SUDDILIVE || BHADRAVATHI
ಭದ್ರೆಗೆ ಬಾಗಿನ, ಜಲಶಯದ ನೀರಿನ ಮಟ್ಟ-The water level of a reservoir
ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ನಿನ್ನೆ ನಗರದಲ್ಲಿ ಮಧ್ಯಾಹ್ನದ ಹೊತ್ತಿಗೆ ಮಳೆಬಿದ್ದಿದ್ದು, ಮತ್ತೆ ನಾಪತ್ತೆಯಾಗಿತ್ತು. ಇಂದು ಬೆಳಿಗ್ಗೆ ನಗರದಲ್ಲಿ ಜಿಟಿ ಜಿಟಿ ಮಳೆ ಆರಂಭವಾಗಿದೆ.
ಇವೆಲ್ಲದರ ಮಧ್ಯೆ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಭದ್ರನದಿಯಲ್ಲಿ ನಿನ್ನೆ 175 ಅಡಿ ತಲುಪಿದ ಬೆನ್ನಲ್ಲೇ ನಾಲ್ಕುಕ್ರಸ್ಟ್ ಗೇಟು ಓಪನ್ ಮಾಡಿ ನದಿಗೆ ನೀರು ಬಿಡಲಾಗಿದೆ. ಇಂದುಸಹ ನದಿಗೆ 11500 ಕ್ಯೂಸೆಕ್ ನೀರು ಒಳಹರಿವಿದೆ.
ಈ ಬೆನಲ್ಲೇ ಇಂದು ಕಾಡಾ ಅಧ್ಯಕ್ಷ ಡಾ.ಅಂಶುಮಂತ್ ನೇತೃತ್ವದಲ್ಲಿ ತುಂಬುವ ಹಂತದಲ್ಲಿರುವ ಭದ್ರೆಗೆ ಬಾಗಿನ ಅರ್ಪಿಸಿದರು. ಈವೇಳೆ ಎಸ್ ಇ ರವಿಚಂದ್ರ, ಎಕ್ಸಿಕ್ಯೂಟಿವ್ ಇಂಜಿನಿಯರ್ ರವಿಕುಮಾರ್, ಎಇಇ ಉಮೇಶ್ ನಿನ್ನೆ ಬಾಗಿನ ಅರ್ಪಿಸಿದ್ದಾರೆ.
ಗಾಜನೂರು ಜಲಾಶಯದಲ್ಲಿ ತುಂಗ ನದಿಯ ಒಳ ಹರಿವು 28 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಅಷ್ಟೆ ಪ್ರಮಾಣದ ನೀರನ್ನ ನದಿಗೆ ಹರಿಸಲಾಗುತ್ತಿದೆ. ನಿನ್ನೆ 29061 ಕ್ಯೂಸೆಕ್ ಹರಿದುಬರುತ್ತಿತ್ತು. ಇಂದು 28 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಲಿಂಗನಮಕ್ಕಿಯಲ್ಲಿ ಒಳಹರಿವು ಹೆಚ್ಚಾಗಿದೆ. ನಿನ್ನೆ 23158 ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಇಂದು 35 ಸಾವಿರ ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದುಬರುತ್ತಿದೆ. 1819 ಅಡಿ ನೀರು ಸಾಮರ್ಥ್ಯ ಸಂಗ್ರಹದ ಜಲಾಶಯದಲ್ಲಿ ನಿನ್ನೆ 1797.60 ಅಡಿ ಸಾಮರ್ಥ್ಯದ ನೀರು ಸಂಗ್ರಹವಾಗಿತ್ತು. ಇಂದು 1798.65 ಅಡಿ ನೀರು ಸಂಗ್ರಹವಾಗಿದೆ. 35655 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
The water level of a reservoir