ad

ಪೋಷಕರಿಲ್ಲದೆ ಬಳಲುತ್ತಿದ್ದ ಮಕ್ಕಳನ್ನು ರಕ್ಷಿಸಿದ ಪೊಲೀಸರು- Police rescued children

 SUDDILIVE || SHIVAMOGGA

ಪೋಷಕರಿಲ್ಲದೆ ಬಳಲುತ್ತಿದ್ದ ಮಕ್ಕಳನ್ನು ರಕ್ಷಿಸಿದ ಪೊಲೀಸರು-Police rescued children who were suffering without parents

Police rescue


ಭದ್ರಾವತಿಯ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಮನೆಗೆ ಪೊಲೀಸ ಅಭಿಯಾನ ನಡೆಯುತ್ತಿದ್ದ ವೇಳೆ ಪೋಷಕರಿಲ್ಲದೆ ಬಳಲುತ್ತಿದ್ದ ಇಬ್ಬರೂ ಹೆಣ್ಣು ಮಕ್ಕಳನ್ನು ರಕ್ಷಿಸಿರುವ ಘಟನೆ ವರದಿಯಾಗಿದೆ

ಹೊಹೊಳೆ ಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಮುಸ್ಲಿಂ ಕ್ಯಾಂಪ್ ಗ್ರಾಮದಲ್ಲಿ ಮನೆಮನೆಗೆ ಪೊಲೀಸ್ ಅಭಿಯಾನದಡಿ ಕರ್ತವ್ಯದಲ್ಲಿದ್ದ ಆನಂದ್ ಅವರಿಗೆ ಒಂಬತ್ತು ವರ್ಷದ ಹಾಗೂ ಮೂರು ವರ್ಷದ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳು ಪೋಷಕರಿಲ್ಲದೆ ಇದ್ದಿದ್ದು ಗಮನಕ್ಕೆ ಬಂದಿದೆ.

ಮಕ್ಕಳ ತಂದೆ ಹಾಗೂ ತಾಯಿ ಇಬ್ಬರು ಒಂದು ವರ್ಷದ ಹಿಂದೆ ಮರಣ ಹೊಂದಿದ್ದು ಪೋಷಕರಿಲ್ಲದೆ ಬಳಲುತ್ತಿರುವುದು ತಿಳಿದು ಬಂದಿದೆ ಇವರನ್ನು ತಕ್ಷಣವೇ ಭದ್ರಾವತಿಯ ಡಾನ್ ಬೋಸ್ಕೊ ಸಂಸ್ಥೆಯ ಜಿಲ್ಲಾ ಸಂಯೋಜಕರ ಸಂಪರ್ಕಿಸಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಇವರಿಗೆ ಕಳುಹಿಸಿಕೊಡಲಾಗಿದೆ.

Police rescued children

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close