ad

ಇಂದಿರಾಗಾಂಧಿ ಮುಕ್ತ ವಿವಿಗೆ ಪ್ರವೇಶಾತಿ ಆರಂಭ- Indira Gandhi Open University

SUDDILIVE || SHIVAMOGGA

ಇಂದಿರಾಗಾಂಧಿ ಮುಕ್ತ ವಿವಿಗೆ ಪ್ರವೇಶಾತಿ ಆರಂಭ-Admissions begin for Indira Gandhi Open University

Indira, Gandhi


ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯದಲ್ಲಿನ ವಿವಿಧ ಕೋರ್ಸ್‌ಗಳಿಗೆ ಪ್ರವೇಶ ಆರಂಭವಾಗಿದ್ದು, ಆ. 15  ಪ್ರವೇಶಕ್ಕೆ ಕಡೆಯ ದಿನವಾಗಿದೆ ಎಂದು ಶಿವಮೊಗ್ಗ ಅಧ್ಯಯನ ಕೇಂದ್ರದ ಸಂಯೋಜಕ ಕುಮಾರಸ್ವಾಮಿ ಎನ್. ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎ, ಬಿಕಾಂ, ಬಿಎಸ್ಸಿ, ಎಂಬಿಎ,ಎಂಸಿಎ, ಎಂಎಸ್ಸಿ ಸೇರಿದಂತೆ ಉಪಯುಕ್ತ ಡಿಪ್ಲೊಮಾ, ಪಿಜಿ ಡಿಪ್ಲೊಮಾ ಹಾಗೂ ಸರ್ಟಿಫಿಕೆಟ್ ಕೋರ್ಸ್‌ಗಳಿವೆ. ಒಟ್ಟು 315 ಕಾರ್ಯಕ್ರಮಗಳಿಗೆ ಓಡಿಎಲ್ ಪ್ರಕಾರದಲ್ಲಿ ಪ್ರವೇಶ ಆರಂಭವಾಗಿದೆ ಎಂದರು.

ವಾರ್ಷಿಕ ಆದಾಯ ೨.೫ ಲಕ್ಷ ರೂ.ಗಿಂತ ಕಡಿಮೆ ಇರುವ ಎಸ್, ಎಸ್ಟಿ ವಿದ್ಯಾರ್ಥಿಗಳಿಗೆ ಪದವಿ ಕೋರ್ಸ್‌ಗಳಿಗೆ  ಶೇ.೫೦ ರಷ್ಟು ರಿಯಾಯಿತಿ ನೀಡಲಾಗುತ್ತದೆ. ಭಾರತ ಸರ್ಕಾರದಿಂದ ವಿದ್ಯಾರ್ಥಿವೇತರನವನ್ನೂ ಪಡೆಯಬಹುದಾಗಿದೆ. ಹೆಚ್ಚಿನ ವಿವರಗಳಿಗೆ https://ignouadmission.samartha.edu.in ಅಥವಾ ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿರುವ ಅಧ್ಯಯನ ಕೇಂದ್ರವನ್ನು (೭೮೯೨೨೪೦೩೪೨) ಸಂಪರ್ಕಿಸಬಹುದಾಗಿದೆ ಎಂದರು.

ಭಾರತ ಸರ್ಕಾರದ ಶಿಕ್ಷಣ ಇಲಾಖೆಯ ರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಮುಕ್ತ ವಿವಿಗಳಲ್ಲಿ ಇದು ಕೂಡ ಒಂದಾಗಿದೆ. ರಾಷ್ಟ್ರೀಯ ಮೌಲ್ಯಮಾಪನಾ ಮತ್ತು ಮಾನ್ಯತಾ ಪರಿಷತ್ತಿನಿಂದ ಎಡಬಲ್‌ಪ್ಲಸ್  ಶ್ರೇಣಿಯ ಮಾನ್ಯತೆ ಹಾಗೂ ಎನ್‌ಐಆರ್‌ಎಫ್ ಒಯು ಕ್ಯಾಟಗರಿಯಲ್ಲಿ ಮೊದಲ ರ‌್ಯಾಂಕ್ ಪಡೆದಿರುವುದಾಗಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಡಿವಿಎಸ್  ಪ್ರಾಂಶುಪಾಲ ಡಾ. ವೆಂಕಟೇಶ್, ಮುಕ್ತ ವಿವಿಅಧೀಕ್ಷಕ ರಾಜೀವ್ ಇದ್ದರು.

Admissions begin for Indira Gandhi Open University

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close