ad

ಮತಗಳ್ಳತನ ಕಾಂಗ್ರೆಸ್ ಗೆ ಹೊಸದಲ್ಲ ಎಂದ ಆರಗ-Araga says vote rigging is not new to Congress

 SUDDILIVE || SHIVAMOGGA

ಮತಗಳ್ಳತನ ಕಾಂಗ್ರೆಸ್ ಗೆ ಹೊಸದಲ್ಲ ಎಂದ ಆರಗ-Araga says vote rigging is not new to Congress



ಮತಗಳ ತನಕ ಕಾಂಗ್ರೆಸ್ಸಿಗೆ ಹೊಸದೇನಲ್ಲ ಹಿಂದಿನಿಂದಲೂ ಗೊತ್ತಿದೆ ಈ ಹಿಂದೆ ಇಂದಿರಾ ಗಾಂಧಿಯವರು ರಾಜ ನಾರಾಯಣ ವಿರುದ್ಧ ಚಿಕಮಂಗಳೂರಲ್ಲಿ ಗೆದ್ದಿದ್ದು ಮತಗಟ್ಟೆತನದಿಂದಲೇ ಎಂದು ಮಾಜಿ ಸಚಿವ ಆರೋಗ್ಯ ಕೇಂದ್ರ ಆರೋಪಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೈಕೋರ್ಟ್ ಇಂದ್ರ ಗಾಂಧಿ ಅವರ ಚುನಾವಣೆ ಆಯ್ಕೆಯನ್ನು ರದ್ದುಗೊಳಿಸಿತ್ತು ಸುಪ್ರೀಂಕೋರ್ಟಿಗೆ ಹೋದರು ಸುಪ್ರೀಂಕೋರ್ಟ್ ಸಹ ಹೈಕೋರ್ಟಿನ ನ್ಯಾಯವನ್ನು ಎತ್ತಿ ಹಿಡಿದಿತ್ತು. ಇದನ್ನ ರಾಹುಲ್ ಅರ್ಥ ಮಾಡಿಕೊಳ್ಳಬೇಕು. ಮತ ಮತಗಳ್ಳತನ ಕಾಂಗ್ರೆಸ್ಸಿಗೆ ಇರುವ ಇತಿಹಾಸ ಎಂದು ದೂರಿದರು.

ಈ ಘಟನೆ ನಡೆದು 50 ವರ್ಷ ನಡೆದಿದ್ದು ಈ ಘಟನೆ ಯನ್ನು ಸಾರ್ವಜನಿಕರು ಮರೆತಿದ್ದಾರೆ. ಪ್ರಜಾಪ್ರಭುತ್ವದ ಕತ್ತನ್ನ ಕತ್ತರಿಸಿದ್ದು ಕಾಂಗ್ರೆಸ್ ಎಂದ ಮಾಜಿ ಸಚಿವರು. ಕಾಙಗ್ರೆಸ್ ನ ಬಿಎಲ್ ಒಗಳಿದ್ದಾಗ ಏನು ಮಾಡಿದ್ದರು? ಚುನಾವಣೆ ನಡೆದು ಮೂರು ತಿಂಗಳ ನಂತರ ಆಕ್ಷಪಣೆಗೆ ಅವಕಾಶವಿದೆ. ಈಗಲೂ ಆಯೋಗ ನ್ಯಾಯಾಲಯಕ್ಕೆ ಅಫಿಡೆವಿಟ್ ಹಾಕಿಕೊಳ್ಳಿ ಎನ್ನುತ್ತಾರೆ. ಜನರ ಕಿವಿಗೆ ಹೂ ವಿಡಿಸುವ ರೀತಿಯಲ್ಲಿ ಕಾಂಗ್ರೆಸ್ ನಡೆದುಕೊಳ್ಳುತ್ತಿದೆ.

ಕನ್ನಡದ ಮಹಾದೇವಪುರದಲ್ಲಿ ಮತಗಟ್ಟೆನ ನಡೆದಿದೆ ಎಂದರೆ ಯಾರ ಸರ್ಕಾರವಿತ್ತು ಮತದಾರ ಪಟ್ಟಿ ಮಾಡುವಾಗ ಇವರ ಸರ್ಕಾರವೇ ಇತ್ತಲ್ಲ ಸಿದ್ದರಾಮಯ್ಯ ಸರ್ಕಾರದ ವಿರುದ್ಧವೇ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ ಜನರಿಗೆ ಇದನ್ನು ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಸಿಎಂ ಸಿದ್ದರಾಮಯ್ಯನವರು ಪ್ರಧಾನಿ ಮೋದಿ ಅವರ ಸರ್ಕಾರವನ್ನು ವಿಸರ್ಜನೆ ಗೊಳಿಸಬೇಕು ಎಂದು ಆಗ್ರಹಿಸಿದ್ದು ಇದಕ್ಕೆ ಪ್ರತಿಕ್ರಿಯೆ ನೀಡಿದ ಆರೋಗ್ಯ ಕೇಂದ್ರ ನಿಜವಾಗಿಯೂ ಸರ್ಕಾರವನ್ನು ವಿಸರ್ಜನೆ ಗೊಳಿಸಬೇಕಾಗಿರುವುದು, ಸಿದ್ದರಾಮಯ್ಯನವರ ಸರ್ಕಾರದ ಪ್ರಧಾನಿ ಮೋದಿ ಅವರದಲ್ಲ ಎಂದು ಸ್ಪಷ್ಟಪಡಿಸಿದರು.

ನಿಮ್ಮ ಅಧಿಕಾರಿಗಳು ನಿಮ್ಮ ನಿಯಂತ್ರಣದಲ್ಲಿ ಇರ್ಲಿಲ್ವಾ ಯಾವ ಡಿಸಿ ಇದ್ದರೂ ಯಾವ ಆಫೀಷಿಯಲ್ ಇದ್ದರು ಎಲ್ಲವನ್ನು ತೆಗೆಯಿರಿ ನ್ಯಾಯಾಲಯಕ್ಕೆ ಅಫಿಡೆವಿಟ್ ಹಾಕಿಕೊಳ್ಳಿ ಎಂದು ಸಲಹೆ ನೀಡಿದರು. 

ಶಾರೀಕ್ ಪ್ರಕರಣ

ಮಂಗಳೂರಿನಲ್ಲಿ ಶಾರೀಕ್ ಕುಕ್ಕರ್ ಬಾಂಬ್ ಸ್ಪೋಟದ ವೇಳೆ ಧರ್ಮಸ್ಥಳವನ್ನ ಗುರಿಯಾಗಿಸಿಕೊಂಡಿದ್ದ ಎಂಬ ಮಾಹಿತಿಹೊರಬಿದ್ದಿರುವ ಬಗ್ಗೆಪ್ರತಿಕ್ರಿಯೆ ನೀಡಿದ ಆರಗ ಜ್ಞಾನೇಂದ್ರ, ಧರ್ಮಸ್ಥಳ ದೇವಸ್ಥಾನವನ್ನೇ ಬ್ಲಾಸ್ಟ್ ಮಾಡುವ ಹುನ್ನಾರ ನಡೆದಿತ್ತು. ಎಲ್ಲದರ ಹಿಂದೆ ಭಯೋತ್ಪಾದಕರ ಜಾಲವಿದೆ. ಇದಕ್ಕೆ ನಗರ ನಕ್ಸಲರ ಕಥೆಕಟ್ಟಲು ಹೊರಟಿದ್ದಾರೆ. ಸರ್ಕಾರ ಇದನ್ನ ಜಾಗೃತಿಯಾಗಿ ನಡೆದುಕೊಳ್ಳಬೇಕು ಎಂದರು.

ಭಯೋತ್ಪಾದನ ಚಟುವಟಿಕೆಯ ಜೊತೆಗೆ ಧರ್ಮಸ್ಥಳದ ಪ್ರಕರಣಕ್ಕೆ ಫಂಡಿಂಗ್ ಆಗುತ್ತಿದೆ. ಯಾರು ಹಣ ನೀಡಿದ್ದಾರೆ ಇದರಹಿಂದ ಮಹದೊಡ್ಡ ಜಾಲವೇ ಇದೆ. ಇದನ್ನ ಖಂಡಿಸುತ್ತೇಬೆ? ಮುಸುಕುಧಾರಿಯ ಹಿನ್ನಲೆ ಏನು ಎಂಬುದು ಗೊತ್ತಾಗಬೇಕಿದೆ. ಕೊಲೆ ಆಗಿದೆ ಬೇದಿಸುವ ಉದ್ದೇಶಕ್ಕಿಂತ ಧರ್ಮಾಧಿಕಾರಿಗಳನ್ನ ಟಾರ್ಗೆಟ್ ಮಾಡಿಕೊಂಡು ನಡೆಯುತ್ತಿರುವ ತನಿಖೆ ಇದಾಗಿದೆ ಎಂದು ದೂರಿದರು. 

ತನಿಖೆ ಯಾರಿದ್ದೋ ನಿರ್ದೇಶನದಲ್ಲಿ ನಡೆಯುತ್ತಿದೆ. ಯೂಟ್ಯೂಬರ್ ಗಳು ಮಾಡಬಾರದ್ದನ್ನ ಮಾಡಿದ್ದಾರೆ. ಧರ್ಮಸ್ಥಳವನ್ನ ಅವಹೇಳನ ರೀತಿಯಲ್ಲಿ ವರದಿ ಮಾಡಲಾಗುತ್ತಿದೆ. ಅದಕ್ಕಾಗಿ ಶಾಂತಭಂಗವಾಗುತ್ತಿದೆ. ಮಾಧ್ಯಮಗಳ ಮೇಲೆ ಹಲ್ಲೆಯಾಗಿದೆ ಅದರ ಮೇಲೆ ತನಿಖೆ ನಡೆಯಬೇಕು. ಸರಿಯಾದ ತನಿಖೆ ಬರಬೇಕು. ದೋಷ ಮುಕ್ತವಾಗಲಿ ಎಂದು ಆಶಿಸಿದ್ದಾರೆ. 

Araga says vote rigging is not new to Congress


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close