್ಳಿ ಕೆರೆಯ ಬಳಿ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಸ್ಥಳದಲ್ಲಿಯೇ ಮಂಜೇಶ್ವರದ ನಿವಾಸಿ ಅಪ್ಸಬಿ ಮೃತಪಟ್ಟಿದ್ದಾರೆ. ಇವರಿಗೆ ಸುಮಾರು 58 ವರ್ಷವಯಸ್ಸಾಗಿತ್ತು. 

ಕಾರಿನಲ್ಲಿ ಚಲಿಸುತ್ತಿದ್ದ ಇನ್ನೂ ನಾಲ್ವರಿಗೆ ಪೆಟ್ಟಾಗಿದೆ ಎಂದು ತಿಳಿದುಬಂದಿದೆ. ತಡವಾಗಿ ಅಂಬ್ಯುಲೆನ್ಸ್  ಸ್ಥಳಕ್ಕೆ ತಲುಪಿದ್ದರಿಂದ ಸ್ಥಳೀಯರು ಅವರನ್ನ ತಮ್ಮ ವಾಹನದಲ್ಲಿ ಹತ್ತಿರದ ಆಸ್ಪತ್ರೆಗೆ ಗಾಯಾಳುಗಳನ್ನ ಕರೆದೊಯ್ದಿದ್ದಾರೆ. ಕ್ಯಾಂಟರ್ ನಲ್ಲಿದ್ದವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಪತ್ರಿಕೆಗಳು ವರದಿ ಮಾಡಿವೆ. ಪ್ರಕರಣ ಮಾಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

Collision between Canter and car - one dead

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close