ad

ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕುಮಾರ್ ನಾಯಕ್ ಲೋಕ ಬಲೆಗೆ-Lokayukta trapped Gramapanchayath secratary

 SUDDILIVE || SHIVAMOGGA

ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕುಮಾರ್ ನಾಯಕ್ ಲೋಕ ಬಲೆಗೆ-Lokayukta trapped Gramapanchayath secratary

Lokayukta, trap


ಮುದ್ದಿನಕೊಪ್ಪದ ಗ್ರಾಮ ಪಂಚಾಯತಿ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ 3000 ಲಂಚ ಪಡೆಯುವಾಗ ಕಾರ್ಯದರ್ಶಿ ಕುಮಾರ್ ನಾಯ್ಕ್ ಲೋಕಾಯುಕ್ತರಿಗೆ ಟ್ರ್ಯಾಪ್ ಆಗಿದ್ದಾನೆ.

ಮುದ್ದಿನಕೊಪ್ಪ ಗ್ರಾಮ ಪಂಚಾಯತಿಯ ಶ್ರೀರಾಂಪುರ ಗ್ರಾಮದಲ್ಲಿ ವಿನೋದ ಎಂಬುವರು ತಮ್ಮ ತಾಯಿ ಹೆಸರಿನಲ್ಲಿರುವ 30×50 ಅಳತೆಯ ಸೈಟಿನಲ್ಲಿ ಮನೆ ಕಟ್ಟಲು ತೀರ್ಮಾನಿಸಿದ್ದು ಆರ್‌ಸಿಸಿ ಮನೆಗಾಗಿ ಇ-ಸ್ವತ್ತು ಮಾಡಿಸಲು ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು.

ಅನೇಕ ಬಾರಿ ಗ್ರಾಮ ಪಂಚಾಯಿತಿಗೆ ತಿರುಗಾಡಿದರು ಸಹ ಇ- ಸ್ವತ್ತು ಕೈ ಸಿಗದ ಹಿನ್ನೆಲೆಯಲ್ಲಿ  ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕುಮಾರ ನಾಯ್ಕ್ ಅವರನ್ನು ಭೇಟಿಯಾಗಿ ಈ ಸ್ವತ್ತಿಗಾಗಿ ಮಾತನಾಡಿರುತ್ತಾರೆ. ಕಾರ್ಯದರ್ಶಿಯು 3000 ಹಣದ ಬೇಡಿಕೆ ಇಟ್ಟಿದ್ದನು. ಹಣ ನೀಡಲು ಇಷ್ಟವಿಲ್ಲದ ಕಾರಣ ವಿನೋದ್ ಲೋಕಾಯುಕ್ತರಿಗೆ ತಿಳಿಸಿದ್ದರು. 

ಇಂದು ಮಧ್ಯಾಹ್ನ 2 ಗಂಟೆಗೆ ಗ್ರಾಮ ಪಂಚಾಯತಿ ಕಾರ್ಯದರ್ಶಿಗೆ ಹಣ ನೀಡುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ. ಕುಮಾರ್ ನಾಯಕರನ್ನು ಅವಶ್ಯಕ ಪಡೆದ ಲೋಕಾಯುಕ್ತರು ತನಿಖೆಯನ್ನು ಕೈಗೊಂಡಿರುತ್ತಾರೆ. 

ಕಾರ್ಯಾಚರಣೆಯು ಲೋಕಾಯುಕ್ತ ಎಸ್ ಪಿ ಮಂಜುನಾಥ್ ಚೌದರಿ ಎಂ ಎಚ್ ಮಾರ್ಗದರ್ಶನದಲ್ಲಿ ನಡೆದಿದ್ದು ಡಿವೈಎಸ್ಪಿ ಬಿಪಿ ಚಂದ್ರಶೇಖರ್, ಪಿಐ ಗುರುರಾಜ ಮೈಲಾರ್ ಪೊಲೀಸ್ ಇನ್ಸ್ಪೆಕ್ಟರ್ ರುದ್ರೇಶ್ ಕೆಪಿ ಸಿಬ್ಬಂದಿಗಳಾದ ಯೋಗೇಶ್ ತಿಕಪ್ಪ ಸುರೇಂದ್ರ ಮಂಜುನಾಥ್ ಭೇಟಿ ಚೆನ್ನೇಶ್ ದೇವರಾಜ್ ಪ್ರಕಾಶ್ ಬಾರಿದಮರ ಗೋಪಿ ಪ್ರದೀಪ್ ಜಯಂತ್ ಪಾಲ್ಗೊಂಡಿದ್ದರು.

Lokayukta trapped Gramapanchayath secratary


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close