SUDDILIVE || SHIVAMOGGA
ಜಿಲ್ಲೆಯ ಜಲಾಶಯಗಳ ನೀರಿನ ಮಟ್ಟ-dam level today
ಪುಷ್ಯಮಳೆಯ ಅಬ್ಬರಕ್ಕೆ ಈಗಾಗಲೇ ಭದ್ರಾವತಿ ಸಾಗರ, ತೀರ್ಥಹಳ್ಳಿ ಮತ್ತು ಹೊಸನಗರ ತಾಲೂಕಿನ ಅಂಗನವಾಡಿ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಅದರ ಬೆನ್ನಲ್ಲೇ ಹಳ್ಳಕೊಳ್ಳಗಳು ನದಿಗಳು ಮೈದುಂಬಿ ಹತಿಯುತ್ತಿವೆ.
ಅದರಂತೆ ರಾಜ್ಯದಲ್ಲಿಯೇ ಪುಟ್ಟ ಅಣೆಕಟ್ಟಾಗಿರುವ ತುಂಗ ನದಿಯ ಜಲಾಶಯಕ್ಕೆ ನೀರಿನ ಪ್ರಮಾಣ ಏರಿಕೆಯಾಗಿವೆ. ನಿನ್ನೆ 17 ಸಾವಿರ ಕ್ಯೂಸೆಕ್ ನೀರು ಹರಿದು ಬಂದರೆ ಇಂದು ಅದು ದುಪ್ಪಟ್ಟಾಗಿವೆ. 33702 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು 34702 ಕ್ಯೂಸೆಕ್ ನೀರನ್ನ ಜಲಾಶಯದಿಂದ 22 ಗೇಟು ತೆರೆದು ಹರಿಸಲಾಗುತ್ತಿದೆ.
ಅದರಂತೆ ಭದ್ರ ಜಲಾಶಯದಲ್ಲಿ ನಿನ್ನೆ ತನಕ 10 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಪುಷ್ಯ ಮಳೆಯ ಅಬ್ಬರಕ್ಕೆ ಒಳಹರಿವು ಎರಡು ಪಟ್ಟು ಹೆಚ್ಚಾಗಿವೆ. ಇಂದು 20407 ಕ್ಯೂಸೆಕ್ ನೀರು ಹರಿದು ಬರುತ್ತಿವೆ. 186 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ನಿನ್ನೆ 179.8 ಅಡಿ ಹೆಚ್ಚಳವಾಗಿದ್ದರೆ. ಇಂದು 180.6 ಅಡಿ ನೀರು ಸಂಗ್ರಹವಾಗಿದೆ. 8914 ಕ್ಯೂಸೆಕ್ ನೀರನ್ನ ಜಲಾಶಯದಿಂದ ಹರಿಸಲಾಗುತ್ತಿದೆ. ಕಳೆದ ವರ್ಷ ಇಷ್ಟು ಹೊತ್ತಿಗೆ 171.6 ಅಡಿ ನೀರು ಸಂಗ್ರವಾಗಿತ್ತು.
ಇನ್ನು ಲಿಂಗನಮಕ್ಕಿಯಲ್ಲಿ 40 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ 1819 ಅಡಿ ನೀರು ಸಂಗ್ರಹದ ಜಲಾಶಯದಲ್ಲಿ ಈಗ 1806.40 ಅಡಿ ಸಂಗ್ರಹವಾಗಿದೆ. ಕಳೆದ ವರ್ಷ ಇಷ್ಡು ಹೊತ್ತಿಗೆ ಜಲಾಶಯಕ್ಕೆ 1802.70 ಅಡಿ ನೀರು ಸಂಗ್ರಹವಾಗಿತ್ತು. ಕಳೆದ ವರ್ಷ ಇಷ್ಟು ಹೊತ್ತಿಗೆ 67.82% ಸಂಗ್ರಹವಾಗಿದ್ದರೆ ಈ ಬಾರಿ 112.85% ಭರ್ತಿಯಾಗಿವೆ.
dam level today
ಬ್ಲಾಗ್ನ ನಿರ್ವಾಹಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿ