ad

ಹೊರರಾಜ್ಯದ ಗಾಂಜಾ ಮಾರಾಟ ಆರೋಪಿಗಳಿಗೆ ಶಿಕ್ಷೆ-Sentenced for selling marijuana outside the state

SUDDILIVE || THIRTHAHALLLI

ಹೊರರಾಜ್ಯದ ಗಾಂಜಾ ಮಾರಾಟ ಆರೋಪಿಗಳಿಗೆ ಶಿಕ್ಷೆ-Sentenced for selling marijuana outside the state

Marijuna, selling




ಅಕ್ರಮ‌ಗಾಂಜಾ ಮಾರಾಟ ಮಾಡುತ್ತಿದ್ದ ಐವರು ಪಂಶ್ಚಿಮ‌ಬಂಗಾಲದ ಆರೋಪಿಗೆ ಶಿವಮೊಗ್ಗ ನ್ಯಾಯಾಲಯ ನಾಲ್ಕು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪುನೀಡಿದೆ.

ದಿನಾಂಕಃ 12-07-2022  ರಂದು ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ವಿಠಲ ನಗರದಲ್ಲಿ, ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ, ಆಗಿನ ಡಿವೈಎಸ್ಪಿ ಶಾಂತವೀರ್, ಮತ್ತು ಸಿಬ್ಬಂದಿಗಳೊಂದಿಗೆ ದಾಈ ನಡೆಸಿದ್ದರು.  

1) ಅಲೋಕ್ ಮಂಡಲ್, 34 ವರ್ಷ, ಸೆಂಟ್ರಿಂಗ್ ಕೆಲಸ, ವಾಸ ಟೆಂಗಾಬಾರ, ಗೊಂಗಾರಾಂಪುರ್ ಸ್ಟೇಷನ್, ದಕ್ಕಿನ್ ದಿನೇಸ್ ಪುರ್, ಮಾಲ್ಡ, ಪಶ್ಚಿಮ ಬಂಗಾಳ, 2) ಶ್ರೀಬಾಷ್ ಸರ್ಕಾರ್, 20 ವರ್ಷ, ಸೆಂಟ್ರಿಂಗ್ ಕೆಲಸ, ಸ್ವಂತ ವಿಳಾಸ: ಪುರ್ಬ ಭೋಗ್ದಾಬ್ರಿ, ಮಗ್ಪಲ, ಕೂಚ್ ಬೆಹರ್, ಪಶ್ಚಿಮ ಬಂಗಾಳ, 3) ಅಮ್ರಿತ್ ಮಂಡಲ್, 27 ವರ್ಷ, ಸೆಂಟ್ರಿಂಗ್ ಕೆಲಸ, ವಾಸ: ಉತ್ತರ್ ಸಿಂಗಿಮರಿ ಪಶ್ಚಿಮ ಬಂಗಾಳ, 4) ಸಂಕರ್ ಬ್ಯಾಪಾರಿ, 28 ವರ್ಷ, ಸೆಂಟ್ರಿಂಗ್ ಕೆಲಸ, ವಾಸ ಖಲಿಷ, ಗೊಸಾನಿಮರಿ, ಪಶ್ಚಿಮ ಬಂಗಾಳ ಮತ್ತು 5) ಹರಧನ್ ಮಂಡಲ್, 32 ವರ್ಷ, ವಾಸ : ದಿನ್ಹಟ, ಜಂಬರಿ, ಕೂಚ್ ಬೆಹರ್, ಗೊಸ್ಸಾನಿಮರಿ, ಪಶ್ಚಿಮ ಬಂಗಾಳ ರವರುಗಳನ್ನು ದಸ್ತಗಿರಿ ಮಾಡಿ, ಸದರಿಯವರಿಂದ 1 ಕೆಜಿ 564 ಗ್ರಾಂ ತೂಕದ ಮಾದಕ ವಸ್ತು ಗಾಂಜಾ, ರೂ 3550 /-  ನಗದು, 05 ಮೊಬೈಲ್ ಫೋನ್ ಗಳನ್ನು ಅಮಾನತ್ತು ಪಡಿಸಿಕೊಂಡು, ಸದರಿಯವರ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣಾ ಗುನ್ನೆ ಸಂಖ್ಯೆ 0138/2022  ಕಲಂ 20(b) (ii) (B), 27(b) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಾಗಿತ್ತು. 

ಪ್ರಕರಣದಲ್ಲಿ ಆಗಿನ ತನಿಖಾಧಿಕಾರಿಗಳಾದ  ಅಶ್ವತ್ ಗೌಡ, ಪಿ.ಐ ತೀರ್ಥಹಳ್ಳಿ ಪೊಲೀಸ್ ಠಾಣೆ ರವರು ಪ್ರಕರಣದ ತನಿಖೆ ಪೂರೈಸಿ, ಆರೋಪಿತರ ವಿರುದ್ಧ  ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು  ಸಲ್ಲಿಸಿರುತ್ತಾರೆ. 

ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ  ಸುರೇಶ್ ಕುಮಾರ್ ಎ. ಎಂ. ಸರ್ಕಾರಿ ಅಭಿಯೋಜಕರವರು, ಪ್ರಕರಣದ ವಾದ ಮಂಡಿಸಿದ್ದು ಘನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿತರ ವಿರುದ್ದ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಧಿಶರಾದ ಶ್ರೀ ಮಂಜುನಾಥ್ ನಾಯಕ್* ರವರು ದಿನಾಂಕಃ 16-07-2025 ರಂದು ಆರೋಪಿತರಿಗೆ 4 ವರ್ಷ ಕಠಿಣ ಕಾರಾವಾಸ ಶಿಕ್ಷೆ  ಮತ್ತು ರೂ 25,000/- ದಂಡ, ದಂಡ ಕಟ್ಟಲು ವಿಫಲನಾದಲ್ಲಿ ಹೆಚ್ಚುವರಿ 06 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿ ಆದೇಶಿಸಿರುತ್ತಾರೆ.

Sentenced for selling marijuana outside the state

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close