SUDDILIVE || SHIVAMOGGA
ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ-Suspect arrested for selling Ganja
ಜು.1 ರಂದು ಶಿವಮೊಗ್ಗ ಹೊನ್ನಾಳಿ ರಾಜ್ಯ ರಸ್ತೆಗೆ ಹೊಂದಿಕೊಂಡಂತೆ ಇರುವ ತ್ಯಾವರೇಚಟ್ನಹಳ್ಳಿಯಲ್ಲಿ ಹೊಸದಾಗಿ ನಿರ್ಮಾಣ ಹಂತದಲ್ಲಿರುವ ಲೇಕ್ ವ್ಯೂ ರೆಸಿಡೆನ್ಸಿಯ ಒಳಭಾಗದ ನಿವೇಶನಗಳಿಗೆ ಹೋಗುವ ರಸ್ತೆಯಲ್ಲಿ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನ ಬಂಧಿಸಿ 1 ಕೆಜಿ 219 ಗ್ರಾಂ ಗಾಂಜಾವನ್ನ ಸೀಜ್ ಮಾಡಿದ್ದಾರೆ.
ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಮಿಥುನ್ ಕುಮಾರ್ ಜಿ. ಕೆ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಮತ್ತು ಶ್ರೀ ಅನಿಲ್ ಕುಮಾರ್ ಭುಮರಡ್ಡಿ, ಹೆಚ್ಚುವರಿ ಪೊಲೀಸ್ ಅಧಿಕ್ಷಕರು-1, ಶಿವಮೊಗ್ಗ ಜಿಲ್ಲೆ ಹಾಗೂ ಕಾರಿಯಪ್ಪ ಎ ಜಿ, ಹೆಚ್ಚುವರಿ ಪೊಲೀಸ್ ಅಧಿಕ್ಷಕರು-2, ಶಿವಮೊಗ್ಗ ಜಿಲ್ಲೆರವರ ಮಾರ್ಗದರ್ಶನದಲ್ಲಿ, ಕೃಷ್ಣಮೂರ್ತಿ ಕೆ ಪೊಲೀಸ್ ಉಪಾಧೀಕ್ಷಕರು ಸಿಇಎನ್ ಕ್ರೈಂ ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂಧಿಗಳಾದ ಶೇಖರ್ ಎಎಸ್ಐ, ಕರಿಬಸಪ್ಪ ಬಿ ಎಸ್ ಹೆಚ್‌ಸಿ ಧರ್ಮಾ ನಾಯ್ಕ ಹೆಚ್‌ಸಿ, ಅವನಾಶ ಹೆಚ್‌ಸಿ, ಚಂದ್ರಶೇಖರ್ ಡಿ ಅರ್ ಹೆಚ್‌ಸಿ, ಗಿರೀಶ್ ಸ್ವಾಮಿ ಬಿ ಹೆಚ್ ಪಿಸಿ ನಾರಾಯಣ ಸ್ವಾಮಿ ಪಿಸಿ, ಪಿರ್ ದೊಸ್ ಅಹಮದ್ ಪಿಸಿ, ರವಿ ಬಿ ಪಿಸಿ, ಆಂಡ್ರ್ಯೂಸ್ ಜೊನ್ಸ್ ಪಿಸಿ, ಮತ್ತು ಪ್ರಮೋದ್ ಎಲ್ ಬಿ ಪಿಸಿ ತಂಡವು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಟಿಪ್ಪುನಗರದ ನಿವಾಸಿ ಮಹಮ್ಮದ್ ಜಮೀರ್ ಅಹಮ್ಮದ್ ಬಿನ್ ಖಲೀಮುಲ್ಲಾ, (33) ಎಂಬುವನನ್ನ ಬಂಧಿಸಲಾಗಿದೆ
ಆರೋಪಿಯಿಂದ ಅಂದಾಜು ಮೌಲ್ಯ 25,000/- ರೂಗಳ 1 ಕೆಜಿ 219ಗ್ರಾಂ ತೂಕದ ಒಣ ಗಾಂಜಾ ಹಾಗೂ ಒಂದು ರಾಯಲ್ ಎನ್ ಫಿಲ್ಡ್ ಬೈಕ್ ನ್ನು ಅಮಾನತ್ತು ಪಡಿಸಿಕೊಂಡು ಶಿವಮೊಗ್ಗದ CEN ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Suspect arrested for selling Ganja