ad

ಸಚಿವರ ತವರು ಕ್ಷೇತ್ರದಲ್ಲೇ ಶಾಲೆಯ ನಿರ್ಲಕ್ಷ-ಎಸ್ ಡಿ ಎಂಸಿ ಅವರ ಹಿಡಿಶಾಪ- School neglect in minister's home constituency

SUDDILIVE || SHIVAMOGGA

ಸಚಿವರ ತವರು ಕ್ಷೇತ್ರದಲ್ಲೇ ಶಾಲೆಯ ನಿರ್ಲಕ್ಷ-ಎಸ್ ಡಿ ಎಂಸಿ ಅವರ ಹಿಡಿಶಾಪ-School neglect in minister's home constituency - SDMC's curse



ರಾಜ್ಯದ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರ ತವರು ಜಿಲ್ಲೆಯಲ್ಲಿ ಸರ್ಕಾರಿ ಉರ್ದು ಶಾಲೆಯೊಂದು ಬೀಳುವ ಹಂತದಲ್ಲಿದೆ.  ಶಿವಮೊಗ್ಗದ ಹೊನ್ನಾಪುರದಲ್ಲಿ ಇರುವ ಸರ್ಕಾರಿ ಉರ್ದು ಶಾಲೆಯ ದುಸ್ಥಿತಿ ಇದೀಗ ಸರ್ಕಾರದ ಶಿಕ್ಷಣ ಅಭಿವೃದ್ಧಿ ಸಂಭ್ರಮಕ್ಕೆ ಕೈಗನ್ನಡಿಯಾಗುವಂತಾಗಿದೆ. 

ಶಿವಮೊಗ್ಗದಿಂದ ಕೇವಲ 7 ಕಿ.ಮೀ ದೂರದಲ್ಲಿರುವ ಹೊನ್ನಾಪುರ ಗ್ರಾಮದಲ್ಲಿರುವ ಈ ಶಾಲೆ ಹತ್ತಿರದ ಎರಡು ಹಳ್ಳಿಗಳಿಗೆ ಸಹ ಶಿಕ್ಷಣದ ಕೇಂದ್ರವಾಗಿದೆ. ಕಳೆದ ವರ್ಷ ಈ ಶಾಲೆಯಲ್ಲಿ 80ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು 1ರಿಂದ 7ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡುತ್ತಿದ್ದರು. ಆದರೆ ಶಾಲೆಯಲ್ಲಿ ಕೊಠಡಿಗಳ ಕೊರತೆಯಿಂದಾಗಿ ಗ್ರಾಮೀಣ ಸಮುದಾಯ ಭವನದಲ್ಲಿ ತರಗತಿಗಳು ನಡೆಯುತ್ತಿವೆ. ಕೆಲವು ತರಗತಿಗಳಲ್ಲಿ ಒಂದೇ ಕೊಠಡಿಯಲ್ಲಿ ಇಬ್ಬರ ತರಗತಿ ನಡೆಯುತ್ತಿದ್ದು, ಶಿಕ್ಷಕರು ತೊಡಕಿನ ನಡುವೆಯೇ ಪಾಠ ಹೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. 

ಶಾಲೆಯ ಮುಖ್ಯ ಕಟ್ಟಡದಲ್ಲಿ ಒಂದು ಕೊಠಡಿ ಸಂಪೂರ್ಣ ಕುಸಿದು ಹೋಗಿದ್ದು, ಅದು ನವೀಕರಣಕ್ಕೆ ಕೂಡ ಯೋಗ್ಯವಾದ ಸ್ಥಿತಿಯಲ್ಲಿ ಇಲ್ಲವಾಗಿದೆ.  ಮಧ್ಯಾಹ್ನದ ಬಿಸಿಯೂಟದ ಕಾರ್ಯಕ್ರಮದ ಗೋದಾಮಿನ ಮೇಲ್ಛಾವಣಿ ಯಾವ ಕ್ಷಣದಲ್ಲಾದರೂ ಕುಸಿಯುವ ಸ್ಥಿತಿಯಲ್ಲಿದೆ. ಇದರ ಬಗ್ಗೆ ಹಲವು ಬಾರಿ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಎಸ್‌ಡಿಎಂಸಿ ಸದಸ್ಯರು ಆರೋಪಿಸಿದ್ದಾರೆ.

ಈ ಪರಿಸ್ಥಿತಿಯಿಂದ ಬೇಸರಗೊಂಡ ಕೆಲವರು ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಲು ಮುಂದಾಗಿದ್ದಾರೆ. ಈ ಬಗ್ಗೆ ಎಸ್‌ಡಿಎಂಸಿ ಸಮನ್ವಯ ಸಮಿತಿಯ ತಾಲೂಕು ಉಪಾಧ್ಯಕ್ಷ ಇಮ್ರಾನ್ ಖಾನ್ ಮಾತನಾಡಿ, “ಒಂದು ಕಡೆ ಸರ್ಕಾರ ಶಾಲೆಗಳನ್ನು ಉಳಿಸುವ ಮಾತುಗಳನ್ನಾಡುತ್ತಾರೆ. ಕೋಟಿ ಕೋಟಿ ಅನುದಾನ ಘೋಷಿಸಲಾಗುತ್ತದೆ. ಆದರೆ ಹೊನ್ನಾಪುರ ಶಾಲೆಯಂತಹ ಕಟ್ಟಡ ಪುನರ್ ನಿರ್ಮಾಣಕ್ಕೆ ಯಾವುದೇ ಗಮನ ನೀಡುತ್ತಿಲ್ಲ” ಎಂದು ಆರೋಪಿಸಿದ್ದಾರೆ. ಈ ಶಾಲೆಗೆ ಸುಮಾರು ಎರಡು ಎಕರೆ ಜಮೀನು ಇದೆ, ಆಟದ ಮೈದಾನವೂ ಇದೆ. ಆದರೆ ನಿರ್ವಹಣೆ ಇಲ್ಲ ಎಂದು ಶಾಪಹಾಕುತ್ತಿದ್ದಾರೆ. 

ಎಸ್‌ಡಿಎಂಸಿ ಸಮಿತಿಯ ಜಿಲ್ಲಾ ಸಂಚಾಲಕರಾದ ಚಂದ್ರಶೇಖರ್ ಅವರು, “ಈ ಶಾಲೆಯಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿರುತ್ತಾರೆ. ಆದರೆ ಅಲ್ಪಸಂಖ್ಯಾತರ ಇಲಾಖೆಯಿಂದ ಕೋಟಿ ಕೋಟಿ ಅನುದಾನ ಹಂಚಲಾಗುತ್ತಿಲ್ಲ. ಪರಿಣಾಮವಾಗಿ ಆ ಹಣವೂ ಖಜಾನೆಗೆ ಹಿಂದಿರುಗುತ್ತಿದೆ. ಆ ಹಣವನ್ನು ಎಲ್ಲಿ ಬಳಕೆಯಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಒಟ್ಟಾರೆ, ಶಾಲೆಗಳ ಅಭಿವೃದ್ಧಿ ಬಗ್ಗೆ ಸರ್ಕಾರ ನೀಡುವ ಹೇಳಿಕೆಗಳು ಕೇವಲ ಮಾತುಮಾತ್ರವಾಗಿದ್ದು, ನೆಲಮಟ್ಟದಲ್ಲಿ ಯಾವುದೇ ಕೆಲಸ ನಡೆಯುತ್ತಿಲ್ಲ ಎಂಬುದು ಸತ್ಯ. ಎಸ್‌ಡಿಎಂಸಿ ಸಮಿತಿ ಗಂಭೀರವಾಗಿ ಈ ಕುರಿತು ಗಮನಹರಿಸಿ, ಈ ಶಾಲೆಗೆ ಸೂಕ್ತ ಕೊಠಡಿಗಳ ನಿರ್ಮಾಣ ಮಾಡಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದೆ. ಇಲ್ಲವಾದರೆ ಶಾಲೆಯನ್ನು ಮುಚ್ಚುವಂತೆ ಆಗ್ರಹಿಸಿದ್ದಾರೆ.

School neglect in minister's home constituency

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close