ad

ನಾಪತ್ತೆಯಾಗಿದ್ದ ವ್ಯಕ್ತಿ ಕಲ್ಲುಗುಡ್ಡದ ಮೇಲೆ ಶವವಾಗಿ ಪತ್ತೆ

SUDDILIVE || THIRTHAHALLI

ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ-Missing man found dead

Thirthahalli, Missing

ಮೂರು ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾನೆ. ತೀರ್ಥಳ್ಳಿ ತಾಲೂಕು ಆಗುಂಬೆ ಹೋಬಳಿ ಹೊನ್ನೆ ತಾಳು ಗ್ರಾಮ ಪಂಚಾಯತ್ ಚಂಗಾರು ಗ್ರಾಮದಲ್ಲಿ ಈ ಘಟನೆ ನಡೆದಿದೆ. 

ಕಳೆದ ಮೂರು ದಿನದಿಂದ ಕೃಷಿ ಮಾಡಲೆಂದು ಹೋಗಿ ನಾಪತ್ತೆಯಾಗಿದ್ದ ರಮೇಶ್ ಶವವಾಗಿ ಪತ್ತೆಯಾಗಿದ್ದಾರೆ. ಜುಲೈ 26 ರಂದು ಮಧ್ಯಾಹ್ನ 2 ಗಂಟೆಗೆ ಮನೆಯಿಂದ ಎರಡು ಕಿಮಿ ದೂರದಲ್ಲಿರುವ ತೋಟಕ್ಕೆ ತೆರಳಿದ್ದರು. 

ಮೃತ ದೇಹ ಹೊಸಪೇಟೆ ಹಂಗಾರು ಗ್ರಾಮ ಹೊಸಪೇಟೆ ಕಲ್ಲುಗುಡ್ಡ  ಎಂಬ ಅರಣ್ಯ ಪ್ರದೇಶದಲ್ಲಿ  ಶವಪತ್ತೆಯಾಗಿದೆ. ಸ್ಥಳಕ್ಕೆ  ಆಗುಂಬೆ ಪೊಲೀಸರು ಭೇಟಿ ನೀಡಿದ್ದಾರೆ.  ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಉನ್ನತ ಮಟ್ಟದ ತನಿಖೆ ಆಗಬೇಕೆಂದು ಕುಟುಂಬದವರು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ. 

ಬಡ್ಡಿ ವ್ಯವಹಾರದಲ್ಲಿ ರಮೇಶ್ ಸಾವಾಗಿದೆ ಎಂಬುದು ಗ್ರಾಮಸ್ಥರ ಅನುಮಾನವಾಗಿದೆ. ಯಾವುದಕ್ಕೂ ಪೊಲೀಸರ ತನಿಖೆಯಿಂದ ಪ್ರಕರಣ ಹೊರಬೀಳಬೇಕಿದೆ. ಈತನ ತೋಟ ಮತ್ತು ಈತನ ಶವ ಪತ್ತೆಯಾದ ಜಾಗ ಎರಡು ವಿರುದ್ಧ ದಿಕ್ಕಿನಲ್ಲಿರುವುದರಿಂದ ಪ್ರಕರಣ ಕುತೂಹಲ ಪಡೆದುಕೊಂಡಿದೆ. ಇಂದು ಬೆಳಿಗ್ಗೆ 11 ಗಂಟೆಗೆ ರಮೇಶ್ ಗುಡ್ಡದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. 

Missing man found dead

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close