ad

ಆಡಿಕೃತ್ತಿಕೆ ಜಾತ್ರೆ : ವಾಹನ ಸಂಚಾರ ಮಾರ್ಗ ಬದಲಾವಣೆ-Alternate road for Aadi Kruthika Jathre in Shivamogga

SUDDILIVE || SHIVAMOGGA

ಆಡಿಕೃತ್ತಿಕೆ ಜಾತ್ರೆ : ವಾಹನ ಸಂಚಾರ ಮಾರ್ಗ ಬದಲಾವಣೆ-Alternate road for Aadi Kruthika Jathre in Shivamogga

Aadi, kruthike

ಬಾಲಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಆಡಿಕೃತ್ತಿಕೆ ಹರೋಹರ ಜಾತ್ರೆಯ ಸಂದರ್ಭದಲ್ಲಿ ಬಹು ಸಂಖ್ಯೆಯಲ್ಲಿ ಭಕ್ತಾದಿಗಳು ಸೇರಲಿರುವುದರಿಂದ ಸಾರ್ವಜನಿಕರಿಗೆ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ಈ ಕೆಳಕಂಡಂತೆ ವಾಹನಗಳ ಸಂಚಾರ ನಿಷೇಧ-ಮಾರ್ಗ ಬದಲಾವಣೆ ಮಾಡಿ ತಾತ್ಕಾಲಿಕವಾಗಿ ಅಧಿಸೂಚನೆ ಹೊರಡಿಸಿ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಆದೇಶಿಸಿದ್ದಾರೆ.

 ಸಾರ್ವಜನಿಕ ಹಿತದೃಷ್ಠಿಯಿಂದ ಹಾಗೂ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ಮೋಟಾರು ವಾಹನ ಕಾಯ್ದೆ 1988 ಕಲಂ 116ರ ಅನ್ವಯ ದಿನಾಂಕ: 16.08.2025 ರಂದು ಬೆಳಿಗ್ಗೆ 6.00 ಗಂಟೆಯಿAದ ರಾತ್ರಿ 10.00 ಗಂಟೆವರೆಗೆ ತಾತ್ಕಾಲಿಕವಾಗಿ ವಾಹನಗಳ ಸಂಚಾರ ನಿಷೇಧ ಹಾಗೂ ಮಾರ್ಗ ಬದಲಾವಣೆ ಮಾಡಲಾಗಿದೆ.

ವಾಹನಗಳ ಮಾರ್ಗ ಬದಲಾವಣೆಯ ವಿವರ:

ಬೆಂಗಳೂರು, ಭದ್ರಾವತಿ ಎನ್.ಆರ್.ಪುರ ಕಡೆಯಿಂದ ಬರುವ ಎಲ್ಲಾ ಭಾರೀ ವಾಹನ ಮತ್ತು ಎಲ್ಲಾ ಬಸ್‌ಗಳು ಮತ್ತು ಸಿಟಿ ಬಸ್‌ಗಳು ಹಾಗೂ ಕಾರು ವಾಹನಗಳು ಎಂ ಆರ್ ಎಸ್ ಸರ್ಕಲ್ ನಿಂದ ಬೈಪಾಸ್ ರಸ್ತೆ ಮುಖಾಂತರ ಹೋಗುವುದು.

ಶಿವಮೊಗ್ಗ ನಗರದಿಂದ ಬೆಂಗಳೂರು, ಭದ್ರಾವತಿ, ಚಿತ್ರದುರ್ಗ, ಹೊಳೆಹೊನ್ನೂರು ಹೋಗುವ ಎಲ್ಲ ಭಾರೀ ವಾಹನ ಮತ್ತು ಎಲ್ಲಾ ಬಸ್‌ಗಳು ಮತ್ತು ಸಿಟಿ ಬಸ್‌ಗಳು ಹಾಗೂ ಕಾರು ವಾಹನಗಳು ಬೈಪಾಸ್ ರಸ್ತೆ ಎಂ ಆರ್ ಎಸ್ ಸರ್ಕಲ್ ಮುಖಾಂತರ ಹೋಗುವುದು.

ಚಿತ್ರದುರ್ಗ ಹೊಳೆಹೊನ್ನೂರುನಿಂದ ಶಿವಮೊಗ್ಗ ನಗರಕ್ಕೆ ಒಳ ಬರುವ ಮತ್ತು ಹೊರ ಹೋಗುವ ಎಲ್ಲಾ ಭಾರೀ ವಾಹನ ಮತ್ತು ಬಸ್‌ಗಳು ಭದ್ರಾವತಿ ಮಾರ್ಗವಾಗಿ ಬೈಪಾಸ್ ರಸ್ತೆ ಮಾರ್ಗವಾಗಿ ಶಿವಮೊಗ್ಗ ನಗರಕ್ಕೆ ಒಳಬರುವುದು ಮತ್ತು ಹೊರಹೋಗುವುದು.

ಚಿತ್ರದುರ್ಗ ಹೊಳೆಹೊನ್ನೂರಿನಿಂದ ಬರುವ ಮತ್ತು ಹೋಗುವ ಎಲ್ಲಾ ಲಘು ವಾಹನಗಳು ಪಿಳ್ಳಂಗಿರಿ ಕ್ರಾಸ್‌ನಿಂದ ಯಲವಟ್ಟಿ ಮಾರ್ಗವಾಗಿ ಮತ್ತು ಹೊಳಬೆನವಳ್ಳಿ ತಾಂಡ ಕ್ರಾಸ್‌ನಿಂದ ಯಲವಟ್ಟಿ ಮಾರ್ಗವಾಗಿ ಮಲವಗೊಪ್ಪ ಮೂಲಕ ಬಿ.ಹೆಚ್. ರಸ್ತೆಗೆ ಸೇರಿಕೊಂಡು ಬೈಪಾನ್ ರಸ್ತೆಯ ಮಾರ್ಗವಾಗಿ ಶಿವಮೊಗ್ಗ ನಗರಕ್ಕೆ ಹೋಗುವುದು.

ಶಿವಮೊಗ್ಗ ನಗರದಿಂದ ಹೊಳೆಹೊನ್ನೂರು ಚಿತ್ರದುರ್ಗಕ್ಕೆ ಹೋಗುವ ಲಘು ವಾಹನಗಳು (ದ್ವಿಚಕ್ರ ಮತ್ತು ಕಾರು ವಾಹನಗಳು) ಬೈಪಾಸ್ ರಸ್ತೆಯ ಮಾರ್ಗವಾಗಿ ಮಲವಗೊಪ್ಪದ ಯಲವಟ್ಟಿ ಕ್ರಾಸ್‌ನಿಂದ ಯಲವಟ್ಟಿ ಮಾರ್ಗವಾಗಿ ಪಿಳ್ಳಂಗಿರಿ ಕ್ರಾಸ್ ಮೂಲಕ ಹೊಳೆಹೊನ್ನೂರು ಚಿತ್ರದುರ್ಗಕ್ಕೆ ಹೋಗುವುದು.

ಹರಿಹರ ಹೊನ್ನಾಳಿಯಿಂದ ಬರುವ ಎಲ್ಲಾ ಭಾರೀ ವಾಹನ ಎಲ್ಲಾ ಬಸ್‌ಗಳು ಸಂಗೊಳ್ಳಿ ರಾಯಣ್ಣ ಸರ್ಕಲ್ ಕೆ.ಇ.ಬಿ ಸರ್ಕಲ್ ಉಷಾ ನರ್ಸಿಂಗ್ ಹೋಂ ಸರ್ಕಲ್, 100 ಅಡಿ ರಸ್ತೆ ವಿನೋಬನಗರ ಮಾರ್ಗವಾಗಿ ಹೋಗುವುದು.

ಹೊಳೆಹೊನ್ನೂರು ಸರ್ಕಲ್‌ನಿಂದ ಗುರುಪುರದ ಯಲವಟ್ಟಿ ಕ್ರಾಸ್‌ವರೆಗೆ ಸಾರ್ವಜನಿಕರ ವಾಹನಗಳು ಓಡಾಡದಂತೆ ಸಂಚಾರ ನಿಷೇಧ ಮಾಡಲಾಗಿದೆ.

ಈ ಎಲ್ಲಾ ಮಾರ್ಗ ಬದಲಾವಣೆಗಳು ಪೊಲೀಸ್ ವಾಹನಗಳು, ಅತಿಗಣ್ಯ ವ್ಯಕ್ತಿಗಳ ವಾಹನಗಳು ಆಂಬುಲೆನ್ಸ್ ಹಾಗೂ ಮೂಲಭೂತ ಸೌಕರ್ಯ ಒದಗಿಸುವ ವಾಹನಗಳನ್ನು ಅನುಕೂಲಕ್ಕೆ ತಕ್ಕಂತೆ ಹೊರತುಪಡಿಸಿರುತ್ತದೆ ಎಂದು ತಿಳಿಸಿದ್ದಾರೆ.

Alternate road for Aadi Kruthika Jathre in Shivamogga

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close