" alt="ad">

ನಮ್ಮದು ಒರಿಜಿನಲ್ ಪ್ರೊ.ಕೃಷ್ಣಪ್ಪ ಸ್ಥಾಪಿತ ಡಿಎಸ್ಎಸ್ ಸಂಘಟನೆ-ಚಿನ್ನಯ್ಯ- Ours is the original DSS

 SUDDILIVE || SHIVAMOGGA

ನಮ್ಮದು ಒರಿಜಿನಲ್ ಪ್ರೊ.ಕೃಷ್ಣಪ್ಪ ಸ್ಥಾಪಿತ ಡಿಎಸ್ಎಸ್ ಸಂಘಟನೆ-ಚಿನ್ನಯ್ಯ-Ours is the original DSS organization founded by Prof. Krishnappa-Chinnaiah

Original, DSS

ಕೃಷ್ಣಪ್ಪ ಸ್ಥಾಪಿತ,  ಡಿಎಸ್ಎಸ್ ಎಂಬ ಪದ ಬಳಕೆ ಮಾಡಿಕೊಂಡು ಸಂಘಟನೆಯನ್ನ ಬಳಕೆ ಮಾಡಿಕೊಳ್ಳುವ ಹಾಗೆ ಇಲ್ಲ. ಕೃಷ್ಣಪ್ಪ ಸ್ಥಾಪಿತ ನಮ್ಮದು. ನಮ್ಮದೆ ವರ್ಜಿನಲ್ ಪ್ರೊ.ಕೃಷ್ಣಪ್ಪ ದಲಿತ ಸಂಘರ್ಷ ಸಮಿತಿ ಎಂದು ಸಮಿತಿಯ ಜಿಲ್ಲಾ ಸಂಚಾಲಕ ಚಿನ್ನಯ್ಯ ಗುರುಮೂರ್ತಿ ಅವರ ಬಣದ ಹೆಸರು ಉಲ್ಲೇಖಿಸದೆ ತಿರುಗೇಟು ನೀಡಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ  ಸಂಘಟನೆಗೆ ಸರ್ಕಾರ ನೀಡಿದ ಆದೇಶವಿದೆ. ಆತ ನಡೆಸುತ್ತಿರುವುದು ಕುಟುಂಬ ಸಂಘಟನೆ, ಆತನ ಚಿಕ್ಕಪ್ಪ, ದೊಡ್ಡಪ್ಪ ಸಹೋದರ ಸಂಬಂಧಿಗಳೆ ಆ ಸಂಘಟನೆಯ ಅಧ್ಯಕ್ಷ ಉಪಾಧ್ಯಕ್ಷರಾಗಿದ್ದಾರೆ ಎಂದು  ಮುಗಿ ಬಿದ್ದಿದ್ದಾರೆ.  

ದಲಿತ ಸಂಘರ್ಷ ಸಮಿತಿ ಗುರುಮೂರ್ತಿಗಳ ನೇತೃತ್ವದ ಸಂಘಟನೆಯು ಈ ಹಿಂದೆ ಭದ್ರಾವತಿ ನ್ಯಾಯಾಲಯ ನಮ್ಮದು ಎಂದು ಸುದ್ದಿಗೋಷ್ಠಿ ನಡೆಸಿ ಹೇಳಿದ್ದರು. ಆದರೆ ಈಗ ಚಿನ್ನಯ್ಯ ಅವರ ಹೇಳಿಕೆ ಮತ್ತೊಂದು ತಿರುವು ಪಡೆದುಕೊಂಡಿದೆ. 

ಡಿಎಸ್ಎಸ್1975ರಲ್ಲಿ ಪ್ರಾರಂಭವಾಯಿತು.50 ವರ್ಷಗಳಲ್ಲಿ ನೊಂದವರ ಧ್ವನಿಯಾಗಿ, ಶೋಷಿತರ ಪರ ಹೋರಾಟ ಮಾಡುತ್ತಾ ಬಂದಿದೆ. ಜೂ.26ರಂದು ಅಂಬೇಡ್ಕರ್ ಭವನದಲ್ಲಿ ಅಂಬೇಡ್ಕರ್ ಜಯಂತಿ ಮತ್ತು ಪ್ರೊ.ಬಿ.ಕೃಷ್ಣಪ್ಪ ಅವರ ಜಯಂತಿ ಆಚರಿಸಲಾಗುವುದು. ನಮ್ಮದು ಪ್ರೊ.ಕೃಷ್ಣಪ್ಪ ಸ್ಥಾಪಿತ ಅಧಿಕೃತ ಸಂಘಟನೆ. ಆತ ದಲಿತ ಸಂಘರ್ಷ ಸಮಿತಿ,ಪ್ರೊ. ಕೃಷ್ಣಪ್ಪ ಸ್ಥಾಪಿತ ಎಂದು ಬಳಸುವಂತಿಲ್ಲ ಎಂದರು. 

ರಾಜಕುಮಾರ್, ಏಳುಮಲೈ, ಪ್ರಕಾಶ್, ನರಸಿಂಹರಾಜು ಮೂರ್ತಿ, ಬಸವರಾಜ್ ಬೂದಿಗೆರೆ, ಮಹಾಲಿಂಗಪ್ಪ, ಕೆ.ಸುರೇಶ್, ಗಿರೀಶ್, ಸಂದೀಪ್ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು. 

Ours is the original DSS

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close