SUDDILIVE || SHIVAMOGGA
ಎನ್ ಆರ್ ಪುರ ಸಮೀಪ ಆನೆ ದಾಳಿಗೆ ಯುವತಿ ಬಲಿ!Young woman killed in elephant attack near NR Pura!
ಎನ್ ಆರ್ ಪುರ ಸಮೀಪದ ಬನ್ನೂರು ಗ್ರಾಮದ ಬಳಿ ಆನೆ ದಾಳಿಗೆ ಯುವತಿ ಸಾವುಕಂಡಿದ್ದಾಳೆ. ಆನೆ ತುಳಿತಕ್ಕೆ ಒಳಗಾದ ಯುವತಿಯನ್ನ ಶಿವಮೊಗ್ಗದ ಮೆಗ್ಗಾನ್ ಗೆ ಕರೆತರುವ ಮೊದಲೇ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾಳೆ.
ಹೊನ್ನಳ್ಳಿ ಮೂಲದ ಅನಿತಾ (25) ಮೃತ ದುರ್ದೈವಿಯಾಗಿದ್ದಾಳೆ. ಕಾಫಿ ತೋಟದಲ್ಲಿ ಕೂಲಿ ಕಾರ್ಮಿಕರು ಇವರಾಗಿದ್ದು,ಅಲ್ಲಿನ ತೋಟದ ಸಾಲು ಮನೆಗಳಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಆಕೆಯ ಶವವನ್ನ ಶಿವಮೊಗ್ಗದ ಮೆಗ್ಗಾನ್ ಶವಗಾರದಲ್ಲಿ ನಿನ್ನೆ ಇರಿಸಲಾಗಿತ್ತು.
ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದು.ಮೃತರಿಗೆ ಕಾನೂನು ಪ್ರಕಾರ ಪರಿಹಾರ ನೀಡಲಾಗುವುದು ಎಂದರು.ಇತ್ತೀಚೆಗೆ ಆನೆ ದಾಳಿಯಲ್ಲಿ ಈ ಭಾಗದಲ್ಲಿ ಹಲವಾರು ಜನರು ಪ್ರಾಣ ಕಳೆದುಕೊಂಡಿರುವ ಆರೋಪ ಕೇಳಿ ಬರುತ್ತಿದೆ. ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಹೊರಗಿನ ಆನೆಗಳ ತಂದು ಬಿಟ್ಟು ತಮಾಷೆ ನೋಡುತಿದ್ದರೆ:
ಹಾಸನ ಜಿಲ್ಲೆಯಲ್ಲಿ ಆನೆ ಸೆರೆ ಹಿಡಿದು ತಂದು ಭದ್ರಾ ಅಭಯಾರಣ್ಯಕ್ಕೆ ಬಿಡಲಾಗಿದೆ ಸಾಕಷ್ಟು ಆನೆಗಳನ್ನು ತಂದು ಬಿಟ್ಟು ಅವು ಗ್ರಾಮಗಳತ್ತ ಬರುತ್ತೇವೆ.ಈ ಹಿಂದೆ ಈ ಭಾಗದಲ್ಲಿ ಆನೆಗಳ ಸಮಸ್ಯೆ ಇರಲಿಲ್ಲ.ಅದರಲ್ಲೂ ಜನರ ಮೇಲೆ ದಾಳಿ ಮಾಡಿರುವುದು ಇತ್ತೀಚೆಗೆ ಹೆಚ್ಚಾಗಿದೆ ಎನ್ನುತ್ತಾರೆ ಸ್ಥಳೀಯರು,ಅರಣ್ಯ ಅಧಿಕಾರಿಗಳ ನೆಡೆಯನ್ನು ಖಂಡಿಸಿದ್ದಾರೆ.
Young woman killed in elephant attack near NR Pura!