SUDDILIVE || SHIVAMOGGA
ಮನೆಯ ಮುಂದೆ ನಿಂತ ಬೈಕಿಗೆ ಬೆಂಕಿ-Fire on a bike parked in front of a house
ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಗೆ ಬೆಂಕಿಯಿಟ್ಟು ಅಟ್ಟಹಾಸ ಮೆರೆಯಲಾಗಿದೆ. ಶಿವಮೊಗ್ಗ ತಾಲೂಕು ಕಾಚಿನಕಟ್ಟೆಯಲ್ಲಿ ಕಿಡುಗೇಡಿಗಳು ಈ ದುಷ್ಕೃತ್ಯ ಮೆರೆದಿದ್ದಾರೆ.
ಶಿವಮೊಗ್ಗ ಏರ್ಪೋರ್ಟ್ ಬಳಿಯ ಕಾಚಿನಕಟ್ಟೆಯಲ್ಲಿ ತಡರಾತ್ರಿ ಬಂದು ಬೆಂಕಿಯಿಟ್ಟಿದ್ದಾರೆ. ಬೆಂಕಿ ಹೊತ್ತಿ ಉರಿಯುತ್ತಿದಂತೆ ಬೆಂಕಿಯನ್ನ ಬೈಕ್ ನ ಮಾಲಿಕರು ನಂದಿಸಿದ್ದಾರೆ. ಕಾಚಿನಕಟ್ಟೆಯ ಓಂಕಾರಪ್ಪ ಎಂಬುವವರಿಗೆ ಸೇರಿದ ಬೈಕ್ ಗೆ ಬೆಂಕಿ ಹಚ್ಚಿದ್ದಾರೆ.
ತುಂಗಾನಗರ ಪೊಲೀಸ್ ಠಾಣೆ ವ್ಯಪ್ತಿಯಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಭಯಾಭೀತರಾಗಿದ್ದಾರೆ. ಎರಡು ದಿನಗಳಹಿಂದೆ ಅಷ್ಟೆ ಸಮೀಪದ ವಡ್ಡಿನಕೊಪ್ಪದಲ್ಲಿ ಬನಿಯನ್ ಗ್ಯಾಂಗ್ ಕೂಡ ಓಡಾಡಿತ್ತು. ಅದರ ಬೆನ್ನಲ್ಲೇ ಪಕ್ಕದ ಗ್ರಾಮದಲ್ಲಿ ಬೆಂಕಿ ಯಿಟ್ಟಿರುವ ಘಟನೆ ನಡೆದಿದೆ.
Fire on a bike parked in front of a house
