ad

ನಶಮುಕ್ತ ಕರ್ನಾಟಕಕ್ಕಾಗಿ ಆ.12 ರಂದು ಮೈಸೂರು ಚಲೋ-Mysore Chalo on August 12th for a free intoxication Karnataka

 SUDDILIVE || SHIVAMOGGA

ನಶಮುಕ್ತ ಕರ್ನಾಟಕಕ್ಕಾಗಿ ಆ.12 ರಂದು ಮೈಸೂರು ಚಲೋ-Mysore Chalo on August 12th for a free intoxication Karnataka

Mysor, chalo



ನಶಮುಕ್ತ ಕರ್ನಾಟಕಕ್ಕಾಗಿ ಅಖಿಲ ಭಾರತ ಭಾರತೀಯ ವಿದ್ಯಾರ್ಥಿ ಪರಿಷತ್ ಅಕ್ಟೋಬರ್ 12ರಂದು ಮೈಸೂರು ಚಲೋ ಬೃಹತ್ ವಿದ್ಯಾರ್ಥಿ ಜಲ ಜಾಗೃತಿ ರ್ಯಾಲಿ ಹಾಗೂ ಸಾರ್ವಜನಿಕ ಸಭೆಯನ್ನು ಆಯೋಗಿಸಿದೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಾದಕ ವ್ಯಸನ ಮತ್ತು ಡ್ರಗ್ ಜಲದ ಕೇಂದ್ರವಾಗಿ ಮಾರ್ಪಡಿ ಮಾರ್ಪಟ್ಟಗಿರುವುದು ಮಹಾರಾಷ್ಟ್ರ ಪೊಲೀಸರು ಮೈಸೂರಿನಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಡ್ರಗ್ಸ್ ತಯಾರಿಕಾ ಘಟಕವನ್ನು ಪತ್ತೆ ಹಚ್ಚಿದ್ದಾರೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಕಾನೂನು ವ್ಯವಸ್ಥೆ ಮತ್ತು ಗುಪ್ತಚಾರ ಇಲಾಖೆ ಕಾರ್ಯ ಕ್ಷಮತೆಯ ಮೇಲೆ ಗಂಭೀರ ಪ್ರಶ್ನೆಗಳು ಹುಟ್ಟು ಹಾಕುವಂತೆ ಮಾಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ಎಬಿವಿಪಿಯ ವಿಭಾಗ ಸಂಚಾಲಕ ರವಿ ಇರೋಜಿ, ಆರೋಪಿಸಿದರು.

ಈ ವೈಫಲ್ಯವನ್ನು ಖಂಡಿಸಿ ಮತ್ತು ಮೈಸೂರು ಹಾಗೂ ಕರ್ನಾಟಕ ರಾಜ್ಯವನ್ನು ಮಾದಕ ವಸ್ತು ಮುಕ್ತ ರಾಜ್ಯವನ್ನಾಗಿ ಮಾಡುವ ಉದ್ದೇಶದಿಂದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗೋಸ್ಟ್ 12ರಂದು ಮೈಸೂರು ಚಲೋ ಚಳುವಳಿಯನ್ನು ಹಮ್ಮಿಕೊಂಡಿದೆ. ಎಂದರು.

ಮೈಸೂರಿನ ವರವಲಯದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಫ್ಯಾಕ್ಟರಿ ಕಾರ್ಯನಿರ್ವಹಿಸುತ್ತಿರುವುದು ಸ್ಥಳೀಯ ಸರ್ಕಾರ ಪೊಲೀಸ್ ಇಲಾಖೆ ಮತ್ತು ಗುಪ್ತಚರ ಸಂಸ್ಥೆಗಳಿಗೆ ಇದರ ಬಗ್ಗೆ ಅರಿವಿಲ್ಲದಿರುವುದು ಅತ್ಯಂತ ವೇಗವಾಬ್ದಾರಿಯ ಸಂಗತಿ ಆಗಿದೆ ಇದು ಕಾನೂನು ಪಾಲನಾ ವ್ಯವಸ್ಥೆಯ ಅಂತರ ವನ್ನು ಮತ್ತು ಸ್ಪಷ್ಟವಾಗಿ ಎತ್ತಿ ತೋರುತ್ತದೆ ವಿದೇಶಿ ಮತ್ತು ಹೊರರಾಜ್ಯಗಳ ಮಾಫಿಯಾ ಗಳು ನಮ್ಮ ಸಾಂಸ್ಕೃತಿಕ ರಾಜಧಾನಿಯಲ್ಲಿ ಡ್ರಗ್ಸ್ ಉತ್ಪಾದನಾ ಮತ್ತು ಮಾರಾಟ ಮಾಡುತ್ತಿದ್ದರು ರಾಜ್ಯದ ಭದ್ರತಾ ಸಂಸ್ಥೆಗಳು ಕಣ್ಮುಚ್ಚಿ ಕುಳಿತಿವೆ ಈ ಘಟನೆ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಸಮರ್ಥ ನೆಯನ್ನು ಸಂಶಯದಲ್ಲಿ ಇಟ್ಟಿದೆ ಎಂದು ದೂರಿದರು.

ಮೈಸೂರಿನಲ್ಲಿ ಪತ್ತೆಯಾದ ಡ್ರಗ್ಸ್ ಫ್ಯಾಕ್ಟರಿ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು ಕಾನೂನು ಸುವ್ಯವಸ್ಥೆ ಮತ್ತು ಗುಪ್ತಚರ ಇಲಾಖೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. NDPS ಮತ್ತು ಕೋಪ್ಟಾ ಕಾಯ್ದೆಗಳನ್ನ ಬಲಪಡಿಸುವಲ್ಲಿ ಪ್ರಮುಖ ತಿದ್ದುಪಡಿಗಳನ್ನು ಮಾಡುವ ಮೂಲಕ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. 

ಡ್ರಗ್ಸ್ ಮಾಫಿಯವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಮಾದಕ ವಚನಗಳ ಪುನರ್ವಸತಿ ಕೇಂದ್ರಗಳನ್ನು ಹೆಚ್ಚಿಸಬೇಕು ಮತ್ತು ಯುವಕರಲ್ಲಿ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆಯು ಶಾಲಾ-ಕಾಲೇಜು ಹಾಗೂ ವಿದ್ಯಾರ್ಥಿ ಸಂಘಟನೆಗಳ ನೆರವಿನಿಂದ ನಿರಂತರ ಅಭಿಯಾನವನ್ನು ನಡೆಸಬೇಕು. ಸಿವಿಲ್ ಠಾಣೆಗಳಲ್ಲಿ ದಾಖಲಾಗುವ ಡ್ರಗ್ ಪ್ರಕರಣಗಳ ಮೇಲ್ವಿಚಾರಣೆಗೆ ಸರ್ಕಾರ ರಚಿಸಿರುವ ತಂಡವು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಂಪೂರ್ಣ ಸ್ವತಂತ್ರವನ್ನು ನೀಡಬೇಕು ಹಾಗೂ ಟಾಸ್ಕ್ ಕೋರ್ಸ್ ರಚನೆಯ ಉದ್ದೇಶದ ಸಫಲತೆಯನ್ನು ಖಚಿತ ಪಡಿಸಿಕೊಳ್ಳಬೇಕು ಎಂದು ಚಳುವಳಿಯಲ್ಲಿ ಒತ್ತಾಯಿಸಲಾಗುವುದು ಎಂದು ಅವರು ತಿಳಿಸಿದರು.

Mysore Chalo on August 12th for a free intoxication Karnataka

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close