SUDDILIVE || CHAMARAJNAGARA
ರಸ್ತೆ ಅಪಘಾತದಲ್ಲಿ ಅಗ್ನಿವೀರ್ ಯೋಧ ಸ್ಥಳದಲ್ಲಿ ಸಾವು-Agniveer soldier dies in road accident at his native place in Shivamogga
ಎರಡು ಬೈಗುಗಳ ನಡುವೆ ಅಪಘಾತ ಸಂಭವಿಸಿ, ಅಗ್ನಿವೋಧ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಕಮರವಾಡಿ ಸಮೀಪ ಗುರುವಾರ ರಾತ್ರಿ ನಡೆದಿದೆ ಅಪಘಾತದಲ್ಲಿ ಅಗ್ನಿವೀರ್ ಯೋಧ ಪ್ರಜ್ವಲ್ ಎಂಬವರು ಮೃತರಾಗಿರುವುದಾಗಿ ಗುರುತುಹಚ್ಚಲಾಗಿದೆ.
ಪ್ರಜ್ವಲ್ ಚಾಮರಾಜನಗರದ ಸೇವಾ ಭಾರತ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಮಚಂದ್ರ ಅವರ ಪುತ್ರರಾಗಿದ್ದಾರೆ ಪಶ್ಚಿಮ ಪಶ್ಚಿಮ ಬಂಗಾಳದಲ್ಲಿ ಅಗ್ನಿವೀರ್ ಯೋಧನಾಗಿ ಪ್ರಜ್ವಲ್ ಕರ್ತವ್ಯ ನಿರ್ವಹಿಸುತ್ತಿದ್ದು ರಜೆ ಮೇಲೆ ಊರಿಗೆ ವಾಪಸ್ ಆಗಿದ್ದರು ರಾಜ ಮೇಲೆ ಊರಿಗೆ ಬಂದಿದ್ದ ಪ್ರಜ್ವಲ್ ಮೈಸೂರಿಗೆ ತೆರಳಿ, ಟಿ ನರಸೀಪುರ ಮಾರ್ಗವಾಗಿ ವಾಪಸ್ ಆಗುವಾಗ ಕಮರವಾಡಿ ಬಳಿ ಬೈಕುಗಳ ನಡುವೆ ಅಪಘಾತ ಸಂಭವಿಸಿದೆ ಅಪಘಾತದಲ್ಲಿ ಪ್ರಜ್ವಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಪ್ರಜ್ವಲ್ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಿಮ್ಸ್ ಗೆ ರವಾನೆ ಮಾಡಲಾಗಿದೆ.
ಪ್ರಜ್ವಲ್ ಸಾಗರ ತಾಲೂಕು ಮುಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಜಗಳಮನೆ ಮೂಲತಃ ನಿವಾಸಿಯಾಗಿದ್ದಾರೆ ಅವರ ತಂದೆ ಚಾಮರಾಜನಗರದ ಸೇವಾ ಭಾರತಿ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು ಅವನು ನೋಡಲು ಹೋದ ಪ್ರಜ್ವಲ್ ಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
Agniveer soldier dies in road accident

