ad

ಯಶವಂತಪುರ ಮತ್ತು ತಾಳಗುಪ್ಪ ನಡುವೆ ವಿಶೇಷ ರೈಲುಗಳ ಸೇವೆ ವಿಸ್ತರಣೆ-Special train service expanded between Yeshwantpur and Talaguppa

SUDDILIVE || SHIVAMOGGA

ಯಶವಂತಪುರ ಮತ್ತು ತಾಳಗುಪ್ಪ ನಡುವೆ ವಿಶೇಷ ರೈಲುಗಳ ಸೇವೆ ವಿಸ್ತರಣೆ-Special train service expanded between Yeshwantpur and Talaguppa

Yaswanthpura, Talguppa


ಪ್ರಯಾಣಿಕರ ಹೆಚ್ಚಿದ ಬೇಡಿಕೆಯನ್ನು ಪೂರೈಸುವ ಸಲುವಾಗಿ, ರೈಲು ಸಂಖ್ಯೆ 06587/06588 ಯಶವಂತಪುರ – ತಾಳಗುಪ್ಪ – ಯಶವಂತಪುರ ವಿಶೇಷ ಎಕ್ಸ್‌ ಪ್ರೆಸ್ ರೈಲು ಸೇವೆಯನ್ನು ಪ್ರತಿ ದಿಕ್ಕಿನಲ್ಲಿ ತಲಾ ಎರಡು ಹೆಚ್ಚುವರಿ ಟ್ರಿಪ್’ಗಳಿಗೆ ನೈಋತ್ಯ ರೈಲ್ವೆಯು ವಿಸ್ತರಿಸಿದೆ.

ಇಂದು ಮತ್ತು ನಾಳೆಗೆ ಮಾತ್ರ ಸೀಮಿತವಾಗಿದ್ದ ಯಶವಂತಪುರ-ತಾಳಗುಪ್ಪ ರೈಲನ್ನ ನೈರುತ್ಯ ರೈಲ್ವೆ ಅವಧಿಯನ್ನ ವಿಸ್ತರಿಸಿದೆ.  ರೈಲು ಸಂಖ್ಯೆ 06587 ಯಶವಂತಪುರ – ತಾಳಗುಪ್ಪ ವಿಶೇಷ ಎಕ್ಸ್‌ ಪ್ರೆಸ್ ರೈಲು ಆಗಸ್ಟ್ 1 ಮತ್ತು 8, 2025 ರಂದು (ಶುಕ್ರವಾರ) ಯಶವಂತಪುರದಿಂದ ರಾತ್ರಿ 10:30 ಗಂಟೆಗೆ ಹೊರಟು, ಮರುದಿನ (ಶನಿವಾರ) ಬೆಳಗಿನ ಜಾವ 04:15 ಗಂಟೆಗೆ ತಾಳಗುಪ್ಪ ತಲುಪಲಿದೆ.

ರೈಲು ಸಂಖ್ಯೆ 06588 ತಾಳಗುಪ್ಪ – ಯಶವಂತಪುರ  ವಿಶೇಷ ಎಕ್ಸ್‌ ಪ್ರೆಸ್ ರೈಲು ಆಗಸ್ಟ್ 2 ಮತ್ತು 9, 2025 ರಂದು (ಶನಿವಾರ) ತಾಳಗುಪ್ಪದಿಂದ ಬೆಳಿಗ್ಗೆ 08:15 ಗಂಟೆಗೆ ಹೊರಟು, ಅದೇ ದಿನ ಸಂಜೆ 04:50 ಗಂಟೆಗೆ ಯಶವಂತಪುರ ತಲುಪಲಿದೆ.

ಈ ರೈಲು ಎರಡೂ ಮಾರ್ಗದಲ್ಲಿ, ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ತರೀಕೆರೆ, ಭದ್ರಾವತಿ, ಶಿವಮೊಗ್ಗ ಟೌನ್, ಆನಂದಪುರಂ ಮತ್ತು ಸಾಗರ ಜಂಬಗಾರು ನಿಲ್ದಾಣಗಳಲ್ಲಿ ನಿಲುಗಡೆ ಮಾಡಲಿದೆ.

Special train service expanded between Yeshwantpur and Talaguppa

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close