ad

ಸರ್ಕಾರ ಕತ್ತೆಕಾಯ್ತಿತ್ತಾ? ಡಿಎಸ್ ಅರುಣ್ ಕೆಂಡಮಂಡಲ-DS Arun Kendamandala

SUDDILIVE || SHIVAMOGGA

ಸರ್ಕಾರ ಕತ್ತೆಕಾಯ್ತಿತ್ತಾ? ಡಿಎಸ್ ಅರುಣ್ ಕೆಂಡಮಂಡಲ-DS Arun Kendamandala    

Ds Arun, Kendamandala

RCB ಸಂಭ್ರಮಾಚರಣೆಯ ವೇಳೆ ನಡೆದ ಕಾಲ್ತುಳಿದಲ್ಲಿ ಸತ್ತವರ ಬಗ್ಗೆ ಕುನ್ಹ ವರದಿ ಬಂದಿದೆ.  ಅಸಹ್ಯದ ರೀತಿಯಲ್ಲಿ ಸರ್ಕಾರ ನಡೆದ ಬಗ್ಗೆ ವರದಿಯಿಲ್ಲ ಆದರೆ ಆಟಗಾರ ವಿರಾಟ್ ಕೋಯ್ಲಿಯ ಮೇಲೆ ಆರೋಪಿಸಿರುವುದು ಸರ್ಕಾರಕ್ಕೆ ನಾಚಿಕೆಯಾಗಬೇಕೆಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಮತ್ತು ಎಂಎಲ್ ಸಿ ಡಿ.ಎಸ್ ಅರುಣ್ ದೂರಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್ ಸಿಬಿ, ಕೆಎಸ್ ಸಿಎ, ಡಿಎನ್ಎ ಮತ್ತು ಇತರೆ ಸಂಸ್ಥೆಗಳಿಂದ ಅವಘಡ ನಡೆದಿದೆ ಎಂದು ವರದಿಯಲ್ಲಿ ದೂಷಿಸಲಾಗಿದೆ. ಸರ್ಕಾರಕ್ಕಿಂತ ಈ ಮೂರು ಸಂಸ್ಥೆಗಳು ದೊಡ್ಡದಾ? ಎಂದು ಪ್ರಶ್ನಿಸಿದ ಅವರು, ಸರ್ಕಾರವೇ ಪೂರ್ಣ ಜವಬ್ದಾರಿ ವಹಿಸಬೇಕಿತ್ತು. ಸರ್ಕಾರ ಕತ್ತೆಯಾಯ್ತುತ್ತಾ ಎಂದು ಅಕ್ರೊಶ ವ್ಯಕ್ತಪಡಿಸಿದರು.

ಸರ್ಕಾರ ಸನ್ಮಾನ ಮಾಡಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿಲ್ಲ. ಸಿಎಂ ನವರು ಅಧಕೃತ ಎಕ್ಸ್ ಖಾತೆಯಲ್ಲಿ ಸಂಭ್ರಮಾಚರಣೆಯ ಬಗ್ಗೆ ಉಲ್ಲೇಖವಿತ್ತು. ಅದರ ಬಗ್ಗೆಯೂ ಕುನ್ಹಾವರದಿಯಿಲ್ಲ. ಡಿಸಿಎಂ ಆಟಗಾರರನ್ನ ಹೆಚ್ ಎಎಲ್ ನಿಂದ ಕರೆದುಕೊಂಡು ಬಂದು ಸಂಭ್ರಮಚಾರಣೆ ಮಾಡಿದರು. ನಾಚಿಕೆಯೊದ್ದರೆ ಕೇವಲ ಸಂಸ್ಥೆಗಳ ಮೇಲೆ ಆರೋಪಿಸದೆ, ಸರ್ಕಾರ ಜವಬ್ದಾರಿ ಹೋರೇಕಿತ್ತು ಎಂದು ದೂರಿದರು.

ಸರ್ಕಾರ ಪೊಲೀಸ್ ಜವಬ್ದಾರಿಯನ್ನ  ಅರಿತುಕೊಳ್ಳಬೇಕಿತ್ತು. ವರದಿಯಲ್ಲಿ ಸತ್ಯಾಸತ್ಯತೆ ಮುಚ್ಚಲಾಗಿದೆ. ಸರ್ಕಾರದ ವೈಫಲ್ಯತೆ ತೋರಿಸಿಲ್ಲ. ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆಗೆ ಅನುಮತಿ ಕೇಳಲಾಗಿದೆ. ಸತ್ಯಾವತಿಯವರು ಸುದ್ದಿಗೋಷ್ಠಿಯಲ್ಲಿ ವಿಧಾನ ಸಭೆಯ ಮುಂಭಾಗ ಕರಧುಕೊಂಡು ಬರುವುದಾಗಿ ಹೇಳುತ್ತಾರೆ. ಇವನ್ಬೆಲ್ಲಾ ಮುಚ್ಚಲಾಗಿದೆ ಆಟಗಾರ ವಿರಾಟ್ ಕೋಯ್ಲಿಯ ಮೇಲೆ ಈಗ  ಆರೋಪ ಹೊರಿಸಲಾಗುತ್ತಿದೆ‌

ಅವರು ಬಂದು ಸನ್ಮಾನಿಸಿಕೊಂಡಿರುವುದು ತಪ್ಪೇನಿದೆ. ವಿರಾಟ್ ಕೋಯ್ಲಿಯವರು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರಿಗೆ ಬನ್ನಿ ಎಂದು ಯಾಕೆ ಕರೆಯುತ್ತಾರೆ ಸನ್ಮಾನಿಸುವ ಬಗ್ಗೆ ಅವರನ್ನ  ಕೇಳಿಕೊಂಡ ಮೇಲೆ ಜನ ಬಂದಿದ್ದಾರೆ. ಇವರ ಚಟಕ್ಕೆ ವಿಧಾನ ಸಭೆ ಎದುರು ಜನ ಸೇರಲಾಯಿತು‌. ಅದರ ಜವಬ್ದಾರಿಯನ್ನ ಕೆಎಸ್ಸಿಎ ಗೆ ಶಿಫ್ಟ್ ಮಾಡುದ್ರಿ? ಇಲ್ಲಿ ಪರಮಿಷನ್ ಗೆ ವಾರಗಟ್ಟಲೆ ಮೊದಲೆ ಅನುಮತಿ ಪಡೆಯಬೇಕಿದೆ. ಆದರೆ ಪಂದ್ಯ ಗೆದ್ದು ಮರುದಿನವೇ ಸಂಭ್ರಮಾಚರಣೆಯನ್ನ ಇಟ್ಟುಕೊಂಡಿದ್ದ್ಯಾಕೆ ಎಂದು ಪ್ರಶ್ನಿಸಿದರು.

ಜವಾಬ್ದಾರಿಯಿಂದ ನುಣಚಿಕೊಳ್ಳುವ ಪ್ರಯತ್ನ ಸಿಎಂ ಮತ್ತು ಡಿಸಿಎಂ ನಡೆದುಕೊಂಡಿದ್ದಾರೆ. ಇದು ಸರ್ಕಾರದ ಕೊಲೆಯಾಗಿದೆ. ಎ1 ಆರೋಪಿ ರಾಜ್ಯ ಸರ್ಜಾರವೇ ಹೊರತು ವಿರಾಟಕೋಯ್ಲಿಯ ಮೇಲೆ ಆರೋಪವನ್ನ ಸಿಎಂ ಮಾಡಲು ನಿಲ್ಲಿಸಬೇಕು. ಪ್ರಚಾರ ಪಡೆಯಲು ಹೋಗಿ ಜನರನ್ನ ಬಲಿ ಪಡೆಯಲಾಗಿದೆ.  ಈ ವರದಿಯನ್ನ ಬಿಜೆಪಿ ವಿರೋಧಿಸುತ್ತದೆ ಎಂದರು. 

DS Arun Kendamandala

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close