SUDDILIVE || SHIVAMOGGA
ಮನೆ ಮನೆಗೆ ಪೊಲೀಸ್, ಕಿವಿ ಮಾತೇಳಿದ ನ್ಯಾಯಾಧೀಶರು-Door-to-door police, judges tells ear talk to both
ರಾಮಣ್ಣ ಶ್ರೇಷ್ಠಿ ಪಾರ್ಕ್ ನ ಬಾಲಗಂಗಾಧರ ನಾಥ್ ತಿಲಕ್ ಮಂಟಪದ ವೇದಿಕೆಯಲ್ಲಿ ಜಿಲ್ಲಾ ಪೊಲೀಸ್ ನವತಿಯಿಂದ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮವನ್ನ ನ್ಯಾಯಾಧೀಶರಾದ ಮಂಜುನಾಥ ನಾಯ್ಕ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಪೊಲೀಸ್ ಠಾಣೆಗೆ ಹೋಗುವುದನ್ನ ಭಾರತೀಯ ನಾಗರೀಕ ಕನಸು ಮನಸಿನಲ್ಲೂ ಎಣಿಸೊಲ್ಲ. ಆದರೆ ಪೊಲೀಸ್ ಠಾಣೆಯನ್ನ ನಾಗರೀಕರೊಂದಿಗೆ ಬೆಸೆಯುವ ಕೆಲಸಕ್ಕೆ ಇಲಾಖೆ ಇಳಿದಿದೆ. ಈ ಹಿಂದೆ ಇಲಾಖೆ ಜನಸ್ನೇಹಿ ಆಗಿರಲಿಲ್ವಾ ಇಲ್ಲ ಎಂಬ ಪ್ರಶ್ನೆಗೆ ಉತ್ತರ ಹೇಳಲ್ಲ. ಇದೆ ಅಂತನೂ ಹೇಳಲ್ಲ. ಇಲ್ಲ ಅಂತನೂ ಹೇಳಲ್ಲ. ನಾನು 26 ವರ್ಷದಿಂದ ನ್ಯಾಯಾಧೀಶರಾಗಿ ಸೇವೆಸಲ್ಲಿಸುತ್ತಿರುವೆ. ಪೊಲೀಸ್ ಇಲಾಖೆಯನ್ನ ಹತ್ತಿರದಿಂದ ನೋಡಿದ್ದೇನೆ. ಚಿಕ್ಕಮಕ್ಕಳಿರುವಾಗಲೇ ಪೊಲೀಸರ ಬಗ್ಗೆ ಹೆದರಿಕೆ ಹುಟ್ಟಿಸುತ್ತೇವೆ. ರಕ್ಷಣೆಗಾಗಿ ಇರುವವರು ಎಂಬ ಭಾವನೆ ಮೂಡಿಸಬೇಕು ಭಯ ಹುಟ್ಟಿಸಬಾರದು ಎಂದರು.
ಇವುಗಳ ನಡುವೆ ಮನೆ ಮನೆ ಪೊಲೀಸ ಕಾನ್ಸೆಪ್ಟ್ ಉಪಯೋಚಿತವಾಗಿದೆ. ಮನೆ ಮನೆಗೆ ಹೋಗುವಾಗ ಪೊಲೀಸರಿಗೆ ಕಿವಿಮಾತು ಹೇಳಿದ ಜಡ್ಜ್ ಸಮವಸ್ತ್ರದಲ್ಲಿ ಹೋಗಲು ನಿರ್ಬಂಧನೆ ಇದೆಯಾ ಅಥವಾ ಇಲ್ಲವಾ ಎಂಬುದನ್ನ ಪರಿಶೀಲಿಸಿ. ಸಮವಸ್ತ್ರ ಕಡ್ಡಾಯ ಇಲ್ಲ ಎಂಬುದು ಖಾತ್ರಿಯಾದರೆ ಸಮವಸ್ತ್ರ ಬಿಟ್ಟು ಸಿವಿಲ್ ಡ್ರೆಸ್ ನಲ್ಲಿ ಹೋಗಿ. ಮಕ್ಕಳನ್ನ ಆಕರ್ಷಿಸಿ. ನಮ್ಮ ವಿಚಾರವನ್ನೇ ಮುಂದು ಇಡಬೇಡಿ, ಪೊಲೀಸರಿಗಿಂತ ನ್ಯಾಯಾಧೀಶರಾಗಿರಲು ಪ್ರಯತ್ನಿಸಿ ನ್ಯಾಯಾ ನೀಡುವುದನ್ನ ಹೊರತು ಪಡಿಸಿ. ತನಿಖೆ ವಿಚಾರಣೆ ಬಿಟ್ಟು ತಾಳ್ಮೆಯಿಂದ ಜನರ ಸಮಸ್ಯೆ ಆಲಿಸಿ ಎಂದರು.
ಸಾರ್ವಜನಿಕರಲ್ಲಿ ನ್ಯಾಯಾಧೀಶರ ಬಳಿ ಹೋದರೂ ಆರೋಪಿಗಳಿಗೆ ಶಿಕ್ಷೆ ಆಗೊಲ್ಲ ಎಂಬ ಭಾವನೆಯಿದೆ. ಸಾರ್ವಜನಿಕರು ಪೊಲೀಸರು ಸಹ ಸಹಕಾರ ನೀಡಿ. ಸೈಬರ್ ಕ್ರೈಂ, ಅಪಘಾತದ ಬಗ್ಗೆ ಸಂರಕ್ಷಣೆ ಬೇಕಾದರೆ ಸಾರ್ವಜನಿಕರು ಪೊಲೀಸರಿಗೆ ಸಹಕರಿಸಬೇಕಿದೆ.
ಪ್ರಸ್ತಾವಿಕ ಭಾಷಣ ಮಾಡಿದ ಅಡಿಷನಲ್ ಎಸ್ಪಿ ಮನೆ ಮನೆಗೆ ಪೊಲೀಸ್ ವಿನೂತನ ಪ್ರಯೋಗವಾಗಿದೆ. ಇದು ಗೃಹಸಚಿವ ಡಾ.ಪರಮೇಶ್ವರ್ ಅವರ ಕನಸಾಗಿದೆ. ಇದರಲ್ಲಿ ಹೊಸದು ಏನೂ ಇಲ್ಲ ಸಂವಿಧಾನದ ಅನುಗುಣವಾಗಿ ಸೇವೆ ಹಂಚಲಾಗಿದೆ. ಮನೆ ಬಾಗಿಲಿಗೆ ಪೊಲೀಸ್ ವ್ಯವಸ್ಥೆ ಆಗಿದೆ ಎಂದರು.
ನಗರದಲ್ಲಿ ಮೊಹಲ್ಲಾ ಸಭೆ ನಡೆಸಿದರೆ, ಫೀಲ್ಡ್ ವ್ಯವಸ್ಥೆಯನ್ನಹಳ್ಳಿಗಳಲ್ಲಿ ಮಾಡಲಾಗುತ್ತಿದೆ. ಈಗ ಒಂದು ಹೆಜ್ಜೆ ಮುಂದೆ ಹೋಗಿ ಮನೆ ಮನೆಗೆ ಪೊಲೀಸ್ ಹೋಗುತ್ತಿದ್ದಾರೆ. ಮೊದಲು ಪೊಲೀಸರು ಮನೆಗೆ ಹೋದರೆ ಸಾಮಾಜಿಕ ಕಳಂಕವೊಂದಿತ್ತು. ಇವರು ಯಾಕೆ ಮನೆಗೆ ಬಂದಿದ್ದಾರೆ ಎಂಬ ಹಣೆಟ್ಟಿ ಕಟ್ಟಲಾಗುತ್ತಿತ್ತು. ಬೀಟ್ ವ್ಯವಸ್ಥೆಯನ್ನ ಹೆಚ್ಚಿಸಲಾಗುತ್ತಿದೆ. ಕ್ಲಸ್ಟರ್ ನಿರ್ಮಿಸಿಕೊಂಡು ಪ್ರತಿ ತಿಂಗಳ ಎರಡನೇ ಶನಿವಾರ ಭೇಟಿ ಮಾಡಲಾಗುತ್ತಿದೆ ಸಭೆ ನಡೆಸಲಾಗುತ್ತಿದೆ ಎಂದರು.
ಬೀಟ್ ಸಿಬ್ಬಂದಿ ಸಮಸ್ಯೆ ಬಗೆಹರಿಸಲಾಗುತ್ತಿದೆ. ಹೆಚ್ಚಿನ ಸಹಕಾರ ಬೇಕಿದ್ದರೆ ಠಾಣಾಧಿಕಾರಿಗೆ ಕೊಡುತ್ತಾರೆ. ಪತ್ರ ವ್ಯವಹಾರ ನಡೆಸಿ ಸಮಸ್ಯೆ ಬಗೆಹರಿಸುವ ಪ್ರಯತ್ನಿಸಲಾಗುವುದು. ಈ ಮೊದಲು ಫೈಯರ್ ಫೈಟಿಂಗ್ ವ್ಯವಸ್ಥೆಯಿದೆ. ಈಗ ಜನರ ಜೊತೆಗೆ ಸಂಪರ್ಕ ಇಟ್ಟುಕೊಂಡು ಘಟನೆ ನಡೆಯುವ ಮುಂಚೆ ಪೊಲೀಸ್ ಕ್ರಮ ಜರುಗಿಸುವ ಕೆಲಸ ವಾಗಿದೆ ಇದನ್ನ ಪ್ರೋಆಕ್ಟಿವ್ ಪೊಲೀಸ್ ವ್ಯವಸ್ಥೆಯಾಗಿದೆ.
Door-to-door police, judges tells ear talk to both